Oyorooms IN

Friday, 23rd June, 2017 12:22 PM

BREAKING NEWS

ರಾಮನಗರ

ರಾಜ್ಯಸಭೆ ಚುನಾವಣೆಯಲ್ಲಿ ಹಣ ಪಡೆದು ನಾನು ಮತ ಹಾಕಿದ್ದೇನೆ : ಶಾಸಕ ಬಾಲಕೃಷ್ಣ

hc balakirshna

ಮಾಗಡಿ: ಇಂಧನ ಸಚಿವ ಡಿ.ಕೆ. ಶಿವಕುಮಾರ್‌ ಅವರಿಂದ ಕೆಪಿಸಿಸಿ ಸದಸ್ಯ ಎ. ಮಂಜು ಮಧ್ಯಸ್ಥಿಕೆಯಲ್ಲಿ ಹಣ ಪಡೆದು ರಾಜ್ಯಸಭೆ ಚುನಾವಣೆಯಲ್ಲಿ ಮತ ಹಾಕಿದ್ದೇನೆ ಎಂದು ಶಾಸಕ ಎಚ್‌.ಸಿ.ಬಾಲಕೃಷ್ಣ ಅವರು ಹೇಳಿಕೆ ನೀಡಿದ್ದಾರೆ.

ನಿನ್ನೆ ಮಾಗಡಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಬಾಲಕೃಷ್ಣ , ರಾಜ್ಯಸಭೆ ಚುನಾವಣೆಯಲ್ಲಿ ಹಣ ಪಡೆದಿರುವ ಬಗ್ಗೆ ಕಾಂಗ್ರೆಸ್ಸಿನ ಜಿಪಂ ಸದಸ್ಯ ಎ. ಮಂಜುನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಮತ ಚಲಾಯಿಸಲು ನನಗೆ ಡಿ.ಕೆ. ಶಿವಕುಮಾರ್‌ ಬಳಿಯಿಂದ ಹಣ ತಂದು ಕೊಟ್ಟಿದ್ದು ಎ.ಮಂಜು ಎಂದರು. ಎಷ್ಟು ಹಣ ಕೊಟ್ಟರು?’ ಎಂಬ ಪ್ರಶ್ನೆಗೆ ಎಷ್ಟು ಹಣ ಕೊಟ್ಟಿದ್ದಾರೆ ಎಂದು ಅವರನ್ನೇ ಕೇಳಿ ಎಂದು ಹೇಳಿದರು.

ಯಾವುದೇ ಹುದ್ದೆಯ ಆಶ್ವಾಸನೆ ನೀಡಿದರೂ, ಯಾವ ಪಕ್ಷ ಕ್ಕೂ ಹೋಗುವುದಿಲ್ಲ. ನನ್ನ ಕರ್ಮಭೂಮಿ ಮಾಗಡಿ. ನನ್ನ ಉಸಿರು ಇರುವವರೆಗೆ ಕ್ಷೇತ್ರ ಬದಲಾಯಿಸುವ ಪ್ರಶ್ನೆಯೆ ಇಲ್ಲ. ಬೇರೆಯವರಂತೆ ಪಲಾಯನ ಮಾಡುವವ ನಾನಲ್ಲ. ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷ ಗಳೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂದರು. ಸ್ವತಂತ್ರ ಶಾಸಕನಾಗಿ ಬಂದಿದ್ದೇನೆ. ನನ್ನ ಮುಂದಿನ ನಡೆ ಬಗ್ಗೆ ಕ್ಷೇತ್ರದ ಕಾರ್ಯಕರ್ತರಲ್ಲಿ ಗೊಂದಲವಿರುವುದು ಸಹಜ. ಚುನಾವಣೆಗೆ ಇನ್ನೂ ಎರಡು ವರ್ಷವಿದ್ದು, ಗೊಂದಲ ನಿವಾರಿಸಿ ಎಲ್ಲಾ ಕಾರ್ಯಕರ್ತರನ್ನು ಜತೆಗೆ ಕರೆದುಕೊಂಡು ಹೋಗುತ್ತೇನೆ, ಎಂದರು.

ರಾಮನಗರ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...