Oyorooms IN

Friday, 26th May, 2017 4:18 AM

BREAKING NEWS

ಯಾದಗಿರಿ

ತಂದೆಯನ್ನು ಬೀದಿಪಾಲು ಮಾಡಿದ ಮಕ್ಕಳು

ಬೀದಿಗೆ ಬಿದ್ದಿರುವ ನಾಗಪ್ಪ ಭಜಂತ್ರಿ
ಬೀದಿಗೆ ಬಿದ್ದಿರುವ ನಾಗಪ್ಪ ಭಜಂತ್ರಿ

ಯಾದಗಿರಿ: ಇತ್ತಿಚೆಗಷ್ಟೇ ಪ್ರಪಂಚಾದ್ಯಂತ ಸಂಭ್ರಮದಿಂದ ಫಾದರ್ಸ್ ಡೇ ಅನ್ನು ಆಚರಿಸಲಾಗಿದೆ, ಆದ್ರೆ ಇಲ್ಲಿನ ವಯೋವೃದ್ಧ ತಂದೆಯನ್ನು ಮಕ್ಕಳು ಸಾಕಲಾಗದೇ ಮನೆಯಿಂದ ಹೊರಗಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಯಾದಗಿರಿ ತಾಲ್ಲೂಕು ಅಬ್ಬೆತುಮಕೂರಿನ ನಾಗಪ್ಪ ಭಜಂತ್ರಿ ಅವರನ್ನು ವಯೋವೃದ್ಧರಾದರೆಂದು ಮನೆಯಿಂದ ಹೊರ ಹಾಕಿದ್ದಾರೆ,  ಬಸ್ ಡಿಪೋ ಮೆಕಾನಿಕ್ ಆಗಿರುವ ಈಶಪ್ಪ ಹಾಗೂ ಕೂಲಿ ಕೆಲಸ ಮಾಡುವ ಮಲ್ಲಪ್ಪ ಎಂಬ ಇಬ್ಬರು ಗಂಡು ಮಕ್ಕಳಿದ್ದರೂ ವೃದ್ಧ ತಂದೆ ಈಗ ಅನಾಥರಾಗಿದ್ದಾರೆ.

ಮಕ್ಕಳೇ ನಿರ್ಲಕ್ಷ್ಯವಹಿಸಿದ್ರು ಅಂದ್ಮೇಲೆ ಸೊಸೆಯರು ಮಾತು ಕೇಳ್ತಾರಾ!  ಈ ವಯಸ್ಸಿನಲ್ಲಿಯೂ ನಾಗಪ್ಪ ದುಡಿದು ದಿನಸಿ ತೆಗೆದುಕೊಂಡು ಹೋಗಿ ಕೊಟ್ಟರೆ, ಸೊಸೆ ಊಟ ಬಡಿಸುತ್ತಾಳಂತೆ, ಹೆಂಡತಿ ಸತ್ತ ಮೇಲೆ ಮಕ್ಕಳನ್ನು ಜೋಪಾನ ಮಾಡಿ ಅವರಿಗೊಂದು ಬದುಕು ಕಟ್ಟಿಕೊಟ್ಟ ತಂದೆಯನ್ನೇ ಬೀದಿಗೆ ಬಿಟ್ಟಿದ್ದಾರೆ.

ಮಕ್ಕಳು ತಮ್ಮ ಸಾಕುತ್ತಿಲ್ಲ ಎಂದು ನಾಗಪ್ಪ, ಯಾದಗಿರಿಯ ಸಹಾಯಕ ಆಯುಕ್ತರ ಬಳಿ ಮನವಿ ಮಾಡಿದ್ದಕ್ಕೆ, ಹಿರಿಯ ನಾಗರಿಕರ ಸಂರಕ್ಷಣೆ ಕಾಯ್ದೆಯಡಿ ದೂರು ದಾಖಲಿಸಿ ಪ್ರತಿ ತಿಂಗಳು ಇಂತಿಷ್ಟು ಹಣ ನೀಡುವಂತೆ ಆದೇಶ ನೀಡಿದ್ದಾರೆ, ಮೊದಲೆರೆಡು ಹಣ ಕೊಟ್ಟ ಮಕ್ಕಳು ಈಗ ಅದನ್ನು ಕೊಡುತ್ತಿಲ್ಲ, ನಾಗಪ್ಪ ಹೊಟ್ಟೆ ತುಂಬಿಸಿಕೊಳ್ಳಲು ಮಠವನ್ನು ಆಶ್ರಯಿಸಿದ್ದಾರೆ.

ಯಾದಗಿರಿ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...