Oyorooms IN

Saturday, 22nd July, 2017 4:27 PM

BREAKING NEWS

ಕಥೆ

ನಿನ್ನ ನೆನಪಿನ ನಾವಿಕ ನಾನು…! ಮನದಾಳದಲ್ಲಿ ಉಳಿದ ಪ್ರೇಮ ಕಥೆ…..

ದೇವಸ್ಥಾನದಲ್ಲಿ ಸಿಕ್ಕ ಹುಡುಗಿಯೊಬ್ಬಳನ್ನು ಕಾಯುತ್ತಾ ಪರಿತಪಿಸುವ ಪ್ರೇಮಿಯೊಬ್ಬನ ತಳಮಳಗಳನ್ನು ಬರಹಗಳಲ್ಲಿ ಸೆರೆಹಿಡಿದ್ದಾರೆ ಕಥೆಗಾರ “ಶಿವಶಂಕರ್.ಪಿ.ವೀರಾಪುರ ” ಮೊದಲ ನೋಟದಲ್ಲೇ ಪ್ರೇಮವನ್ನು ಹುಟ್ಟಿಸುವ  ಕ್ಷಣವನ್ನು ಅನುಭವಿಸಿ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಣ್ಣಿಮೆಯ ಚಂದ್ರ ಅವತ್ತು ನಗುತ್ತಾ ಅರಳಿದ ತಿಳಿನೀಲಿ ಆಕಾಶದಲ್ಲಿ. ಅವನ ನಗುವಿನಿಂದ ಭೂಮಿಯ ಮೇಲೆ ಹಾಲು ಚೆಲ್ಲಿದಂತಿತ್ತು ಬೆಳದಿಂಗಳು. ದೂರದಲ್ಲೇಲ್ಲೋ ದೇವಸ್ಥಾನದ ಗುಡಿಯ ಘಂಟೆಯ ಶಬ್ಧ. ಆ ಶಬ್ಧ ಕೇಳಿದ ಮೇಲೆ ನಾನು ನಿಲ್ಲುವುದಕ್ಕಾಗದೆ ಓಡಿದೆ. ಅವತ್ತು ಶುಕ್ರವಾರ! ಪ್ರತಿ ಶುಕ್ರವಾರ ಅವಳು ಬರ್ತಾಳೆ? ಬಂದೆ ಬರ್ತಾಳೆ? ಅನ್ನೋ ಮಾತು ಮನಸ್ಸಿನಲ್ಲಿ ನಿಂತು ಕನಸ್ಸಾ ಕಾಣುತ್ತಿತ್ತು. ಅವತ್ತು ಕೂಡ ಅವಳ ಬರುವಿಕೆಗೆ ಕಾದ ಜೀವ ನನ್ನದು. ಅದಕ್ಕೆ ಅಂತಾನೇ ಆ ಗುಡಿಯ ಹತ್ತಿರ ಓಡಿ ನಿಂತೆ.

ಅಲ್ಲಿ ಸುಮಾರು ಇಪ್ಪತ್ತು ಯುವತಿಯವರ ಗುಂಪು. ನನ್ನ ಕಣ್ಣುಗಳು ಮಾತ್ರ ಲಂಗ ಧಾವಣಿಯ ಚೆಲುವೆಯನ್ನೇ ಹುಡುಕಾಡುತ್ತಿದ್ದವು. ಯಾರೋ ಅವಳು ಚೆಂದುಳ್ಳಿ ಚೆಲುವೆ! ಅವತ್ತೇ ನಾನ್ಯಾಕೆ ದೇವಸ್ಥಾನಕ್ಕೆ ಬಂದೆ? ಯಾವತ್ತು ಬರದವನು? ಖಾಲಿಯಾಗಿದ್ದ ಹಣತೆಯಲ್ಲಿ ಹತ್ತಿಯಿಂದ ಸುತ್ತಿದ್ದ ಬತ್ತಿಯನ್ನು ತುಪ್ಪದ ಹಣತೆಯಲ್ಲಿ ಹಾಕಿ. ದೀಪವನ್ನು ಗರ್ಭಗುಡಿಯಾ ಮುಂದೆ ಹಚ್ಚಿದ್ದಾಗ ತುಪ್ಪದಿಂದ ತುಂಬಿದ ದೀಪವು ನಿಧಾನವಾಗಿ ಬೆಳಕು ಚೆಲ್ಲುತ್ತಾ ಇಡೀ ಗರ್ಭಗುಡಿಯನ್ನೇ ಅವರಿಸಿಕೊಂಡಿತ್ತು.

