Oyorooms IN

Saturday, 19th August, 2017 4:39 PM

BREAKING NEWS

ಪ್ರಮುಖ ಸುದ್ದಿಗಳು

ಎಸಿ ಪತ್ನಿ ಜೊತೆ 15 ಜನರ ದುರ್ವರ್ತನೆ, ಒಬ್ಬ ಬಂಧನ

ಬೆಂಗಳೂರು: ರಾಜ್ಯ ಟೆನಿಸ್ ಅಸೋಸಿಯೇಶನ್ನಿನಲ್ಲಿ ನಡೆದ ಹೊಸವರ್ಷಾಚರಣೆ ವೇಳೆ 15 ಜನರ ತಂಡದಿಂದ ವಾಣಿಜ್ಯ ತೆರಿಗೆ ಇಲಾಖೆ ಉಪ ಆಯುಕ್ತ ಪತ್ನಿಯ ಮೇಲೆ ಅಸಭ್ಯವಾಗಿ ವರ್ತಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ದೂರು ದಾಖಲಾಗಿದ್ದು, ಒಬ್ಬರನ್ನು ಬಂಧಿಸಲಾಗಿದೆ.

ಹೊಸ ವರ್ಷದಂದು ರಾಜ್ಯ ಟೆನಿಸ್ ಅಸೋಸಿಯೇಶನ್ ವತಿಯಿಂದ ನಡೆದ ನ್ಯೂಇಯರ್ ಪಾರ್ಟಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತ ಮತ್ತು ಆತನ ಪತ್ನಿ ಭಾಗವಹಿಸಿದ್ದಾರೆ. ಉಪ ಆಯುಕ್ತ ಪಾರ್ಟಿಯಲ್ಲಿ ಪತ್ನಿಯನ್ನು ಒಂದೆಡೆ ಇರಲು ಹೇಳಿ ಊಟ ಕೌಂಟರ್ ಬಳಿ ತೆರಳಿದ್ದಾರೆ. ಆ ವೇಳೆ 15 ಜನರ ತಂಡ ಎಸಿ ಪತ್ನಿ ಬಳಿ ಧಾವಿಸಿ ಬಂದಿದ್ದು ಸೆಲ್ಫಿ ತೆಗೆಯಲು ಆಕೆಗೆ ಫೋನ್ ನೀಡಿದ್ದು ಅಸಭ್ಯ ಮಾತನಾಡಿ ದುರ್ವರ್ತನೆ ಮೆರೆದಿದ್ದಾರೆ. ಇದನ್ನು ಆಕೆ ನೊಂದು ತನ್ನ ಪತಿಗೆ ವಿವರಿಸಿದ್ದು ವಾಣಿಜ್ಯ ತೆರೆಗೆ ಉಪಆಯುಕ್ತ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈ ಸಂಬಂಧ ತನಿಖೆ ಪ್ರಾರಂಭಿಸಿದ ಕಬ್ಬನ್ ಪಾರ್ಕ್ ಠಾಣಾ ಪೊಲೀಸರು ಹೊಸವರ್ಷಾಚರಣೆ ವೇಳೆ ನಡೆದ ಘಟನಾವಳಿಗಳನ್ನು ಪರಿಶೀಲಿಸಿದ್ದು, ಟೆನಿಸ್ ಅಸೋಸಿಯೇಶನ್ನಿನಲ್ಲಿ ಇದ್ದ ಸಿಸಿಟಿವಿ ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ.ಇದರಿಂದ ಹದಿನೈದು ಜನರ ತಂಡ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶಿವರಾಜ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು ಎಫ್‌ಐಆರ್ ದಾಖಲಿಸಿದ್ದಾರೆ

ಇನ್ನು ಹದಿನಾಲ್ಕು ಆರೋಪಿಗಳಿಗಾಗಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಹೊಸ ವರ್ಷಾಚರಣೆ ಸಂಬಂಧ ದೌರ್ಜನ್ಯ ಪ್ರಕರಣಗಳು ಹಸಿಯಾಗಿರುವಾಗಲೇ ಮತ್ತೆ ಮತ್ತೆ ಪ್ರಕರಣಗಳು ಅದಕ್ಕೆ ಸೇರಿಕೆಯಾಗುತ್ತಿರುವುದು ನಗರಕ್ಕೆ ಕೆಟ್ಟಹೆಸರು ತರುತ್ತಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...