Oyorooms IN

Saturday, 22nd July, 2017 4:28 PM

BREAKING NEWS

ಜ್ಯೋತಿಷ್ಯ

2016 ರ ದ್ವಾದಶ ರಾಶಿಗಳ ವಾರ್ಷಿಕ ಭವಿಷ್ಯ

2016-astrolagy

ಮೇಷ
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಕಳ್ಳರ ಭಯವಿರುತ್ತದೆ, ಬೆಂಕಿಯಿಂದ ಅನಾಹುತವಾಗಬಹುದು ಉನ್ನತ ಅಧಿಕಾರಿಗಳಿಂದ ತೊಂದರೆ ಸಂಭವಿಸುತ್ತದೆ. ಆರೋಗ್ಯದ ಕಡೆ ಗಮನಹರಿಸುವುದು ಸೂಕ್ತ, ಜೀವನದಲ್ಲಿ ಹೆಚ್ಚು ಕಷ್ಟ ನಷ್ಟಗಳು ಬರುತ್ತವೆ, ಇದರಿಂದ ಕೋಪದ ಸ್ವಭಾವವು ಹೆಚ್ಚಾಗುವುದು, ನೀವು ನಂಬಿದವರೇ ನಿಮಗೆ ಮೋಸ ಮಾಡುತ್ತಾರೆ. ಹಣದ ವಿಚಾರದಲ್ಲಿ ಜಾಗೃತರಾಗಿರಬೇಕು,ಎಲ್ಲರೊಂದಿಗೆ ನಿಷ್ಟೂರ ಹೊಂದುತ್ತೀರಿ. ನಿಮ್ಮ ಕನಸುಗಳು ಸುಲಭದಲ್ಲಿ ನನಸಾಗಲಿವೆ. ವರ್ಷದ ಮಧ್ಯದಿಂದ ಧನಲಾಭವು, ಸ್ವಂತ ವ್ಯಾಪಾರದಲ್ಲಿ ಅಭಿವೃದ್ದಿಯು, ಉದ್ಯೋಗದಲ್ಲಿ ಒಳ್ಳೆಯ ಅಭಿವೃದ್ದಿಯನ್ನು ಹೊಂದುವಿರಿ, ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ. ವಸ್ತ್ರಾಭರಣದಿಂದ ಲಾಭವು ದೊರೆಯುತ್ತದೆ. ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಉಂಟಾಗಿ ಸಮಸ್ಯೆಗಳು ಬಗೆಹರಿಯುತ್ತವೆ. ಇತ್ಯಾದಿ ಶುಭ ಫಲಗಳು ದೊರೆಯುತ್ತವೆ. ಕಲೆ ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಪುರಸ್ಕಾರ ದೊರೆಯಲಿದೆ. ರಾಜಕೀಯ ವ್ಯಕ್ತಿಗಳಿಗೆ ತಮ್ಮ ಅಭಿಲಾಶೆ ಈಡೇರುವುದು. ಸ್ತ್ರೀ ಸಹವಾಸ ಮಾಡುವುದರಿಂದ ಹಾನಿಯಾಗುವುದು.ಸಂಪಾದನೆಗಿಂತ ಹೆಚ್ಚಿನ ವೆಚ್ಚ ಬೇಡ ಇಲ್ಲವಾದಲ್ಲಿ ಗೃಹ ಕಲಹವಾಗುತ್ತದೆ.