ದೀಪ ಹಚ್ಚಿದ ಕೈಗಳೆರಡರಲ್ಲೂ ಹಸಿರಿನ ಗಾಜಿನ ಬಳೆಗಳ ಸದ್ದು. ಹಂಸದಂತೆ ನಡೆಯುವಾಗ ಕಾಳ್ಗೆಜ್ಜೆಯ ನಾದ. ಅಬ್ಬಬ್ಬಾ ಅವಳ ಹಣೆಯಲ್ಲಿಟ್ಟಿರುವ ಸಿಂಧೂರ ಅಂತೂ ಅವಳ ನಗುವಿಗೆ ಕಂಗೊಳಿಸುತ್ತಿತ್ತು. ತುಟಿಗಳಲ್ಲಿ ಅರಳಿದ ನಗುವಂತೂ ಕೆಸರಲ್ಲಿ ಅರಳಿದ ಕಮಲದಂತ್ತಿತ್ತು. ಅವಳನ್ನು ಇನ್ನು ಎಷ್ಟು ಅಂತ ವರ್ಣಿಸಲಿ. ಇಷ್ಟೇಲ್ಲಾ ಹೇಳ್ತೀದ್ದೀನಿ ಅಂದ್ಮೇಲೆ ನಾನು loveಲ್ಲಿ ಬಿದಿದ್ದೀನಿ ಅಂತಾನೇ ತಾನೇ ಅನ್ನೋ ಪ್ರಶ್ನೆನ್ನಾ ನನ್ನಷ್ಟಕ್ಕೆ ನಾನೇ ಕೇಳಿಕೊಳ್ಳುತ್ತಿದ್ದೆ.

ಅದು ಮೊದಲ ನೋಟದಲ್ಲಿ…! ಪ್ರೀತಿ ಹೀಗೇಲ್ಲಾ ಆಗುತ್ತಾ…? ಎಂದು ಅವಳನ್ನು ನೋಡಿದ್ದಾಗಿನಿಂದ ಎಷ್ಟೋ ರಾತ್ರಿಗಳಲ್ಲಿ ಬಂದ ಅವಳದ್ದೇ ನೆನಪುಗಳಿಗೆ ಪ್ರಶ್ನೆಗಳನ್ನು ಕೇಳಿದ್ದೆ. ಕನಸ್ಸಲ್ಲಿ ಅವಳನ್ನು ಕನವರಿಸಿದೆ. ಮನಸ್ಸಲ್ಲಿ ಅವಳ ನಗುವನ್ನು ನೆನೆದು ನೆನೆದು ಹುಚ್ಚನಾಗಿದೆ. ಏನಾದ್ರೂ ಮಾಡಿ ಅವಳನ್ನು ಕೇಳಿಯೇ ಬಿಡಬೇಕು ಯಾರೇ ನೀನು ಚೆಲುವೆ? ಎಂದು ಕೊಂಡೆ ಆದ್ರೆ…?

