Oyorooms IN

Sunday, 20th August, 2017 10:49 PM

BREAKING NEWS

ಉತ್ತರ ಕನ್ನಡ

ಇದು ಕಾಗೇರಿ ತವರೂರು, ಕಾಗೆ ಹಾರಿಸುತ್ತಿದ್ದಾರೆಯೇ ಶಾಸಕರು?

ಬಾಯಲ್ಲಿ ಮಾತ್ರ ಆಶ್ವಾಸನೆ, ಅಭಿವೃದ್ಧಿಯಲ್ಲಿ ಸೊನ್ನೆ..!

ಕಾಗೇರಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು
ಕಾಗೇರಿಯಲ್ಲಿ ಆಗಿರುವ ಅಭಿವೃದ್ಧಿ ಕೆಲಸಗಳು

ಉತ್ತರ ಕನ್ನಡ: ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯ ತವರು ಪ್ರದೇಶದಲ್ಲಿಯೇ ನಮ್ಮ ಪ್ರದೇಶದ ಶಾಸಕ ಯಾರು? ಅವರು ಹೇಗಿದ್ದಾರೆ? ಎಂದು ಪ್ರಶ್ನಿಸುತ್ತಿದ್ದಾರೆ ನಾಗರಿಕರು. ಏಕೆಂದರೆ ಕುಳವೆ ಗ್ರಾಮಪಂಚಾಯತಿ ವ್ಯಾಪ್ತಿಗೆ ಸೇರುವ ಬರೂರು, ಕಾಗೇರಿ, ನೇಗಾರ, ಕೆಂಚಗದ್ದೆ, ಬರಗಾರ, ಗಡಿಹಳ್ಳಿ, ಕಲ್ಲಾಪುರ, ತೆರಕನಳ್ಳಿ, ಹೊಸಬಾಳೆ, ಹಲಸಿನ ಕೈ, ಉಗ್ರೇಮನೆ ಹೀಗೆ ಬಹಳಷ್ಟು ಹಳ್ಳಿಗಳು ಇಂದು ಕುಗ್ರಾಮವಾಗಿದೆ.

ಈ ಗ್ರಾಮಗಳಲ್ಲಿ ಸರಿಯಾದ ರೋಡಿಲ್ಲ. ಇರೋ ರೋಡಿಗೆ ಬಹಳ ವರ್ಷಗಳಿಂದ ಟಾರಿಲ್ಲ, ಸಾರಿಗೆ ವ್ಯವಸ್ಥೆ ಇಲ್ಲ, ಮಕ್ಕಳಿಗೆ ಅಂಗನವಾಡಿಯಿಲ್ಲ, ಬೀದೀ ದೀಪವಂತೂ ಕಂಡೇ ಇಲ್ಲ, ಆಸ್ಪತ್ರೆ ಮೊದಲೇ ಇಲ್ಲ. ಎಲ್ಲಾ ಹೋಗ್ಲಿ ಅಡ್ಜಸ್ಟ್ ಮಾಡ್ಕೊಳೋಣ ಅಂದ್ರೆ ಕೊನೆ ಪಕ್ಷ ಕುಡಿಯಲೂ ಸರಿಯಾದ ನೀರಿಲ್ಲ. ಇದು ಮಾಜಿ ಸಚಿವರೂ, ಹಾಲೀ ಶಾಸಕರೂ ಆದ ನಮ್ಮ ವಿಶ್ವೇಶ್ವರ ಹೆಗಡೆ ಕಾಗೇರಿಯವರ ತವರು ಪ್ರದೇಶ ಅಂದ್ರೆ ನಂಬಲೇ ಬೇಕು.

ಇವೆಲ್ಲಾ ಪ್ರದೇಶಗಳೂ ಯಾವುದೋ ಒಂದು ಮೂಲೆಯಲ್ಲೋ, ದಟ್ಟಾರಣ್ಯದ ನಡುವಲ್ಲೋ ಇರುವ ಪ್ರದೇಶವೇನಲ್ಲ, ಶಿರಸಿಯಿಂದ ಕೂಗಳತೆ ದೂರದ ಸ್ಥಳಗಳವು. ಶಿರಸಿ ಬನವಾಸಿ ರಸ್ತೆಯ ಗುಂಡಿಗಳ ಮಧ್ಯೆ ಬೀಳುತ್ತಾ, ಏಳುತ್ತಾ, ಗಾಡಿಗೆ ಆಗಾಗ ರಿಪೇರಿ ಮಾಡಿಸುತ್ತಾ ಅನಿವಾರ್ಯತೆಯಲ್ಲಿ ಸಂಚರಿಸುವ ಅಭ್ಯಾಸ ಮಾಡಿಕೊಂಡಿರುವ ಜನರು, ರಸ್ತೆ ರಿಪೇರಿಗೆ ಮನವಿ ಸಲ್ಲಿಸಿ ಸುಸ್ತಾಗಿದ್ದಾರೆ. ನಮ್ಮ ಜನಪ್ರತಿನಿಧಿಗಳು ಮಾತ್ರ ಆಶ್ವಾಸನೆ ಕೊಡುತ್ತಾ, ಈಗ ಬರುತ್ತೆ, ಆಗ ಬರುತ್ತೆ ಎಂದು ಆಕಾಶ ತೋರಿಸುತ್ತಾ ಬಹಳ ವರ್ಷಗಳಿಂದ ಮೂಗಿಗೆ ತುಪ್ಪ ಸವರುತ್ತಾ ಕಾಲ ಕಳೆಯುತ್ತಿದ್ದಾರೆ. ಖ್ಯಾತ ಬನವಾಸಿ ಶಿರಸಿ ರಸ್ತೆಯೇ ಹೀಗೆ..! ಇನ್ನು ಹಳ್ಳಿಗಳ ಒಳಗಿನ ಸ್ಥಿತಿ ಹೇಗಿರಬಹುದೆಂದು ಮತ್ತೆ ವಿವರಿಸಬೇಕಿಲ್ಲ ಅಲ್ವಾ?