ವೃಷಭ
ಈ ರಾಶಿಯವರಿಗೆ ಗುರು ಸಪ್ತಮ ಸ್ಥಾನದಲ್ಲಿರುವುದರಿಂದ ಕುಟುಂಬದಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ, ಆರೋಗ್ಯ ಉತ್ತಮವಾಗಿ ಇರುತ್ತದೆ. ರಾಜಕೀಯ ಕ್ಷೇತ್ರದಲ್ಲಿ ಉನ್ನತ ಸ್ಥಾನ ಗೌರವಗಳು ಲಭ್ಯವಾಗುತ್ತವೆ, ಹಲವರಿಗೆ ಉನ್ನತ ಅಧಿಕಾರಿಗಳ ಭೇಟಿ, ಹೊರದೇಶದ ಪ್ರಯಾಣದ ಅವಕಾಶಗಳು ಬರುತ್ತವೆ. ನೀವು ಕೈಗೊಳ್ಳುವ ಎಲ್ಲ ಕಾರ್ಯಗಳಲ್ಲಿ ಜಯವನ್ನು ಹೊಂದುವಿರಿ. ನಿಮ್ಮ ಉತ್ತಮವಾದ ಯೋಜನೆಗಳಿಂದ ಗೃಹ ನಿರ್ಮಾಣದಂತಹ ಕಾರ್ಯಗಳು ಪೂರ್ಣವಾಗುತ್ತವೆ. ಸಮಾಜದಲ್ಲಿ ಒಳ್ಳೆಯ ಸ್ಥಾನಮಾನ ಲಭಿಸುತ್ತದೆ. ಹಾಗೂ ಹಲವಾರು ಕಡೆಗಳಿಂದ ಹಣವು ಲಭಿಸುತ್ತದೆ. ಇತ್ಯಾದಿ ಶುಭಫಲಗಳನ್ನು ಅನುಭವಿಸುವಿರಿ ವರ್ಷದ ಮಧ್ಯದಲ್ಲಿ ಕಳ್ಳತನ ಮನಸ್ಥಾಪ,ಸರಕಾರಿ ನೌಕರರಿಗೆ ಕಿರುಕುಳವು, ಅನಾರೋಗ್ಯ ಸಂಭವಿಸುತ್ತದೆ, ನೀವು ನಂಬಿದ ನಿಮ್ಮ ಮಿತ್ರರು ವೈರಿಗಳಾಗುತ್ತಾರೆ. ಆರೋಗ್ಯದಲ್ಲಿ ಏರುಪೇರಾಗುವುದು.ವರ್ಷ್ಯಾಂತದಲ್ಲಿ ಈ ರಾಶಿಯವರಿಗೆ ತುಂಬಾ ಅನುಕೂಲಕರ ವಾತಾವರಣವಿರುತ್ತದೆ. ನಿಮ್ಮ ಬಯಕೆಗಳು ಈಡೇರಲಿವೆ. ಹಣವು ಎಲ್ಲ ಕಡೆಗಳಿಂದ ಹರಿದುಬರಲಿದೆ. ಯುವಕರಿಗೆ ಉದ್ಯೋಗಗಳು ದೊರೆಯುತ್ತವೆ. ಶುಭ ಫಲಗಳನ್ನು ಹೊಂದಲು ಆಂಜನೇಯ ಪೂಜೆ ಮಾಡಿ ಶನಿವಾರದಂದು ಎಳ್ಳು ದೀಪ ಹಚ್ಚಬೇಕು.
ಮಿಥುನ
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಉತ್ತಮ ಹಣಕಾಸಿನ ಅವಕಾಶಗಳು ಒದಗಿ ಬರುತ್ತವೆ. ನಿಮ್ಮ ಕೀರ್ತಿ ಎಲ್ಲ ಕಡೆಗೆ ಹರಡಲಿದೆ ಬಂಧು ಮಿತ್ರರು ನಿಮ್ಮನ್ನು ಆದರದಿಂದ ಕಾಣುತ್ತಾರೆ. ಕುಟುಂಬದಲ್ಲಿ ಶಾಂತಿ ನೆಲೆಸುತ್ತದೆ. ಉದ್ಯೋಗಸ್ಥರಿಗೆ ಬಡ್ತಿ ದೊರೆತು ಉತ್ತಮ ಫಲ ದೊರೆಯಲಿದೆ. ಬ್ಯಾಂಕಿಂಗ್, ಹಣಕಾಸಿನ ವ್ಯವಹಾರ ನಡೆಸುವವರು ತಮ್ಮ ಯೋಜನೆಗಳನ್ನು ವಿಸ್ತರಿಸಬಹುದು. ಉನ್ನತ ಅಧಿಕಾರಿಗಳ ಸಂಪರ್ಕ ಉಂಟಾಗುವುದು ಸಂಪರ್ಕ ಸಾಧನದಂತಹ ಉದ್ಯೋಗದಲ್ಲಿ ನಿರತರಾದ ವ್ಯಕ್ತಿಗಳಿಗೆ ಸನ್ಮಾನ ಗೌರವಗಳು ಲಭಿಸಿಯಾವು, ಕೋರ್ಟ್ ಕಚೇರಿ ಕೆಲಸಗಳಲ್ಲಿ ಜಯ ಶತ್ರುಗಳು ನಿಮ್ಮನ್ನು ಆದರದಿಂದ ಕಾಣುತ್ತಾರೆ. ಸಂತಾನ ಪ್ರಾಪ್ತಿ, ಉತ್ತಮ ಆರೋಗ್ಯ ಕೈಗಾರಿಕಾ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ವಕೀಲರಿಗೆ ಖ್ಯಾತಿ ದೊರೆಯುತ್ತದೆ. ಕಬ್ಬಿಣ, ಸಿಮೆಂಟ್ ವ್ಯಾಪಾರಿಗಳಿಗೆ ಒಳ್ಳೆಯ ಆದಾಯವು ದೊರೆಯುತ್ತದೆ. ಇತ್ಯಾದಿ ಶುಭ ಫಲಗಳನ್ನು ಪಡೆಯುವಿರಿ. ಕುಟುಂಬದಲ್ಲಿ ಮಂಗಳ ಕಾರ್ಯಗಳು ಯಾವ ವಿಘ್ನಗಳು ಇಲ್ಲದೇ ನೆರವೇರುತ್ತವೆ. ನಿಮ್ಮ ಕನಸುಗಳು ಈಡೇರಲು ಇದು ಸಕಾಲ.
