Oyorooms IN

Monday, 26th June, 2017 4:06 PM

BREAKING NEWS

ರಾಜ್ಯ

ಹೊಸ ಸಚಿವರ ವಿರುದ್ಧ ಅಕ್ರಮ ಮರಳುಗಾರಿಕೆ ಆರೋಪ

ಜವಳಿ ಸಚಿವ ರುದ್ರಪ್ಪ ಲಮಾಣಿ
ಜವಳಿ ಸಚಿವ ರುದ್ರಪ್ಪ ಲಮಾಣಿ

ಹಾವೇರಿ: ಸಂಪುಟ ಪುನಾರಚನೆಯಿಂದ ಹೊಸದಾಗಿ ಮಂತ್ರಿ ಮಂಡಲವನ್ನು ಸೇರಿರುವ ಜವಳಿ ಹಾಗೂ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ವಿರುದ್ಧ ಅಕ್ರಮ ಮರಳು ಗಾರಿಕೆಗೆ ಬೆಂಬಲ ನೀಡಿರುವ ಆರೋಪ ಕೇಳಿಬಂದಿದೆ.

ತುಂಗಾಭದ್ರ ಒಡಲಿಗೆ ಕೈಹಾಕಿರುವ ಲಮಾಣಿ ಬೆಂಬಲಿಗರು, ಎಗ್ಗಿಲ್ಲದೆ ಮರಳು ಸಾಗಣೆ ನಡೆ ಸುತ್ತಿದ್ದು, ರಾಣೇಬೆನ್ನೂರು ತಾಲ್ಲೂಕಿನ ನದಿ ಪಾತ್ರದ ಹಳ್ಳಿಗಳಾದ ಹರನಗಿರಿ, ಚಂದಾಪುರ, ಚಿಕ್ಕಗುರುವತ್ತಿ ಗ್ರಾಮಗಳಲ್ಲಿ ಮರಳು ನಿಕ್ಷೇಪವನ್ನು ಸರ್ಕಾರ ಗುರುತಿಸಿದೆ, ಆದ್ರೆ ಇಲ್ಲಿ ಪ್ರತಿನಿತ್ಯ ಮರಳು ತೆಗೆಯುವ ಮರಳು ಮಾತ್ರ ಮರಳು ಸ್ಟಾಕ್ ಯಾರ್ಡ್ ಗೆ  ತಲುಪುದಿಲ್ಲ.

LAMANI_1 ಚಂದಾಪುರ ಗ್ರಾಮವೊಂದರಲ್ಲಿಯೇ ದಿನಕ್ಕೆ 60ರಿಂದ 70 ಲಾರಿಗಳು ತುಂಗಾಭದ್ರ ಒಡಲಿ ನಿಂದ ಮರಳನ್ನು ಸಾಗಿಸುತ್ತಿದ್ದು, 20 ರಿಂದ 30 ಅಡಿಗಳವರೆಗೆ ಜೆಸಿಬಿ ಹಾಗೂ ಇಟ್ಯಾಚಿಯನ್ನು ಬಳಸಿ ಮರಳನ್ನು ಲೂಟಿ ಮಾಡಲಾಗುತ್ತಿದ್ದು, ಇದಕ್ಕೆ ಪಿಡಬ್ಲ್ಯೂಡಿ ಎಇಇ ಪಾಟೀಲ್ ಸಹಾಯಕರಾಗಿದ್ದು ಇವರ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲರಿಗೆ ದೂರನ್ನು ನೀಡಲಾಗಿದೆ.

LAMANI_2

ಸರ್ಕಾರಿ ಕಾನೂನುಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿರುವ ಕುರಿತು ವಿಡಿಯೋ ಸಹಿತ ಪೊಲೀಸ್ ಠಾಣೆಗೆ ದೂರು ನೀಡಿದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ, ಅಧಿಕಾರಿಗಳು ಅಕ್ರಮ ಮರಳು ಸಾಗಾಣಿಕೆಯಲ್ಲಿ ಭಾಗಿಯಾಗಿದ್ದಾರೆ ಎಂದು ರಾಣೇಬೆನ್ನೂರಿನ ಕನಕ ಪರಮೇಶ್ವರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಂಸ್ಥಾಪಕಿ “ಲಲಿತಾ ಬಿ.ಪಾಟೀಲ” ರಾಜ್ಯಪಾಲರಿಗೆ ದೂರನ್ನು ನೀಡಿದ್ದು, ದೂರಿನ ಪ್ರತಿ ಕನ್ನಡ ಆನ್ ಲೈನ್ ನ್ಯೂಸ್ಗೆ ಲಭ್ಯವಾಗಿದೆ.

 

ರಾಜ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...