KAGERI_RASTHE

ಮೂಲ ಸೌಲಭ್ಯವೇ ಇಲ್ಲದ ಈ ಪ್ರದೇಶ ಒಂದು ಮಾದರಿ ಗ್ರಾಮ. ಯಾವುದಕ್ಕೆ ಮಾದರಿ? ಸುಮಾರು 5000ಕ್ಕೂ ಹೆಚ್ಚು ಜನರಿರುವ ಪ್ರದೇಶಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರವೇ ಇಲ್ಲ. ಜನಪ್ರತಿನಿಧಿಗಳಿಂದ ಅಪ್ಪಿತಪ್ಪಿ ಸಿಕ್ಕ ಆಶ್ವಾಸನೆಗಳು ಇದ್ದರೂ ಕಾರ್ಯರೂಪಕ್ಕೆ ಮಾತ್ರ ಬಂದದ್ದೇ ಇಲ್ಲ. ಗಡಿಹಳ್ಳಿಯಲ್ಲಿ ಅಂಗನವಾಡಿ ಕಟ್ಟಡ ಕಟ್ಟಿಸುವ ಕುರಿತೂ ಮನವಿ ಸಲ್ಲಿಸಿಯಾಗಿದೆ. ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತೂ ಮನವಿ ಕೊಟ್ಟಾಗಿದೆ. ಬಿ.ಎಸ್.ಎನ್.ಎಲ್ ಟವರ್ ಒದಗಿಸುವ ಕುರಿತೂ ಕೇಳಿಕೊಂಡಾಗಿದೆ. ನೀರಿನ ಬವಣೆಯ ಬಗ್ಗೆಯೂ ಹೇಳಿಯಾಗಿದೆ ಆದರೆ ಇದ್ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. “ ಮಾಡೋಣ, ಹಂತದಲ್ಲಿದೆ, ಮುಂದಾಗುತ್ತೆ” ಎನ್ನುವ ಮಾತುಗಳೇ ಬಹಳಷ್ಟು ವರ್ಷಗಳಿಂದ ಜನರಿಗೆ ಸಿಗುತ್ತಿರುವ ಉತ್ತರವಾಗಿದೆ.

ಶಿರಸಿ ಹಾಗೂ ಯಲ್ಲಾಪುರ ಕ್ಷೇತ್ರದ ಗಡಿಭಾಗವಾಗಿದ್ದರಿಂದ ತಮಗೆ ಸರಿಯಾದ ಸವಲತ್ತುಗಳು ದೊರೆಯುತ್ತಿಲ್ಲವೋ ಹೇಗೆ? ಗಡಿಪ್ರದೇಶವೆಂದು ಇಬ್ಬದಿಯ ಶಾಸಕರೂ ನಿರ್ಲಕ್ಷಿಸಿದ್ದಾರೆಯೇ? ಕಡೂರಿನ ಶಾಸಕರೇ ಶಿರಸಿಯಲ್ಲಿನ ಸಮಸ್ಯೆಗಳಿಗೆ ಧ್ವನಿಯಾಗುತ್ತಿರುವಾಗ ರಾಜಕೀಯವಾಗಿ ಶಿರಸಿಗೆ ಸೇರುವ ತಮ್ಮೂರನ್ನು ಯಾಕೆ ಇಲ್ಲಿಯ ಶಾಸಕರು ನಿರ್ಲಕ್ಷಿಸುತ್ತಿದ್ದಾರೆಯೇ?