ಸುಮಾರು ಮೂರೂವರೆ ತಿಂಗಳು. ಪ್ರತಿ ಶುಕ್ರವಾರ ಅದೇ ದೇವಸ್ಥಾನದ ಮೆಟ್ಟಿಲುಗಳನ್ನು ಕಾಯುವುದೆ ನನ್ನ ಕಾಯಕವಾಗಿತ್ತು. ಈ ಶುಕ್ರವಾರ ಬರ್ತಾಳೆ. ಮುಂದಿನ ವಾರ ಬರ್ತಾಳೆ ಅನ್ನೋ ಮನಸ್ಸಿನ ಮಾತುಗಳನ್ನು ಕೇಳುತ್ತಾ ಕಾಯುತ್ತಿದ್ದೆ. ಏಲ್ಲೋ ಒಂದು ಕಡೆ ಅವಳು ಬರೋದಿಲ್ಲ ಅನಿಸಿದರೆ. ಮತ್ತೊಂದೆಡೆ ಬಂದೆ ಬರ್ತಾಳೆ ಅಂತ ಅನ್ನಿಸ್ತಾ ಇತ್ತು. ಆಫೀಸ್ ನಲ್ಲಿ ಕೆಲಸ ಮಾಡೋದಕ್ಕೂ ಆಗ್ದೇ ಬಾಸ್ ಹತ್ತಿರ ಬೈಸಿಕೊಂಡ, ನನ್ನನ್ನು ಸೂಕ್ಷ್ಮವಾಗಿ ಗಮನಿಸಿದ ಗೆಳೆಯನೊಬ್ಬಕೇಳಿಯೇ ಬಿಟ್ಟ “ಯಾಕೋ ಏನಾಯ್ತು. ನಾನು ನೋಡ್ತಾ ಇದ್ದೇನೆ ಮೊದಲಿನ ಹಾಗೆ ನೀನಿಲ್ಲ ಏನಾಗಿದೆ ನಿನಗೆ” ಎಂದ.

STORY-3

ಅವನ ಪ್ರಶ್ನೆಗೆ ಒಮ್ಮೆ ತಡಬಡಾಯಿಸಿದೆ. ಅವನ ಪ್ರಶ್ನೆಗೆ ಏನೆಂದು ಉತ್ತರಿಸಲಿ? ಎಂದು ಮನದಲ್ಲೇ ಯೋಚಿಸಿದೆ.

“ನೋಡು ನಾನು ನಿನ್ನ ಗೆಳೆಯ! ನೀನು ನನ್ನ ಆತ್ಮೀಯಾ! ಏನಾದ್ರೂ ತೊಂದರೆ ಇದ್ರೆ ಹೇಳು?” ಎಂದು ಕೇಳಿದ.

ನಾನು ಹೇಳಲೋ ಬೇಡ್ವೋ ಅಂಥ ಯೋಚಿಸ್ತೀದ್ದೆ. ಅಷ್ಟರಲ್ಲಿ ಅವನು ನನ್ನ ಹೆಗಲನ್ನು ಹಿಡಿದು ಅಲುಗಾಡಿಸಿದ ಮೇಲೆ ಹೇಳಲೇ ಬೇಕಾದ ಸ್ಥಿತಿಗೆ ತಲುಪಿದೆ “ಅದು… ಅದು…” ಹೇಳಲು ತಿಣುಕಾಡಿದೆ.

“ಯಾರನ್ನಾದ್ರೂ Love ಮಾಡಿದ್ದೀಯಾ” ಎಂದು ಕೇಳಿಯೇ ಬಿಟ್ಟ.

ನಾನು ಯಾವುದನ್ನು ಯೋಚಿಸದೆ “ಹೌದು. ಆದ್ರೆ ಅವಳು ಯಾರು ಅಂತ ಗೊತ್ತಿಲ್ಲ. ಅವಳನ್ನು ನೋಡಿ ಮೂರೂವರೆ ತಿಂಗಳಾಗಿರಬಹುದು. ಅವಳನ್ನು ನೋಡಿದ್ದಾಗಿನಿಂದ ನಾನು ಹೀಗೆ ಆಗಿದ್ದೀನಿ” ಎಂದು ಸ್ನೇಹಿತನಿಗೆ ಹೇಳಿದೆ.

ನಾನು ಅವಳನ್ನು ನೋಡಿದ್ದಾಗಿನಿಂದ ನಡೆದಿದ್ದ ಎಲ್ಲವನ್ನು ಹೇಳಿ ಬಿಟ್ಟೆ ಅವನಿಗೆ. ಅದಕ್ಕೆ ಅವನ ಕಡೆಯಿಂದ ಬಂದ ಉತ್ತರ “ನೋಡು ಈ ಶುಕ್ರವಾರ ನಾನು ದೇವಸ್ಥಾನಕ್ಕೆ ಬರ್ತೀನಿ ಅದು ನೀನ್ ಜೊತೆ. ಅಷ್ಟೇ ಅಲ್ಲಾ ಆ ದೇವಸ್ಥಾನಕ್ಕೆ ನಾನು ನನ್ನ Family ಜತೆ ಬರುತ್ತೇನೆ. ನಿನ್ ಅದೃಷ್ಟ ಚೆನ್ನಾಗಿದ್ರೆ ಅವಳು ಸಿಗಬಹುದೇನೋ ಈ ವಾರ” ಎಂದು ಹೇಳಿ ಹೊರಟ.

