Oyorooms IN

Wednesday, 29th March, 2017 10:57 AM

BREAKING NEWS

ಹಾಸನ

ಹುಡುಗಿ ವಿಚಾರಕ್ಕೆ ಹಾಸನ ಬಸ್ ನಿಲ್ದಾಣದಲ್ಲಿ ಯುವಕರ ಮಾರಾಮಾರಿ

attack in hassan

ಹಾಸನ: ಹುಡುಗಿಯೊಬ್ಬಳ ವಿಚಾರಕ್ಕೆ ಯುವಕರಿಬ್ಬರು ಹಾಸನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರೆದುರೆ ಹೊಡೆದಾಡಿಕೊಂಡಿರುವ ಘಟನೆ ನಡೆಸಿದೆ.

ನಿನ್ನೆ ಸಂಜೆ ಹಾಸನದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸುನೀಲ್ ಮತ್ತು ಧನುಷ್ ಎಂಬುವರು ಹುಡುಗಿಯೊಬ್ಬಳ ವಿಚಾರವಾಗಿ ಮಾತಿನ ಚಕಮಿಕಿ ನಡೆದಿದೆ. ನಂತರ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಇಬ್ಬರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಈ ವೇಳೆ ಸುನೀಲ್ ತನ್ನ ಬಳಿಯಿದ್ದ ಚಾಕುವಿನಿಂದ ಧನುಷ್ ಹೊಟ್ಟೆ ಭಾಗಕ್ಕೆ ಚುಚ್ಚಿದ್ದಾನೆ. ತೀವ್ರವಾಗಿ ಹಲ್ಲೆಗೊಳಗಾಗಿ ರಕ್ತ ಸೋರುತ್ತಿದ್ದರು ಕ್ರೋಧಗೊಂಡ ಧನುಷ್ ಸುನೀಲ್ ಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾನೆ.

ಧನುಷ್ ಗೆ ತಮ್ಮ ಸುದೀಪ್ ಕೂಡ ಸಾಥ್ ನೀಡಿದ್ದು, ಇಬ್ಬರು ಸೇರಿ ಸುನೀಲ್ ಗೆ ತೀವ್ರವಾಗಿ ಥಳಿಸಿದ್ದಾರೆ. ಈ ವೇಳೆ ಪರ ಊರುಗಳಿಗೆ ತೆರಳಲು ಬಂದಿದ್ದ ನೂರಾರು ಪ್ರಯಾಣಿಕರು ಹೊಡೆದಾಟವನ್ನು ಸುಮ್ಮನೆ ವೀಕ್ಷಿಸಿದರಷ್ಟೇ ಯಾರು ತಡೆಯಲು ಮುಂದಾಗಲಿಲ್ಲ. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ತಮ್ಮ ಮೊಬೈಲ್ ನಲ್ಲಿ ಹೊಡೆದಾಟದ ದೃಶ್ಯಗಳನ್ನು ಸೆರೆಹಿಡಿದಿದ್ದಾರೆ.

ಇನ್ನು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದಾವಿಸಿದ ಪೊಲೀಸರು ತೀವ್ರವಾಗಿ ಹಲ್ಲೆಗೊಳಗಾಗಿದ್ದ ಧನುಷ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸುನೀಲ್ ಹಾಗೂ ಸುದೀಪ್ ಗೂ ಸಹ ಗಂಭೀರ ಗಾಯಗಳಾಗಿದ್ದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಬಂದ ಪೊಲೀಸರು ಮೂವರನ್ನು ವಶಕ್ಕೆ ಪಡೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನು ಮೂವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಾಪುರ್ ವಾಡ್ ತಿಳಿಸಿದ್ದಾರೆ.

ಹಾಸನ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...