ಕೆಂಚಗದ್ದೆಯಲ್ಲಿ 2012-13ನೇ ಸಾಲಿನಲ್ಲಿ ಅಂಗನವಾಡಿಯೊಂದು ಕಟ್ಟಿದ್ದಾರೆ. ಕೇವಲ ಒಂದು ರೂಮು ಇರುವ ಬಿರುಕುಬಿಟ್ಟ ಗೋಡೆಯ ಹಂಚಿನ ಮನೆಯ ಅಂಗನವಾಡಿಗೆ ಬರೋಬ್ಬರಿ ನಾಲ್ಕು ಲಕ್ಷ ವೆಚ್ಚದ ಖರ್ಚು ತೋರಿಸಿದ್ದಾರೆ. ಇಲ್ಲಿನ ತೂಗುಸೇತುವೆಯೊಂದಿದೆ ಅದು ಈ ವರ್ಷದ ಮಳೆಗಾಲದಲ್ಲಿ ಬೀಳುವುದು ಪಕ್ಕಾ ಎಂದು ಗ್ರಾಮಸ್ಥರೇ ಹೇಳುತ್ತಿದ್ದಾರೆ. ಅವರ ಜೀವಕ್ಕಾಗಿ ಅವರೇ ಸೇತುವೆಯ ಬಲಪಡಿಸುವ ಅನಿವಾರ್ಯತೆ ಇದೆ. ಏಕೆಂದರೆ ಇಲ್ಲಿನ ಜನಪ್ರತಿನಿಧಿಯ ನಂಬಿಕೊಳ್ಳುವ ಬದಲು ಮನೆಯಲ್ಲಿ ತಿಥಿವಡೆಗೆ ಹಣ ಇಡುವುದು ಮೇಲು ಎನ್ನುತ್ತಾರೆ ನೊಂದ ಗ್ರಾಮಸ್ಥರು. ಈಗಾಗಲೇ ರಸ್ತೆಗಳು ಎಮ್ಮೆ ಗುಂಡಿಯಾಗಿವೆ. ಮಳೆಗಾಲದಲ್ಲಿ ಇದು ಕೆಸರು ಗದ್ದೆಯಾಗಿ ಬದಲಾಗುತ್ತದೆ.

KAGERI_ANGANAVADI

ಶಾಸಕರಂತೂ ಕೇವಲ ಓಟಿಗಾಗಿ ಅತ್ತ ಸುಳಿದವರು ನಂತರ ತಿರುಗಿಯೂ ನೋಡಿಲ್ಲವಂತೆ. ಕೇವಲ ಯಾರೂ ಹತ್ತಿರದ ಸಂಬಂಧಿಗಳ ಕಾರ್ಯಕ್ರಮಕ್ಕೆ ಮಾತ್ರ ಬರುವ ಶಾಸಕರಿಗೆ ಇಲ್ಲಿನ ಕಷ್ಟದ ಜೀವನ ಅರಿವಾಗುತ್ತಿಲ್ಲವಂತೆ. ದೀಪದ ಬುಡದಲ್ಲೇ ಕತ್ತಲೆ ಎನ್ನುವಂತೆ ತವರು ಕ್ಷೇತ್ರವನ್ನೇ ಶಾಸಕರು ನಿರ್ಲಕ್ಷಿಸಿದ್ದೇಕೆ? ಬಹಳ ವರ್ಷಗಳಿಂದ ಸತತವಾಗಿ ಆರಿಸಿ ಬರುತ್ತಿರುವ ಸ್ಥಳಿಯ ಶಾಸಕರು ಇತ್ತ ಅಭಿವೃದ್ಧಿಯನ್ನೇ ಮಾಡಿಲ್ಲ. ಇದರಿಂದ ಬೇಸತ್ತ ಸ್ಥಳಿಯರು ಕಳೆದ ಬಾರಿಯ ಚುನಾವಣೆಯಲ್ಲಿ ಇವರ ವಿರೋಧಿಗಳಿಗೆ ಮತ ಹಾಕಿದ್ದರಂತೆ. ಈ ಪ್ರದೇಶದಲ್ಲಿ ತಮಗೆ ಬಿದ್ದ ಮತಗಳ ಪ್ರಮಾಣವನ್ನು ತೆಗೆದುಕೊಂಡ ಶಾಸಕರು ತಮಗೆ ನೀವು ವೋಟ್ ಮಾಡಿಲ್ಲ ಎಂದು ಈ ಪ್ರದೇಶವನ್ನು ನಿರ್ಲಕ್ಷಿಸುತ್ತಿದ್ದಾರಂತೆ.??

ತಮ್ಮ ಸಮಸ್ಯೆಗಳ ಬಗ್ಗೆ ಎಷ್ಟೇ ಬಾರಿ ಪಂಚಾಯತ್ ಸದಸ್ಯರು, ಶಾಸಕರು, ಉಸ್ತುವಾರಿ ಸಚಿವರು ಎಲ್ಲರಿಗೂ ಮನವಿ ಸಲ್ಲಿಸಿದರೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಭರಪೂರ ಆಶ್ವಾಸನೆಯೊಂದೇ ಪ್ರತಿಫಲವಾಗಿದೆ. ಜನರ ಮೂಲ ಅವಶ್ಯಕತೆಗಳೇ ಪೂರೈಸದ ಶಾಸಕರು, ಬರೀ ಭಾಷಣಗಳನ್ನು ಮಾಡುತ್ತಾ, ಕಾರ್ಯಕ್ರಮಗಳನ್ನು ಉದ್ಘಾಟಿಸುತ್ತಾ ಇದ್ದಾರೆಯೇ ಹೊರತು ತಮ್ಮತ್ತ ಗಮನ ಹರಿಸುತ್ತಿಲ್ಲಲೆಂದು ಗ್ರಾಮಸ್ಥರು ದೂರುತ್ತಾರೆ.

 

ಉತ್ತರ ಕನ್ನಡ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...