ಕರ್ಕಾಟಕ
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಮಾನಸಿಕ ಶಾಂತಿಯ ಕೊರತೆ ಕಂಡು ಬರುತ್ತದೆ. ವಿದೇಶ ಪ್ರಯಾಣ ಯೋಗವಿರುತ್ತದೆ. ನೀವು ಮೆಚ್ಚುವವರೊಂದಿಗೆ ನಿಮ್ಮ ವಿವಾಹವು ನಡೆಯುವುದು. ವ್ಯಾಪಾರಿಗಳಿಗೆ ಉತ್ತಮ ಲಾಭ, ಕೃಷಿಕರಿಗೆ ಉತ್ತಮ ಆದಾಯ ಬರುತ್ತದೆ. ಸರಕಾರಿ ನೌಕರರಿಗೆ ತಮ್ಮ ಸಂಬಳಗಿಂತ ವೆಚ್ಚವು ಅಧಿಕವಾಗಿ ಕಂಡುಬಂದರೂ ಹಣದ ಒಳ ಹರಿವು ಹೆಚ್ಚಾಗಿರುತ್ತದೆ. ಹೆಚ್ಚಿನ ಐಶ್ವರ್ಯ ಅಬಿವೃದ್ದಿಯಾಗುವುದು, ಭವಿಷ್ಯದಲ್ಲಿ ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು. ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯು ಆಗುವುದು., ಉತ್ತಮ ಸ್ಥಾನ ಮಾನ ಪ್ರಾಪ್ತಿ,ಆಭರಣಗಳಿಂದ ಲಾಭವು, ಅಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ, ಮನೆಯಲ್ಲಿ ಶಾಂತಿಯ ವಾತಾವರಣ , ಬಂಧು ಭಾಂಧವರಿಂದ ಕಷ್ಟದ ಕಾಲದಲ್ಲಿ ಸಹಾಯ, ನಿಮ್ಮ ಎಲ್ಲ ಕಾರ್ಯಗಳಲ್ಲಿ ಜಯ ದೊರೆಯುತ್ತದೆ, ನಿಮ್ಮ ಕುಟುಂಬಕ್ಕೆ ಉತ್ತಮ ಶುಭಫಲಗಳು ದೊರೆಯುತ್ತವೆ, ನಿಮ್ಮ ವೈರಿಗಳು ನಿಮ್ಮ ಸಕಲ ಐಶ್ವರ್ಯವನ್ನು ಕಂಡು ನಿಮ್ಮನ್ನು ಆದರದಿಂದ ಕಾಣುತ್ತಾರೆ. ದುಂದು ವೆಚ್ಚ ಕಡಿಮೆ ಮಾಡುವುದು ಸೂಕ್ತ, ಹಣದ ವ್ಯವಹಾರ ಗುಪ್ತವಾಗಿರಲಿ, ನೀವು ಬಯಸಿದ ಎಲ್ಲ ಕಾರ್ಯಗಳಲ್ಲಿ ಜಯ ದೊರೆಯುತ್ತದೆ.
