Oyorooms IN

Tuesday, 25th April, 2017 4:04 PM

BREAKING NEWS

ಜಿಲ್ಲಾ ಸುದ್ದಿಗಳು

ವಿಜಯಪುರ: ಅಪಘಾತದಲ್ಲಿ ಮೃತಪಟ್ಟ ಮಗನ ಕಣ್ಣು ದಾನ ಮಾಡಿದ ಅಪ್ಪ

ವಿಜಯಪುರ: ಅಪಘಾತದಲ್ಲಿ ಮೃತಪಟ್ಟ ಮಗನ ಕಣ್ಣು ದಾನ ಮಾಡಿದ ಅಪ್ಪ

ವಿಜಯಪುರ: ವಿಜಯಪುರದ ಉದ್ಯಮಿ ಮತ್ತು ಬಸವ ರೆಸಿಡೆನ್ಸಿ ಮಾಲೀಕ ವಿಜಯ ಡೋಣಿ ಎಂಬುವರ ಪುತ್ರ ಸುಹಾಸ ವಿಜಯಾನಂದ ಡೋಣಿ (18) ಅಪಘಾತದಲ್ಲಿ ಮೃತಪಟ್ಟಿದ್ದ. ನಿನ್ನೆ ಮಧ್ಯಾಹ್ನ ಕಾಲೇಜಿಗೆ ತೆರಳುವಾಗ ಬೈಕ್ ಪಲ್ಟಿಯಾಗಿ ಸಾವಿಗೀಡಾಗಿದ್ದಾನೆ. ಈ ದುಃಖದ ನಡುವೆಯೂ ಮಗನ ನೇತ್ರದಾನ ಮಾಡಿ ಡೋಣಿ ದಂಪತಿ ಮಾದರಿಯಾಗಿದ್ದಾರೆ.

ಅಲ್ಲದೆ ಘಟನೆಯಲ್ಲಿ ಕವಲಗಿ ಸಂಗನ ಬಸವ ಕಾಲೇಜಿನ ವಿದ್ಯಾರ್ಥಿ ಭರತ ಅಶೋಕ ಮನಗೂಳಿ (17) ಎಂಬಾತ ಗಾಯಗೊಂಡಿದ್ದಾನೆ. ಈತ ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಸಿ. ಮನಗೂಳಿ ಎಂಬುವರ ಮೊಮ್ಮಗನಾಗಿದ್ದಾನೆ. ಈ ಘಟನೆ ಬಗ್ಗೆ ವಿಜಯಪುರ ಗ್ರಾಮೀಣ ಪೊಲೀಸ್‌‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...