ಅಂತಹದೇ ಶುಕ್ರವಾರ. ಅದೇ ಗುಡಿಯಾ ಘಂಟನಾದದ ಸದ್ದು. ಅರ್ಚಕರು ಹೇಳುತ್ತಿರುವ ದೇವರ ಸ್ತೋತ್ರಗಳು. ಸಾಲಾಗಿ ನಿಂತಿರುವ ಭಕ್ತಾಧಿಗಳು. ಅವರಲ್ಲಿ ಯಾರೋ ಒಬ್ಬಳಾದ್ರೂ ನಾನು ನೋಡಿದ ಹುಡ್ಗಿಯಾಗಿರಬಾರದೇ ಎಂದುಕೊಂಡೆ. ಅಷ್ಟರಲ್ಲಿ “ಏನೋ ಮನ್ಮಥ ಇಷ್ಟು ಬೇಗ ಬಂದಿದ್ದೀಯಾ?”

ಹಿಂದೆ ಬಂದ ಧ್ವನಿಯಲ್ಲೇ ತಿಳಿಯಿತ್ತು. ಅದು ನನ್ನ ಸ್ನೇಹಿತ ಎಂದು “ಇಲ್ಲ ನಾನು ಕೂಡ ಅವಳನ್ನೇ ನೋಡುತ್ತಿದ್ದೇನೆ ಆಕೆ ಕಾಣಿಸ್ತೀಲ್ಲ?” ಎಂದೆ.

ಅವನ ಜೊತೆ ನಿಂತು ದೇವರ ಮಂಗಳಾರತಿ ತೆಗೆದುಕೊಂಡು ಹೊರಗಡೆಗೆ ಬಂದೆ. ನನ್ನ ಮನಸ್ಸಿನಲ್ಲಿ ಯಾವುದೋ ಒಂದು ಗೊಂದಲ ಅವಳು ಬಂದಿರಬಹುದಾ? ಯಾಕೋ ಮನಸ್ಸು ಕಸಿವಿಸಿಕೊಂಡಿತ್ತು. ಇಲ್ಲೇ ಏಲ್ಲೋ ಇದ್ದಾಳೆ ಅದ್ರೆ ಕಣ್ಣಿಗೆ ಮಾತ್ರ ಕಾಣಿಸ್ತೀಲ್ಲಾ ಅನ್ನೋದನ್ನ ಮನಸ್ಸಿನ ಭಾವನೆಗಳು ಹೇಳುತ್ತಿದ್ದವು,, ಅಷ್ಟರಲ್ಲಿ,,

“ಅವಿ ಬಾರೋ ಇಲ್ಲಿ” ಎಂದು ಕೂಗಿದ ಗೆಳೆಯ.

ಅವನು ಕೂಗಿದ ಕಡೆಗೆ ನಾನು ಕೂಡ ಹೋದೆ. ಇವರೆಲ್ಲಾ ನನ್ನ Family ಎಂದು ಪರಿಚಯಿಸಿದ.

“ಅಮ್ಮ ಛಾಯ ಎಲ್ಲಿ” ಎಂದು ತನ್ನ ತಾಯಿಯನ್ನು ಕೇಳಿದ ಗೆಳೆಯ.

“ಇಲ್ಲೇ ಏಲ್ಲೋ ಇರ್ಬೇಕು ನೋಡು” ಎಂದರು ಗೆಳೆಯನ ತಾಯಿ.

