Oyorooms IN

Sunday, 20th August, 2017 10:38 PM

BREAKING NEWS

ಕೋಲಾರ

“ಆಕ್ರೋಶ ” ವ್ಯಕ್ತಪಡಿಸಲು ಜನರಿಗೆ ಆಮಿಷ, ಹಣ ಹಂಚಿದ ಕಾಂಗ್ರೆಸ್

workers

ಗದಗ/ಕೋಲಾರ: ನೋಟು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಯವನ್ನು ವಿರೋಧಿಸಿ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಗೆ ಜನರು ಬೆಂಬಲ ನೀಡದಿದ್ದರು, ಪ್ರತಿಭಟನೆ ನಡೆಸಲು ಹಣ ನೀಡಿ ಜನರನ್ನು ಕರೆ ತರಲಾಗಿರುವ ವಿಷಯವನ್ನು ಪ್ರತಿಭಟನೆಗೆ ಬಂದಿದ್ದ ಮಹಿಳೆಯರೇ ಬಹಿರಂಗ ಪಡಿಸಿದ್ದಾರೆ.

ಗದಗದ ಬೆಟಗೇರಿಯಲ್ಲಿ ಕಾಂಗ್ರೆಸ್ ಮುಖಂಡರು ಮನೆ ಕೊಡಿಸುತ್ತೇವೆ ಎಂದು ಆಮಿಷವೊಡ್ಡಿ, ಹಣ ನೀಡಿ ಪ್ರತಿಭಟನೆಗೆ ಕರೆತಂದಿದ್ದಾರೆ ಎಂದು ಪ್ರತಿಭಟನೆಗೆ ಬಂದಿದ್ದ ಮಹಿಳೆಯರು ಹೇಳಿದ್ದು, ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಎಂದು ಹೇಳದೇ ಸುಳ್ಳು ಹೇಳಿ ನಮ್ಮನ್ನು ಇಲ್ಲಿಗೆ ಕರೆತಂದಿದ್ದಾರೆ ಎಂದು ಕಾಂಗ್ರೆಸ್ ಮುಖಂಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನೂ ಕೋಲಾರದಲ್ಲಿ ಜಿಲ್ಲಾಧಿಕಾರಿ ಕಚೇರಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರಿಗೆ ಶಾಸಕರ ಎದುರಲ್ಲಿಯೇ 500ರ ನೋಟುಗಳನ್ನು ಹಂಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

English summary :  aakrosh diwas congress protest workers brings for rent

ಕೋಲಾರ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...