ಸಿಂಹ
ಈ ರಾಶಿಯವರಿಗೆ ಗುರು ಪಂಚಮ ಸ್ಥಾನದಲ್ಲಿರುವುದರಿಂದ ಸಕಲ ಐಶ್ವರ್ಯ ಲಭಿಸುತ್ತದೆ. ಮಿತ್ರರ ಸಹಕಾರದಿಂದ ವ್ಯಾಪಾರದಲ್ಲಿ ಪ್ರಗತಿ, ಸಜ್ಜನರ ಸಹವಾಸ ಲಭಿಸುತ್ತದೆ.ಎಲ್ಲರಿಂದಲೂ ಆದರ ಗೌರವಗಳನ್ನು ಪಡೆಯುತ್ತಾರೆ, ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹ ಯೋಗ ಒದಗಿ ಬರುತ್ತದೆ, ವಿದ್ಯಾರ್ಥಿಗಳು ತಮ್ಮ ಅಧ್ಯಯನ ಕ್ಷೇತ್ರಗಳಲ್ಲಿ ಮುಂದುವರೆಯಲು ಬಹಳಷ್ಟು ಅವಕಾಶಗಳು ಸೃಷ್ಟಿಯಾಗುತ್ತವೆ. ನಿಮ್ಮ ಸ್ವಂತ ಪ್ರಯತ್ನದಿಂದ ಆಸ್ತಿ ಪಾಸ್ತಿ ಸಂಪಾದನೆ ಮಾಡುವಿರಿ. ಹಿಂದುಳಿದಿದ್ದ ಎಲ್ಲ ಕಾರ್ಯಗಳಲ್ಲಿ ಆಸಕ್ತಿಯಿಂದ ಕಾರ್ಯನಿರ್ವಹಿಸುವಿರಿ, ಹಲವರು ಗೃಹ ನಿರ್ಮಾಣದಂತಹ ಕಾರ್ಯಗಳನ್ನು ಕೈಗೊಳ್ಳುತ್ತಾರೆ. ಇತ್ಯಾದಿ ಶುಭಫಲಗಳು ದೊರೆಯುತ್ತವೆ. ವರ್ಷದ ಮಧ್ಯದ ಕೆಲ ತಿಂಗಳುಗಳಲ್ಲಿ ಸಂಸಾರದಲ್ಲಿ ವಿರಸ ಉಂಟಾಗುತ್ತದೆ. ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು, ಬಂಧು ಮಿತ್ರರೊಡನೆ ಕಲಹವು, ದೈಹಿಕ ಅನಾರೋಗ್ಯ ಕಾಡುವುದು, ಸರಕಾರಿ ನೌಕರರಿಗೆ ಉತ್ತಮ ಧನಲಾಭ, ವಕೀಲರಿಗೆ ವ್ಯಾಪಾರಿಗಳಿಗೆ ಉದ್ಯಮಿಗಳಿಗೆ ಉತ್ತಮ ಧನಲಾಭ ದೊರೆಯುವ ಸಾಧ್ಯತೆಗಳು ಇರುತ್ತವೆ.
ಕನ್ಯಾ
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗುರು ತೃತಿಯ ಸ್ಥಾನದಲ್ಲಿರುವುದರಿಂದ ಎಲ್ಲ ಕಾರ್ಯಗಳನ್ನು ಎಚ್ಚರಿಕೆಯಿಂದ ಮಾಡಬೇಕಾಗುತ್ತದೆ. ಬಂಧು ಮಿತ್ರರೊಡನೆ ಜಾಗೃತೆಯಿಂದ ಮಾತನಾಡಬೇಕಾಗುತ್ತದೆ, ಇಲ್ಲವಾದಲ್ಲಿ ಮನಸ್ಥಾಪವಾಗುವ ಸಾಧ್ಯತೆಗಳು ಎದುರಾಗುತ್ತವೆ. ಕೃಷಿಯಿಂದ ಹೆಚ್ಚಿನ ಲಾಭ ದೊರೆಯುತ್ತದೆ. ಕೆಲವರಿಗೆ ವಾಹನ ಯೋಗವಿರುತ್ತದೆ. ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು.ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವ ಹೆಚ್ಚಾಗಿ ಸಹದ್ಯೋಗಿಗಳಿಗೆ ಅಸಮಧಾನ,ಶುಭ ಫಲಗಳು ದೊರೆಯುತ್ತವೆ. ಸರಕಾರಿ ನೌಕರರಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ, ಅವಿವಾಹಿತರಿಗೆ ವಿವಾಹ ಯೋಗ ಉತ್ತಮವಾಗಿರುತ್ತದೆ. ರೈತರು ಪಶುಗಳ ಕ್ಷೇಮಕ್ಕೆ ಆದ್ಯತೆ ನೀಡುವುದು ಸೂಕ್ತ . ಕಲಾವಿದರಿಗೆ ವ್ಯಾಪಿಗಳಿಗೆ ಬರಹಗಾರರಿಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಹೆಚ್ಚಿನ ಲಾಭವಾಗುತ್ತದೆ. ರಾತ್ರಿ ಸಂಚರಿಸುವಾಗ ಎಚ್ಚರದಿಂದಿರುವುದು ಅವಶ್ಯ ಕಳ್ಳತನವಾಗುವ ಸಂಭವಗಳು ಉಂಟು.