ನನ್ನ ಕಂಗಳು ಅವಳು ಬರ್ತಾಳೆ ಅಂತ ಅವಳನ್ನು ನೋಡೋ ಕಾತುರದಲ್ಲಿ ಕಾಯುತ್ತಿದ್ದವು. ಹೃದಯದ ಬಡಿತದ ತ್ರೀವ್ರತೆ ಹೆಚ್ಚಾಗುತ್ತಿತ್ತು. ಮನದ ಲೆಕ್ಕಾಚಾರ ತಪ್ಪಲಿಲ್ಲ. ಅವಳು ಇಲ್ಲೇ ಎಲ್ಲೋ ಇದ್ದಾಳೆ ಅನ್ನೋ ಮನಸ್ಸಿನ ಮಾತು ಸುಳ್ಳು ಹೇಳಲಿಲ್ಲ. ಅದೇ ಸದ್ದು. ಅದೇ ಕಾಲ್ಗೆಜ್ಜೆಯ ನಾದ. ನನ್ನ ಕರ್ಣಗಳ(ಕಿವಿ) ಪಕ್ಕದಲ್ಲೇ ಇದೆ ಅನ್ನಿಸಿತ್ತು. ಹಿಂದಕ್ಕೆ ತಿರುಗಿದೆ. ಅದು ನಿಧಾನವಾಗಿ. ನನ್ನ ಕಂಗಳನ್ನೇ ನಂಬಲಾಗಲಿಲ್ಲ. ಅವಳೇ ನನ್ನವಳು. ನನ್ನ ಮನದ ಉಡುಗೊರೆಯವಳು. ಹೃದಯದ ಭಾವ ಸ್ಪರ್ಶ ಕನ್ಯೆಯವಳು. ಕಾಯುತ್ತಿದ್ದ ಮನಸ್ಸಿಗೆ ಪ್ರೀತಿಯ ವೈಢೂರ್ಯ ಸಿಕ್ಕಿದಂತೆ ಕಂಡವಳು. ಅವಳನ್ನು ಹತ್ತಿರದಿಂದ ಕಂಡ ನನ್ನ ಕಂಗಳು ಧನ್ಯೋಸ್ಮೀ ಎಂದು ತನಗೆ ತಾನೇ ಹೇಳಿಕೊಂಡವು. ಅಲ್ಲೇ ಇದ್ದ ಗೆಳೆಯ ಹತ್ತಿರ ಬಂದು ನಿಂತ ಇವಳು… ಅವನು ಹಾಗೆ ಹೇಳುತ್ತಿದ್ದರೆ ನನ್ನಲ್ಲಿ ಪ್ರಶ್ನೆಗಳ ಮೂಟೆಗಳೇ ಹೆಚ್ಚಾಗಿದ್ದವು. ನನ್ನನ್ನೂ ನೋಡಿದ ಗೆಳೆಯ “ಹ್ಞೂಂ… ಇವಳಿಗಿಂತ ಮೊದ್ಲೂ ಇವ್ರೂ ಮಹೇಶ್” ಎಂದ. ನನಗೆ confuse ಈಕೆ ಗೆಳೆಯನಿಗೆ ಏನಾಗಬೇಕು? ಈ ಮಹೇಶ್ ಯಾರು? ಮೊದ್ಲೇ Tensionನಲ್ಲಿದ್ದ ನನಗೆ Twist ಕೋಡ್ತಾ ಇದ್ದಾನೆ? ಎಂದು ಕೊಂಡೆ.

“ಏಯ್ ಏನ್ Think ಮಾಡ್ತೀದ್ದೀಯಾ?” ಎಂದ ಗೆಳೆಯ.

ನಾನು ಏನು ಹೇಳದೇ ‘ಏನು ಇಲ್ಲ’ ಎಂದು ತಲೆಯಾಡಿಸಿದೆ.

“ಇವರು ಮಹೇಶ್ ನನ್ನ ಭಾವ. ಅಂದ್ರೆ ಇಲ್ಲಿ ಇದ್ದಾಳಲ್ಲ ತುಂಟಿ. ಜಗಳಗಂಟಿ. ನನ್ನ ಸ್ವೀಟ್ ತಂಗಿ ಛಾಯ ಮದುವೆಯಾಗುತ್ತಿರುವ ಹುಡ್ಗಾ. ನಾನು ನಿನ್ನ Engagementಗೆ ಕರೆದೆ ನೀನು ಬಂದಿಲ್ಲ. ಬಂದಿದ್ರೆ ನಿನಗೆ ಅವತ್ತೆ ಪರಿಚಯ ಮಾಡಿಸ್ತೀದ್ದೆ” ಎಂದ ಗೆಳೆಯ.

