Oyorooms IN

Tuesday, 23rd May, 2017 12:25 AM

BREAKING NEWS

ಪ್ರಮುಖ ಸುದ್ದಿಗಳು

ಅಕ್ಷರಜಾತ್ರೆಗೆ ಕ್ಷಣಗಣನೆ: ಚುರುಕುಗೊಂಡ ಪ್ರಚಾರ ಕಾರ್ಯ

37

ರಾಯಚೂರು: 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದ್ದು, ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಅಬ್ಬರದ ಪ್ರಚಾರ ಆರಂಭವಾಗಿದೆ.

6 ದಶಕಗಳ ನಂತರ ಅಕ್ಷರ ಜಾತ್ರೆ ಜಿಲ್ಲೆಗೆ ಒಲಿದು ಬಂದಿದ್ದು, ಸಮ್ಮೇಳನ ಯಶಸ್ವಿಗಾಗಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತ ಹಗಲಿರುಳು ಶ್ರಮಿಸುತ್ತಿದ್ದು, ಸಮ್ಮೇಳನ ಯಶಸ್ವಿ ಅಚ್ಚಳಿಯದೇ ಉಳಿಯುವಂತೆ ಮಾಡುವುದಕ್ಕಾಗಿ ನಗರದ ಪ್ರಮುಖ ಸ್ಥಳಗಳಲ್ಲಿ ಗೋಡೆ ಬರಹಗಳ ಮೂಲಕ ಗ್ರಾಮೀಣ ಸೊಗಡು ಬಿಂಬಿಸುವ ಜಾನಪದ ಶೈಲಿಯ ಚಿತ್ರಗಳು ಚಿತ್ತಾಕರ್ಷಕವಾಗಿ ಆಕರ್ಷಣೆಗೊಳಪಡುತ್ತಿವೆ.

ಅಕ್ಷರಗಳಿಗೆ ಹೆಚ್ಚು ಒತ್ತು ಕೊಡದೇ ಕೇವಲ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಡಿಸೆಂಬರ್ 2,3ತ್ತು 4ರಂದು ರಾಯಚೂರಿನಲ್ಲಿ ನಡೆಯುತ್ತಿದೆ ಎಂಬುವುದನ್ನು ಬಿಟ್ಟರೆ ಗೋಡೆ ಬರಹದಲ್ಲಿ ಬುಡಕಟ್ಟು ಜನಾಂಗದ ಶೈಲಿಯ ಕಲಾಕೃತಿಗಳು ಕಲಾವಿದನ ಕುಂಚದಲ್ಲಿ ಅರಳಿವೆ.

ಜಿಲ್ಲಾಧಿಕಾರಿಯವರು ಕೇವಲ ಸಾಹಿತ್ಯ ಸಮ್ಮೇಳನಕ್ಕಷ್ಟೇ ಸೀಮಿತವಾಗದೇ ಮುಂದಾಲೋಚನೆಯಿಂದ ನಗರದ ಸೌಂದರ್ಯೀಕರಣದ ಹಿತದೃಷ್ಠಿಯಿಂದ ಅಕ್ಷರಗಳಿಗೆ ಹೆಚ್ಚು ಒತ್ತು ಕೊಡದೇ ಚಿತ್ರಕಲೆಗಳಿಗೆ (ವರಲಿ ಪೇಂಟ್)ಹೆಚ್ಚು ಒತ್ತು ಕೊಡಲಾಗಿದೆ ಎಂದು ಹೇಳಲಾಗುತ್ತಿದೆ.

33

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನಪದ ಸಾಹಿತ್ಯ ಮತ್ತು ಗ್ರಾಮೀಣ ಸೊಗಡು ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ಉಳಿಸಿ ಬೆಳೆಸಬೇಕೆಂಬ ದೃಷ್ಠಿಯಿಂದ ಜನಪದ ಸೊಗಡು ಮುಂದುವರೆಸಿಕೊಂಡು ಹೋಗಲು ಈ ಚಿತ್ರಗಳನ್ನು ಬಿಡಿಸಲಾಗಿದ್ದು, ಜನರ ಆಕರ್ಷಣೆಗೆ ಒಳಗಾಗಿದೆ.

ಜಿಲ್ಲೆಯ ಐತಿಹಾಸಿಕ ಸ್ಥಳಗಳ ಪರಿಚಯ ಮಾಡಿಕೊಡುವ ಕೆಲಸ ಜಿಲ್ಲಾಡಳಿತ ಮಾಡುತ್ತಿಲ್ಲವೆಂಬ ಕೊರಗು ಕೆಲವರಲ್ಲಿ ಅಸಮಾಧಾನವುಂಟುಮಾಡಿದೆ. ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸುವ ವಿವಿಧ ಜಿಲ್ಲೆಯ ಜನರು ಐತಿಹಾಸಿಕ ಸ್ಥಳಗಳಿಗೆ ಹೋಗಿ ಭೇಟಿ ನೀಡಲು ಆಗದೇ ಇರುವಾಗ ಐತಿಹಾಸಿಕ ಸ್ಥಳಗಳ ಚಿತ್ರಗಳ ಮೂಲಕ ಇತಿಹಾಸವನ್ನಾದ ಪರಿಚಯವನ್ನು ತಿಳಿದುಕೊಳ್ಳುವ ಕೆಲಸವಾಗುತ್ತಿತ್ತು. ಆದರೆ, ಜಿಲ್ಲಾಡಳಿತ ಜಿಲ್ಲೆಯ ಇತಿಹಾಸ ಬಿಂಬಿಸುವ ಪರಿಚಯವನ್ನು ಮಾಡಿಲ್ಲ ಎಂಬುವ ಕೊರಗು ಕೆಲವರಲ್ಲಿ ಅಸಮಾಧಾನವುಂಟುಮಾಡಿದೆ.

ತೆರೆದ ವಾಹನದಲ್ಲಿ 2-3 ದಿನಗಳಿಂದ ಪ್ರಚಾರ ಕಾರ್ಯ ಚುರುಕಾಗಿದ್ದು, ಕೇವಲ ಕನ್ನಡ ಚಲನಚಿತ್ರ ಗೀತೆಗಳ ಮೂಲಕ ಪ್ರಚಾರ ಮಾಡುತ್ತಿದ್ದು, ಇದರಿಂದ ಜನಸಾಮಾನ್ಯರಿಗೆ ಸಾಹಿತ್ಯ ಸಮ್ಮೇಳನದ ಬಿಸಿ ತಟ್ಟುತ್ತಿಲ್ಲ ಎಂಬ ಕೂಗು ಜನಸಾಮಾನ್ಯರಿಂದ ಕೇಳಿಬರುತ್ತಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...