Oyorooms IN

Friday, 26th May, 2017 4:17 AM

BREAKING NEWS

ಕೋಲಾರ

ಹಣ ಡಬಲ್‌ ಮಾಡ್ತೀನಿ ಅಂತ ಹೇಳಿ 50 ಲಕ್ಷ ದೋಚಿದ್ದ ಕಳ್ಳ ಅಂದರ್‌

ಹಣ ಡಬಲ್‌ ಮಾಡ್ತೀನಿ ಅಂತ ಹೇಳಿ 50 ಲಕ್ಷ ದೋಚಿದ್ದ ಕಳ್ಳ ಅಂದರ್‌

ಕೋಲಾರ: ಮೈಸೂರಿನ ಖ್ಯಾತ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕನೊಬ್ಬನ ಬಳಿ 50 ಲಕ್ಷ ರೂ. ವಂಚಿಸಿ ಪರಾರಿಯಾಗಿದ್ದ ಓರ್ವ ಆರೋಪಿಯನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

6 ಜನರ ಪೈಕಿ ಬೆಂಗಳೂರು ಮೂಲದ ವಿಜಯ್ ಆನಂದ್ ಎಂಬ ಆರೋಪಿಯನ್ನು ಬಂಧಿಸಿರುವ ಪೊಲೀಸರು, ಬಂಧಿತನಿಂದ 13 ಲಕ್ಷ ರೂ. ಹಾಗೂ ಒಂದು ಕಾರ್‌ನ್ನು ವಶಪಡಸಿಕೊಂಡಿದ್ದಾರೆ. ಮೈಸೂರು ಹಾಗೂ ಬೆಂಗಳೂರಿನ ವಿವಿಧೆಡೆ ಪ್ರತಿಷ್ಠಿತ ವಿದ್ಯಾಶ್ರಮ, ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿರುವ ರಾಕೇಶ್ ರಾಜೇ ಅರಸ್ ದಿಢೀರ್ ಅಂತ ಹಣ ಮಾಡಲು ತಮ್ಮ ಸ್ನೇಹಿತನೊಂದಿಗೆ ಡಬ್ಲಿಂಗ್ ವ್ಯವಹಾರದಲ್ಲಿ ತೊಡಗಿದ್ದರು.

A-accused-arrest-in-fraud-case-at-Kolara.

ಜೂನ್ 29 ರಂದು ಕೋಲಾರದಲ್ಲಿ ಐವತ್ತು ಲಕ್ಷ ರೂ. ಕಳೆದುಕೊಳ್ಳುವ ಮೂಲಕ ರಾಕೇಶ್ ರಾಜೇ ಅರಸ್ ಸುದ್ದಿಯಾಗಿದ್ದರು. 2005 ನೇ ಸಾಲಿನ ಹಳೆಯ ಐನೂರು ರೂಪಾಯಿ ನೋಟು ಕೊಟ್ಟರೆ ಅದರ ಮೌಲ್ಯಕ್ಕಿಂತ ಡಬ್ಬಲ್ ಕೊಡುವುದಾಗಿ ನಂಬಿಸಿ 50 ಲಕ್ಷ ರೂ. ವಂಚಿಸಿ ಆರೋಪಿಗಳು ಪರಾರಿಯಾಗಿದ್ದರು.

ಹಣ ಕಳೆದುಕೊಂಡ ರಾಕೇಶ್ ರಾಜೇ ಅರಸ್ ನಗರ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡಿದ್ದ ಪೊಲೀಸರು ಡೀಲ್ ಕುದುರಿಸಿದ್ದ ಥಾಮಸ್‌ನನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದರು. ತನಿಖೆ ಮಾಡಿದ ಪೊಲೀಸರು ಸದ್ಯ ಬೆಂಗಳೂರಿನ ಬಾಣಸವಾಡಿ ಮೂಲದ ಆನಂದ್ ಎಂಬ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಉಳಿದಂತೆ ಐದು ಜನ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

ಕೋಲಾರ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...