Oyorooms IN

Tuesday, 25th April, 2017 1:59 PM

BREAKING NEWS

ಚಿಕ್ಕಮಗಳೂರು

ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಪ್ರಕರಣದಲ್ಲಿ ಟ್ವಿಸ್ಟ್, ತೇಜಸ್ ನಿಂದ ಸಂಚು..?

kalmane

ಚಿಕ್ಕಮಗಳೂರು: ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ, ತೇಜಸ್ ಗೌಡನ ಕಿಡ್ನಾಪ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೆ ತೇಜಸ್ ಗೌಡನೇ ಕಾರಣ ಎಂದು ಚಿಟ್ ಫಂಡ್ ಮಾಲೀಕ ಕಲ್ಮನೆ ನಟರಾಜ್ ಆರೋಪಿಸಿದ್ದಾರೆ.

ಡಿವೈಎಸ್ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಗೌಡ ಕಿಡ್ನ್ಯಾಪ್ ಪ್ರಕರಣದಲ್ಲಿ ಆರೋಪಿಗಳಾಗಿರುವ ಕಲ್ಮನೆ ನಟರಾಜ್, ನವೀನ್ ಶೆಟ್ಟಿ ಪ್ರಕರಣದ ಬಗ್ಗೆ ಮಾಧ್ಯಮಗಳ ಮುಂದೆ ಮಾತನಾಡಿದ್ದು, ತೇಜಸ್ ಗೌಡ ಕಿಡ್ನ್ಯಾಪ್ ಆಗಿರಲಿಲ್ಲ, ತನ್ನ ಸ್ನೇಹಿತರೊಂದಿಗೆ ಬೆಂಗಳೂರಿಗೆ ತೆರಳಿ ಅಪಹರಣದ ನಾಟಕವಾಡಿದ್ದ ಎಂದಿದ್ದಾರೆ.

ತೇಜಸ್ ಗೌಡನ ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಅಡ್ಡಿಯಾದ ಕಲ್ಲಪ್ಪ ಹಂಡಿಭಾಗ್ ಅವರನ್ನು ಹಣಿಯಲು ಸಂಚುರೂಪಿಸಿ, ತನ್ನ ಸ್ನೇಹಿತರ ಮೂಲಕ ಹಣ ನೀಡಿ ರೆಕಾರ್ಡ್ ಮಾಡಿಸಿದ್ದ, ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ಅಪಹರಣ ಪ್ರಕರಣದ ತಂತ್ರವನ್ನು ರೂಪಿಸಿದ್ದು ತೇಜಸ್ ಗೌಡ ಎಂದು ದೂರಿದ್ದಾರೆ.

English summary:  a new twist in dysp kallappa handibaghs suicide case

ಚಿಕ್ಕಮಗಳೂರು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...