ತುಲಾ
ಈ ರಾಶಿಯವರಿಗೆ ಗುರು ದ್ವೀತಿಯ ಸ್ಥಾನದಲ್ಲಿರುವುದರಿಂದ ಎಲ್ಲ ಕಾರ್ಯಗಳಲ್ಲಿ ಜಯ ದೊರೆಯುತ್ತದೆ. ಸಂಸಾರದಲ್ಲಿ ಸುಖ ಸಂತೋಷ ಕಂಡುಬರುವುದು, ಉದ್ಯೋಗ ವ್ಯವಹಾರದಲ್ಲಿ ಲಾಭವು ದೊರೆಯುತ್ತದೆ. ಹಲವರಿಗೆ ಧರ್ಮ ಕಾರ್ಯಗಳಲ್ಲಿ ಆಸಕ್ತಿ ಉಂಟಾಗುವುದು, ಜೀವನದಲ್ಲಿ ಯಶಸ್ಸು ದೊರೆಯುವುದು. ಹೊರದೇಶದ ಪ್ರಯಾಣದಿಂದ ಅನೇಕ ರೀತಿಯ ಲಾಭಗಳು ಉಂಟಾಗುತ್ತವೆ. ಅವಿವಾಹಿತರಿಗೆ ವಿವಾಹ ಯೋಗವಿದೆ, ಸರಕಾರಿ ಉದ್ಯೋಗಸ್ಥರಿಗೆ ಬಡ್ತಿ ದೊರೆಯುತ್ತದೆ. ಆಭರಣ ಔಷದಿ ಉದ್ಯಮಿಗಳಿಗೆ ಹೋಟೆಲ್, ಅಟೋ ಮೊಬೈಲ್, ಬಟ್ಟೆ ವ್ಯಾಪಾರಿಗಳಿಗೆ ಹೆಚ್ಚಿನ ಆದಾಯವು ದೊರೆಯುವುದು, ನಿಮ್ಮ ಸ್ವಂತ ಬುದ್ದಿಯಿಂದ ಮುನ್ನಡೆ ಸಾಧಿಸುವಿರಿ, ಹಲವರು ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಕೀರ್ತಿಯನ್ನು ಸಂಪಾದಿಸುವರು, ಇತ್ಯಾದಿ ಶುಭ ಫಲಗಳು ದೊರೆಯುತ್ತವೆ.ವರ್ಷದ ಮಧ್ಯ ಭಾಗದ ಕೆಲ ತಿಂಗಳು ದೈಹಿಕ ತೊಂದರೆ ಕಾಣಬಹುದು, ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು ಮಾನಹಾನಿಯಾಗುವ ಸಾಧ್ಯತೆಗಳು ಎದುರಾಗುತ್ತವೆ, ಇಂತಹ ಸಂದರ್ಭಗಳಲ್ಲಿ ತಾಳ್ಮೆಯಿಂದ ವರ್ತಿಸುವ ಅಗತ್ಯವಿರುತ್ತದೆ. ಹಣಕಾಸಿನ ವಿಷಯದಲ್ಲಿ ಅನ್ಯರಿಗೆ ಜಾಮೀನು ಬೇಡ.
ವೃಶ್ಚಿಕ
ಈ ರಾಶಿಯವರಿಗೆ ವರ್ಷದ ಆರಂಭದಲ್ಲಿ ಗುರು ದ್ವಾದಶ ಸ್ಥಾನದಲ್ಲಿರುವುದರಿಂದ ಅಧಿಕ ತಿರುಗಾಟವು , ಕೆಲಸ ಕಾರ್ಯಗಳಲ್ಲಿ ಧನಹಾನಿಯು ವಂಚನೆಯಾಗುವ ಸಾಧ್ಯತೆಗಳು ಎದುರಾಗುತ್ತವೆ, ಕೆಲವರಿಗೆ ಭೂವ್ಯವಹಾರದಲ್ಲಿ ಅಪಾರ ನಷ್ಟ ಸಂಭವಿಸುತ್ತದೆ. ಹೊಸ ಯೋಜನೆಗಳನ್ನು ಬಹು ಎಚ್ಚರಿಕೆಯಿಂದ ಕೈಗೊಳ್ಳಬೇಕು, ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು. ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು ,ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವ ಹೆಚ್ಚಾಗಿ ಸಹದ್ಯೋಗಿಗಳಿಗೆ ಅಸಮಧಾನ,ಶುಭ ಫಲಗಳು ದೊರೆಯುತ್ತವೆ. ಸರಕಾರಿ ನೌಕರರಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ, ಅವಿವಾಹಿತರಿಗೆ ವಿವಾಹ ಯೋಗ ಉತ್ತಮವಾಗಿರುತ್ತದೆ. ಹಣದ ವಿಚಾರದಲ್ಲಿ ಜಾಗೃತರಾಗಿರಬೇಕು, ಎಲ್ಲರೊಂದಿಗೆ ನಿಷ್ಟೂರ ಹೊಂದುತ್ತೀರಿ. ನಿಮ್ಮ ಕನಸುಗಳು ಸುಲಭದಲ್ಲಿ ನನಸಾಗಲಿವೆ.ವರ್ಷದ ಮಧ್ಯದಿಂದ ಧನಲಾಭವು, ಸ್ವಂತ ವ್ಯಾಪಾರದಲ್ಲಿ ಅಭಿವೃದ್ದಿಯು, ಉದ್ಯೋಗದಲ್ಲಿ ಒಳ್ಳೆಯ ಅಭಿವೃದ್ದಿಯನ್ನು ಹೊಂದುವಿರಿ,ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ.