ಗೆಳೆಯನ ಮಾತು ನನ್ನ ಹೃದಯದ ಬಡಿತವನ್ನೇ ಒಂದು ಕ್ಷಣ ನಿಲ್ಲಿಸಿತ್ತು.

“ಇವರದ್ದು Love and Arranged Marriage. ಹೇಗಿದ್ದಾನೆ ನನ್ ಭಾವ” ಎಂದು ಕೇಳಿದ ಗೆಳೆಯ.

STORY-2

ಅವನ ಆ ಪ್ರಶ್ನೆಗೆ ಉತ್ತರಿಸುವಷ್ಟು ಬುದ್ಧಿವಂತನಾಗಿರಲಿಲ್ಲ. ಬಾರದ ನಗುವನ್ನು ಬಲವಂತದಿಂದ ಮೂಖದ ಮೇಲೆ ತೆಗೆದುಕೊಂಡು ನಕ್ಕಿದೆ. ನನ್ನ ಗೆಳೆಯ ಕೂಡ ನನ್ನ ನಗುವನ್ನು ಕಂಡು ಅವನ ತಂಗಿ ಹಾಗೂ ಭಾವನ ಜೊತೆ ದೇವರ ಗುಡಿಯ ಕಡೆಗೆ ನಡೆದರು. ನಾನು ಅವಳನ್ನು ಹಾಗೆ ನೋಡುತ್ತಿದ್ದೆ. ಅವಳು ಅದೇ ದೀಪಕ್ಕೆ ತುಪ್ಪ ಹಾಕಿ ಹಣತೆ ಹಚ್ಚಿದಳು. ಆ ಹಣತೆಯ ಮಂದಬೆಳಕಿನಲ್ಲಿ ಅವಳ ಹಣೆಯ ಮೇಲಿದ್ದ ಸಿಂಧೂರ ನಗುತ್ತಿತ್ತು. ಆ ನಗುವನ್ನು ಕಂಡ ಕಂಗಳ ಅಂಚಿಗೆ ಬಂದ ಕಣ್ಣೀರನ್ನು ತಡೆ ಹಿಡಿದು ಹೊರಗೆ ಬಂದು ನಿಂತು ಅದೇ ತಿಳಿನೀಲಿ ಆಕಾಶವನ್ನು ನೋಡುತ್ತಾ ನಿಂತೆ. ಸ್ವಲ್ಪ ಸಮಯದ ನಂತರ ಗೆಳೆಯ ಬಂದು “ಏನೋ ನಿನ್ ಹುಡ್ಗಿ ಸಿಕ್ಕಿದ್ಲಾ” ಎಂದು ಕೇಳಿದ.

“ಇಲ್ಲಾ ಸಿಗಲ್ಲ… ಯಾಕೋ ನಾನು ಅವಳಿಗೆ ಜೋಡಿ ಅಲ್ಲಾ ಅಂತ ಆ ದೇವರೆ ಕರ್ಸೀಲ್ಲ ಅಂತ ಕಾಣುತ್ತೆ” ಎಂದೆ.

ಅಷ್ಟರಲ್ಲಿ ಅಲ್ಲಿಗೆ ಬಂದ ಛಾಯ ಹಾಗೂ ಮಹೇಶ್ ಇಬ್ಬರೂ ನನ್ನ ಬಳಿಗೆ ಬಂದು “ನಿಮ್ ಹುಡ್ಗಿ ಖಂಡಿತ ಸಿಗ್ತಾಳೆ ಚಿಂತೆ ಮಾಡ್ಬೇಡಿ. ಅಣ್ಣಾ ಎಲ್ಲಾ ವಿಷಯವನ್ನು ಹೇಳ್ದಾ. ನಿಮ್ಮಂತ ಒಳ್ಳೆ ಫ್ರೆಂಡ್ ನನ್ನಣ್ಣನಿಗೆ ಸಿಕ್ಕಿರೋದು ಒಳ್ಳೆಯದು. ಹಾಗೇನೆ ನಿಮ್ ಹುಡ್ಗಿ ಸಿಕ್ತಾಳೆ ಚಿಂತೆ ಬಿಡಿ. ಖುಷಿ ಪಡಿ. ಆದ್ರೆ ಮದುವೆಗೆ ಬರೋದು Miss ಮಾಡ್ಬೇಡಿ”ಎಂದು ಮಾತಿನಲ್ಲೇ ಆಮಂತ್ರಣ ಕೊಟ್ಟು ಒಂದು ಸುಂದರ ನಗುವನ್ನು ಬಿಸಾಕಿ ಮಹೇಶ್ ಜತೆ ನಡೆದಳು ಅರಸಿ ನನ್ನರಸಿ…

