Oyorooms IN

Monday, 26th June, 2017 4:07 PM

BREAKING NEWS

ಪ್ರಮುಖ ಸುದ್ದಿಗಳು

88 ವರ್ಷಗಳ ಇತಿಹಾಸವುಳ್ಳ ಕರ್ನಾಟಕ ಸಂಘದಿಂದ ನುಡಿಜಾತ್ರೆ ಮೆರವಣಿಗೆ

82-sahithya-sammelana_karnataka-sangha

ಮುತ್ತಣ್ಣ ಹೆಳವರ್

ರಾಯಚೂರು: 88 ವರ್ಷಗಳನ್ನು ಪೂರೈಸಿದ ಕರ್ನಾಟಕ ಸಂಘ ಇದೀಗ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೆರಗು ತಂದಿದೆ. ಹೈ-ಕ ಭಾಗದಲ್ಲಿ 24 ವರ್ಷಗಳ ಬಳಿಕ ಜಿಲ್ಲೆಗೆ ಅಖಿಲ ಬಾರತ ಕನ್ನಡ ಸಾಹಿತ್ಯ ಸಮ್ಮೇಳನದ ಭಾಗ್ಯ ಒದಗಿ ಬಂದಿದ್ದು .ಸಮ್ಮೇಳನದ ಮೆರವಣಿಗೆಯನ್ನು ಕರ್ನಾಟಕ ಸಂಘದಿಂದ ಪ್ರಾರಂಭಿಸಬೇಕೆಂದು ಅನೇಕರ ಒತ್ತಾಸೆಯಾಗಿತ್ತು.

1884 ರಲ್ಲಿ ಸ್ಥಾಪನೆಯಾದ ಕರ್ನಾಟಕ ಸಂಘ 88 ವರ್ಷಗಳನ್ನು ಪೋರೈಸಿದೆ. ಕರ್ನಾಟಕ ಸಂಘ ಮತ್ತೋಮ್ಮೆ ಇತಿಹಾಸ ಪುಟ ಸೇರುತ್ತಿದೆ.ಕರ್ನಾಟಕ ಸಂಘ ರಾಮನವಮಿದಿನದಂದು ಪ್ರಾರಂಭವಾಯಿತು. ರಾಜ್ಯದಲ್ಲಿ ಕರ್ನಾಟಕ ಸಂಘಗಳು ಇರುವುದು ಎರಡು ಒಂದು ಶಿವಮೊಗ್ಗದಲ್ಲಿ ಸ್ಥಾಪಿಸಿದರೆ ಮತ್ತೊಂದು ರಾಯಚೂರಿನಲ್ಲಿ ಸ್ಥಾಪಿಸಲಾಯಿತು.

ಅತ್ಯಂತ ಹಳೆಯ ಸಂಘಗಳಲ್ಲಿ ಒಂದಾದ ಕರ್ನಾಟಕ ಸಂಘವು ಪ್ರಥಮ ಬಾರಿ ಜಿಲ್ಲೆಯ ಡಿ.ವಿ.ಗುಂಡಪ್ಪ ನವರ ಹಿರಿತನದಲ್ಲಿ ಮೈಸೂರಿನ ಮುಖ್ಯ ನ್ಯಾಯಾಧೀಶ ನಿಟ್ಟೂರು ಶ್ರೀನಿವಾಸರಾಯರ ಅಮೃತ ಹಸ್ತದಿಂದ ಪ್ರಾರಂಬಿಸಲಾಯಿತು.ಅಂದು ಬಿ.ಜಿ.ದೇಶಪಾಂಡೆಯವರು ಅಧ್ಯಕ್ಷ ಸ್ಥಾನವನ್ನು ವಹಿಸಿದ್ದರು. ವೀರಣ್ಣ ಮಾಸ್ತರ್, ಜಗನ್ನಾಥರಾವ, ಡಿ.ಮಾಣಿಕರಾವ, ರಾ.ಗು.ಜೋಷಿ ಇತರರು ಸೇರಿ ಕರ್ನಾಟಕ ತರುಣ ಸಂಘ ಕಟ್ಟಿದರು. ನಂತರ ಅದುವೇ ಕರ್ನಾಟಕ ಸಂಘವಾಗಿ ಮಾರ್ಪಾಡಾಯಿತು.

*1884ರಲ್ಲಿ ಕರ್ನಾಟಕ ಸಂಘ ಸ್ಥಾಪನೆ
*ರಾಮನವಮಿಯಂದು ಪ್ರಾರಂಭ
* ಕರ್ನಾಟಕ ಸಂಘಕ್ಕೆ 88ವರ್ಷ

*ಜಿಲ್ಲೆಯಲ್ಲಿ 3 ನೇ ಸಂಮ್ಮೇಳನ

ಧಾರವಾಡದ ವಿದ್ಯಾವರ್ಧಕದ ಬಿಟ್ಟರೆ ಹಳೆಯ ಸಂಘ ಶಿವಮೊಗ್ಗದ ಕರ್ನಾಟಕ ಸಂಘವು 1931ರಲ್ಲಿ ಆರಂಭವಾಯಿತು. ರಾಯಚೂರಲ್ಲಿ ಅಖಿಲ ಭಾರತ ಮಟ್ಟದ 2 ಸಾಹಿತ್ಯ ಸಮ್ಮೇಳನಗಳು ಜರುಗಿವೆ. 1934 ರಲ್ಲಿ 20ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ನಡೆಯಿತು.

82-sahithya-sammelana_karnataka-sangha_

1955ರಲ್ಲಿ ಆದ್ಯ ರಂಗಾಚಾರ್ಯರ ಅಧ್ಯಕ್ಷತೆಯಲ್ಲಿ 38ನೇ ಅಖಿಲ ಭಾರತ ಕನ್ನಡ ಸಮ್ಮೇಳನ ನಡೆಯಿತು.
ಮುದವೀಡು ಕೃಷ್ಣರಾಯರು,ಗರೂಢ ಸದಾಶಿವರಾಯರು,ಆಲೂರು ವೆಂಕಟರಾಯರು, ಬಿ ಎಂ ಶ್ರೀಕಂಠಯ್ಯ, ಡಿ ವಿ ಜಿಯವರು,ದ ರಾ ಬೇಂದ್ರೆ ,ಜಿ ಪಿ,ರಾಜರತ್ನಂ ಮುಂತಾದವರು ಇಲ್ಲಿ ಭೇಟಿ ನೀಡಿದ್ದಾರೆ. ಇದೀಗ 64 ವರ್ಷಗಳ ನಂತರ ರಾಯಚೂರಲ್ಲಿ ಮತ್ತೆ ಈ ಸಮ್ಮೇಳನ ನಡೆಯುತ್ತಿದೆ.

English summary :   3rd kannada sahithya sammelena in raichuru  

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...