ಧನು
ಈ ರಾಶಿಯವರಿಗೆ ಗುರುವು ಪ್ರಥಮ ಸ್ಥಾನದಲ್ಲಿರುವುದರಿಂದ ವರ್ಷದ ಆರಂಭದಲ್ಲಿ ಧನಾಗಮನಕ್ಕಿಂತ ಧನವ್ಯಯವೇ ಹೆಚ್ಚಾದೀತು, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಧನಲಾಭವಿರುತ್ತದೆ. ಉನ್ನತ ಅಧಿಕಾರಿಗಳಿಂದ ಉತ್ತಮ ಪ್ರಂಶಸೆ ದೊರೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ಹರಿದು ಬರುತ್ತವೆ, ಹಲವರಿಗೆ ವಿವಾಹ ಯೋಗ ಒದಗಿ ಬರುತ್ತದೆ. ವ್ಯಾಪಾರಸ್ಥರಿಗೆ ಹೆಚ್ಚಿನ ಧನಲಾಭವಾಗುತ್ತದೆ. ಸಿನಿಮಾ ಪತ್ರಿಕೋದ್ಯಮ ಮತ್ತು ಸಂಪರ್ಕ ವಲಯಗಳಲ್ಲಿ ನಿರತರಾದವರಿಗೆ ಸನ್ಮಾನ ಕೀರ್ತಿಗಳು ಲಭಿಸುತ್ತವೆ. ಧರ್ಮ ಕಾರ್ಯಗಳಲ್ಲಿ ಆಸಕ್ತಿ ಉಂಟಾಗುತ್ತದೆ. ಮಾನಸಿಕ ಶಾಂತಿ ದೊರೆಯುವುದರಿಂದ ಮನಸ್ಸು ಉಲ್ಲಾಸವಾಗಿ ಪ್ರಶಾಂತವಾಗಿ ಇರುತ್ತದೆ. ಹೆಚ್ಚಿನ ಐಶ್ವರ್ಯ ಅಬಿವೃದ್ದಿಯಾಗುವುದು, ಭವಿಷ್ಯದಲ್ಲಿ ಒಳ್ಳೆಯ ಯೋಜನೆಗಳಿಗೆ ಅವಕಾಶ ಕಂಡುಬರುವುದು.ಅವಿವಾಹಿತರಿಗೆ ವಿವಾಹ ಯೋಗ, ಮಕ್ಕಳಿಲ್ಲದವರಿಗೆ ಸಂತಾನ ಪ್ರಾಪ್ತಿಯು ಆಗುವುದು., ಉತ್ತಮ ಸ್ಥಾನ ಮಾನ ಪ್ರಾಪ್ತಿ,ಆಭರಣಗಳಿಂದ ಲಾಭವು, ಅಧ್ಯಾತ್ಮಿಕ ಚಿಂತನೆಗಳಿಂದ ಮಾನಸಿಕ ನೆಮ್ಮದಿ ಮನೆಯಲ್ಲಿ ಶಾಂತಿಯ ವಾತಾವರಣ , ಬಂಧು ಭಾಂಧವರಿಂದ ಕಷ್ಟದ ಕಾಲದಲ್ಲಿ ಸಹಾಯ, ನಿಮ್ಮ ಎಲ್ಲ ಕಾರ್ಯಗಳಲ್ಲಿ ಜಯ ದೊರೆಯುತ್ತದೆ, ನಿಮ್ಮ ಕುಟುಂಬಕ್ಕೆ ಉತ್ತಮ ಶುಭಫಲಗಳು ದೊರೆಯುತ್ತವೆ.