“ನನ್ನ ತಂಗಿ ಹೇಳಿದ ಮೇಲೆ ಮುಗಿತ್ತಪ್ಪ ನೀನು ನಿಮ್ ಹುಡ್ಗಿನಾ ಹುಡ್ಕಿ,, ನನ್ನ ತಂಗಿ ಮದ್ವೆಗೆ ಕರೆದುಕೊಂಡು ಬರೋದನ್ನು ಮರೆಯಬೇಡ” ಎಂದೇಳಿ ಹೊರಟ ಗೆಳೆಯ.

ಅವನು. ಅವಳು. ಮಹೇಶ್ ಹೋಗ್ತಾ ಇರೋದನ್ನು ನೋಡಿದ ಮೇಲೆ ಹಿಂದಕ್ಕೆ ಇದ್ದ ದೇವರ ಗುಡಿಯ ಮೇಲಿದ್ದ ಕಳಸವನ್ನು ನೋಡಿದೆ. ಆ ಕಳಸದ ಹಿಂದೆ ಮಿನುಗುತ್ತಿದ್ದ ನಕ್ಷತ್ರವು ನಗುತ್ತಿತ್ತು “ಹುಚ್ಚ ನೀನು”ಎಂದು .

ನಾನು ಆ ನಕ್ಷತ್ರವನ್ನೇ ನೋಡ್ತಾನೆ ಇದ್ದೆ. ಅದೇ ನಕ್ಷತ್ರವನ್ನು ತಂಗಾಳಿಯೊಂದು ತಣ್ಣಾನೆ ಬಿಸುತ್ತಾ ಮೋಡಗಳಿಂದ ನಕ್ಷತ್ರವನ್ನು ಮರೆಮಾಚಿತ್ತು. ನಾನು ಕೂಡ ಅವಳ ನೆನಪನ್ನು ನೆನೆದು ನೋವನ್ನು ಮರೆಮಾಚಲು ನೋಡಿದೆ ಆದ್ರೆ ಹಾಗ್ ಆಗದೆ. ನೆನಪಿನಿಂದ ದೂರಾಗದೆ. ಕಣ್ಣೀರಿಗೆ ಉತ್ತರಿಸಲಾಗದೆ. ಬೆಳದಿಂಗಳ ಬೆಳಕಲ್ಲಿ ಕಾಣದ ಪ್ರೀತಿಯ ನಕ್ಷತ್ರವನ್ನು ಹುಡುಕುತ್ತಾ ಕುಳಿತ್ತೆ. ಅಂದಿನಿಂದ ಇಂದಿನವರೆಗೂ ಪ್ರತಿ ಶುಕ್ರವಾರ ಅದೇ ದೇವರ ಸನ್ನಿಧಿಯಲ್ಲಿ. ಅವಳಿಗಾಗಿ ಅಲ್ಲಲ್ಲ… ಅವಳ ನೆನಪಿಗಾಗಿ … ಆಗನಿಸಿತ್ತು ನನಗೆ ಬೆಳದಿಂಗಳ ಬೆಳಕಲಿ ಬೆಳ್ಳಿ ಚುಕ್ಕಿಯಾದವಳು ನೀನು. ಒಲವೇ ನೀನು. ಒಲುಮೆ ನೀನು. ಮರೆಯದ ನೆನಪು ನೀನು. ನಿನ್ನ ನೆನಪಿನ ನಾವಿಕ ನಾನು…!

ಕಥೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...