Oyorooms IN

Wednesday, 24th May, 2017 7:55 AM

BREAKING NEWS

ಬಳ್ಳಾರಿ

ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕನ ಮೇಲೆ ಅಧಿಕಾರಿ ಹಲ್ಲೆ

BLY-JINDAL ATTACK

ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿನ ಕಾರ್ಮಿಕರಿಗೆ ಅಧಿಕಾರಿಯೊಬ್ಬ ಬಟ್ಟೆ ಬಿಚ್ಚಿಸಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಪಟ್ಟ ವೀಡಿಯೋ ಇದೀಗ ಫೇಸ್ ಬುಕ್ ಮತ್ತು ವಾಟ್ಸಪ್‌ನಲ್ಲಿ ಹರಿದಾಡುತ್ತಿದೆ ಘಟನೆ ಸಂಬಂಧ ಈ ಬಗ್ಗೆ ಇನ್ನೂ ಇಲ್ಲಿತನಕ ಯಾರು ದೂರು ದಾಖಲಿಸಿಲ್ಲ.

ಜಿಂದಾಲ್ ಉಕ್ಕು ಕಾರ್ಖಾನೆಯ ಎಸ್‍ಎಮ್‍ಎಸ್ 3 ನೇ ಘಟಕದಲ್ಲಿ ಶನಿವಾರ ಜೂನ್ 18) ಮದ್ಯಾಹ್ನ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಅಲ್ಲಿನ ಡಿಪಿಓ ಅಧಿಕಾರಿ ಆಕಾಶ್ 3 ಜನ ಕಾರ್ಮಿಕರ ಬಟ್ಟೆ ಬಿಚ್ಚಿಸಿ ಅವಾಚ್ಯ ಶಬ್ದಗಳಿಂದ ನಿಂದಿಸುತ್ತ, ಕೆಲಸ ಮಾಡದೆ ಮರೆಯಲ್ಲಿ ಮಲಗುತ್ತೀರ ಎಂದು ಕಬ್ಬಿಣದ ರಾಡು ತೆಗೆದುಕೊಂಡು ಹಲ್ಲೆ ಮಾಡಲು ಮುಂದಾಗಿರುವ ದೃಶ್ಯ ವಿಡಿಯೋ ಚಿತ್ರಣದಲ್ಲಿದೆ.

ಈ ಘಟನೆ ಆದ ಮೇಲೆ ಕಾರ್ಮಿಕರು ಅಧಿಕಾರಿ ಆಕಾಶ ವರ್ತನೆ ಬಗ್ಗೆ ಆಡಳಿತ ಮಂಡಳಿಗೆ ದೂರು ನೀಡಿದ್ದರಿಂದ ನಿನ್ನೆ ಇಡೀ ದಿನ ಕಾರ್ಮಿಕರು ದೂರು ನೀಡದಂತೆ ಮತ್ತು ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಮಾತುಕತೆ ನಡೆಸಿ ವಿವಾದವನ್ನು ಆಡಳಿತ ಮಂಡಳಿ ಬಗೆಹರಿಸಿತ್ತು.

ಆದರೆ ಇಂದು ವಿವಾದದ ವೀಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡತೊಡಗಿದ್ದು. ಜಿಂದಾಲ್ ಸಂಸ್ಥೆಯವರು ದೂರು ತೆಗೆದುಕೊಳ್ಳದಂತೆ ಪೊಲೀಸರ ಮೇಲೆ ಒತ್ತಡ ಹಾಕಿದ್ದಾರೆ.

ಕಾರ್ಮಿಕರ ಮೇಲೆ ದೌರ್ಜನ್ಯ ಮಾಡಿದ ವ್ಯಕ್ತಿ ಆಕಾಶ್ ಬಳ್ಳಾರಿಯ ಮಾಜಿ ಪತ್ರಕರ್ತ ಶ್ಯಾಮ್ ಸುಂದರ್ ಎಂಬುವವರ ಪುತ್ರ. ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಢಯ್ಯ ಅವರ ಆಪ್ತ ಸಹಾಯಕನಾಗಿ ಕೆಲಸ ಮಾಡುತ್ತಿದ್ದಾನೆ. ಇದರಿಂದ ಪ್ರಭಾವ ಬೆಳೆಸಿ ಕೇಸು ತೆಗೆದುಕೊಳ್ಳದಂತೆ ನೋಡಿಕೊಳ್ಳಲಾಗಿದೆಂದು ಆರೋಪಿಸಲಾಗುತ್ತಿದೆ, ಹಲ್ಲೆ ನಡೆಸಿದ  ಆಕಾಶ್‍ನನ್ನು ಸದ್ಯ ರಜೆ ಮೇಲೆ ಕಳುಹಿಸಲಾಗಿದೆಯಂತೆ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್ಪಿ ಚೇತನ್ ದೂರು ಕೊಟ್ಟರೆ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಬಳ್ಳಾರಿ ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...