ಮಕರ
ಈ ರಾಶಿಯವರಿಗೆ ಗುರು ೧೧ ನೇಸ್ಥಾನದಲ್ಲಿ ಇರುವುದರಿಂದ ಅವಿವಾಹಿತರಿಗೆ ವಿವಾಹ ಯೋಗ ಒದಗಿ ಬರುತ್ತದೆ, ಎಲ್ಲ ಕೆಲಸ ಕಾರ್ಯಗಳಲ್ಲಿ ಯಶಸ್ಸು ಜಯ ಕಂಡು ಬರುವುದು ದೈಹಿಕ ಆರೋಗ್ಯವು ಉತ್ತಮವಾಗಿರುತ್ತದೆ. ನಿಮ್ಮ ಎಲ್ಲ ವೈರಿಗಳು ಸ್ನೇಹಿತರಾಗುವರು, ವಿದ್ಯಾರ್ಥಿಗಳು ಉತ್ತಮವಾಗಿ ಕಲಿಯುವರು, ಆಭರಣ ಖರೀದಿ ಆಸ್ತಿ ಪಾಸ್ತಿ ಖರೀದಿ ಮುಂತಾದವುಗಳಿಂದ ಲಾಭ ದೊರೆಯುವುದು, ರಾಜಕೀಯ ಕ್ಷೇತ್ರದಲ್ಲಿ ಗೌರವ ಸ್ಥಾನ ಮಾನ ದೊರೆಯುವುದು ಷೇರು ಪೇಟೆ ,ಔಷಧಿ, ಸ್ಟೀಲ್, ಮತ್ತು ಸಂಗೀತ ಕ್ಷೇತ್ರಗಳಲ್ಲಿ ಪೈಪೋಟಿಯ ಮುನ್ನಡೆಯು, ಕೆಲವರಿಗೆ ತೀರ್ಥ ಕ್ಷೇತ್ರ ದರ್ಶನವು ಇತ್ಯಾದಿ ಶುಭಫಲಗಳು ಉಂಟಾಗುತ್ತವೆ. ಇಲ್ಲವಾದಲ್ಲಿ ಮನಸ್ಥಾಪವಾಗುವ ಸಾಧ್ಯತೆಗಳು ಎದುರಾಗುತ್ತವೆ. ಕೃಷಿಯಿಂದ ಹೆಚ್ಚಿನ ಲಾಭ ದೊರೆಯುತ್ತದೆ. ಕೆಲವರಿಗೆ ವಾಹನ ಯೋಗವಿರುತ್ತದೆ. ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ. ಎಲ್ಲ ಕಡೆಗಳಿಂದ ಹಣದ ಹರಿವು ಹೆಚ್ಚಾಗುವುದು, ಉದ್ಯೋಗಸ್ಥ ಮಹಿಳೆಯರಿಗೆ ಬಡ್ತಿ ದೊರೆಯುವುದು, ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಗೌರವ ಹೆಚ್ಚಾಗಿ ಸಹದ್ಯೋಗಿಗಳಿಗೆ ಅಸಮಧಾನ,ಶುಭ ಫಲಗಳು ದೊರೆಯುತ್ತವೆ. ಸರಕಾರಿ ನೌಕರರಲ್ಲಿ ವರ್ಗಾವಣೆಯಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ,
ಕುಂಭ
ಈ ರಾಶಿಯವರಿಗೆ ಗುರು ಮಂಡಲವು ದಶಮ ಸ್ಥಾನದಲ್ಲಿರುವುದರಿಂದ ವರ್ಷದ ಆರಂಭದ ಕೆಲ ತಿಂಗಳವರೆಗೆ ನೆಮ್ಮದಿಯ ವಾತಾವರಣವಿರುವುದಿಲ್ಲ,ಮಾನಸಿಕ ಅಶಾಂತಿ ಕಾಡುತ್ತದೆ,ದೈಹಿಕವಾಗಿ ಆರೋಗ್ಯ ಕಂಡುಬರುವುದು, ಎಲ್ಲ ಕಡೆಗಳಿಂದಲು ಹಣವು ಹರಿದು ಬರುತ್ತದೆ.ಗೃಹ ಖರೀದಿ ಇಲ್ಲವೇ ಗೃಹ ನಿರ್ಮಾಣಕ್ಕೆ ಸೂಕ್ತ ಸಮಯವಾಗಿದೆ, ವಿವಾಹ ಮಂಗಳಾದಿ ಕಾರ್ಯಗಳು ಯಾವುದೇ ವಿಘ್ನವಿಲ್ಲದೇ ನೆರವೇರುತ್ತವೆ. ಡಾಕ್ಟರ್, ಇಂಜಿನಿಯರ್ ಪ್ರಕಾಶಕರು ಔಷಧಿ , ವ್ಯಾಪಾರೋದ್ಯಮಿಗಳಿಗೆ ಅಧಿಕ ಧನಲಾಭವಾಗುತ್ತದೆ. ದೇಹದಲ್ಲಿ ಉತ್ಸಾಹವಿರುವದರಿಂದ ಎಲ್ಲ ಕಾರ್ಯಗಳಲ್ಲಿ ಯಶಸ್ಸು ದೊರೆಯುವದು, ನಿಮ್ಮ ವೈರಿಗಳೆಲ್ಲ ಮಿತ್ರರಾಗುವ ಕಾಲವಿದು, ಆಭರಣ ಭೂ ಖರೀದಿ ಪಾಲುಗಾರಿಕೆ ವ್ಯವಹಾರಗಳಿಂದ ಹೆಚ್ಚಿನ ಲಾಭ ದೊರೆಯುತ್ತದೆ. ಸಣ್ಣ ಅಪಘಾತವಾಗುವ ಸಂಭವವುಂಟು, ಬಂಧುಗಳೊಡನೆ ವಾದ ವಿವಾದ ಬೇಡ, ವಿದೇಶ ಪ್ರಯಾಣ ಸಾದ್ಯತೆಗಳು ಒದಗಿ ಬರುತ್ತವೆ. ನಿಮ್ಮ ಹಿತ ಶತೃಗಳ ಬಗ್ಗೆ ಎಚ್ಚರಿಕೆಯಿಂದ ಇರುವುದು ಸೂಕ್ತ, ನಿಮ್ಮ ಕನಸುಗಳು ಸುಲಭದಲ್ಲಿ ನನಸಾಗಲಿವೆ. ವರ್ಷದ ಮಧ್ಯದಿಂದ ಧನಲಾಭವು, ಸ್ವಂತ ವ್ಯಾಪಾರದಲ್ಲಿ ಅಭಿವೃದ್ದಿಯು, ಉದ್ಯೋಗದಲ್ಲಿ ಒಳ್ಳೆಯ ಅಭಿವೃದ್ದಿಯನ್ನು ಹೊಂದುವಿರಿ, ಮನೆಯಲ್ಲಿ ಮಂಗಳ ಕಾರ್ಯಗಳು ನೆರವೇರುತ್ತವೆ.
ಮೀನ
ಈ ರಾಶಿಯವರಿಗೆ ಗುರು ನವಮಿ ಸ್ಥಾನದಲ್ಲಿರುವುದರಿಂದ ಅವಿವಾಹಿತರಿಗೆ ವಿವಾಹ ಯೋಗವಿದೆ. ವಾಹನ ಖರೀದಿ ಯೋಗವು, ಅಧಿಕಾರಿಗಳಿಗೆ ಕೀರ್ತಿಯು ಬರುವುದು, ಕೆಲವರಿಗೆ ಭೂ ವ್ಯವಹಾರದಲ್ಲಿ ಕೆಲವರಿಗೆ ಆಭರಣ ಖರೀದಿಯಿಂದ ಅಧಿಕ ಲಾಭವು ಸಂಭವಿಸುವುದು, ಗೃಹ ನಿರ್ಮಾಣದಂತಹ ಕಾರ್ಯಗಳಿಂದ ಲಾಭ ಬರುವುದು, ಹೋಟೆಲ್ ವ್ಯಾಪಾರಿಗಳಿಗೆ ರಾಜಕೀಯ ವ್ಯಕ್ತಿಗಳಿಗೆ ಮುನ್ನಡೆ ದೊರೆಯುವುದು,ಅಧ್ಯಾತ್ಮ ಚಿಂತನೆಯು ಕುಟುಂಬದಲ್ಲಿ ಸೌಖ್ಯವು ಕಂಡು ಬಂದು ಮನೆಯಲ್ಲಿ ಮಧುರ ಅಹಾರ ಭೋಜನವು ದೊರಕುವುದು, ನಿರುದ್ಯೋಗಿಗಳಿಗೆ ಉದ್ಯೋಗ ದೊರಕುವುದು, ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ಕಾಲವಿದು. ಇತ್ಯಾದಿ ಶುಭ ಫಲಗಳು ಉಂಟಾಗುತ್ತವೆ. ಸರಕಾರಿ ನೌಕರರಿಗೆ ಬಡ್ತಿ ದೊರೆಯುವುದು, ಹೊಸ ಗೃಹ ನಿರ್ಮಾಣವು ಆಸ್ತಿ ಸಂಪಾದನೆಗಳಿಂದ ಉತ್ತಮ ಲಾಭ ದೊರೆಯುತ್ತದೆ. ಬಂಧು ಬಾಂಧವರಿಗೆ ಸಂತೋಷವಾಗುವ ಅವಕಾಶ ದೊರೆಯುವುದು, ಹಲವರಿಗೆ ಉತ್ತಮ ಸ್ಥಾನ ಪ್ರಾಪ್ತಿಯಾಗುವುದು ಯುವಕ ಯುವತಿಯರಿಗೆ ವಿವಾಹಕ್ಕೆ ಯೋಗವು, ಕುಟುಂಬದಲ್ಲಿ ಸುಖ ಶಾಂತಿ ನೆಲೆಸುತ್ತದೆ, ಕಾರ್ಮಿಕರ ಸಮಸ್ಯೆ ಪರಿಹಾರವಾದೀತು, ಉತ್ತಮ ಆರೋಗ್ಯ ಇತ್ಯಾದಿ ಶುಭ ಫಲಗಳು ಉಂಟಾಗುತ್ತವೆ. ಸ್ವ ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗಿ ವ್ಯಾಪಾರದಲ್ಲಿ ಮುನ್ನಡೆ ಸಾಧಿಸುತ್ತಾರೆ. ಕುಟುಂಬದ ಸದಸ್ಯರ ಆರೋಗ್ಯದ ಕಡೆ ಗಮನವಿರಲಿ.

ಜ್ಯೋತಿಷ್ಯ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...