Oyorooms IN

Saturday, 21st January, 2017 7:34 AM

BREAKING NEWS

ಚಾಮರಾಜನಗರ

ಚಾಮರಾಜನಗರ : ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರ ಸಾವು

ಚಾಮರಾಜನಗರ : ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರ ಸಾವು

ಚಾಮರಾಜನಗರ : ಸ್ಕೂಟರ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಓರ್ವ ಸಾವನ್ನಪ್ಪಿದರೆ ಮತ್ತೊರ್ವ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಸೋಮವಾರಪೇಟೆ ಗ್ರಾಮದ ಶಿವಕುಮಾರ್(40) ಮತ್ತು ಕೆರೆಹಳ್ಳಿ ಗ್ರಾಮದ ರಂಗಸ್ವಾಮಿ(55) ಸಾವನ್ನಪ್ಪಿರುವ ಮೃತ ದುರ್ದೈವಿಯಾಗಿದ್ದಾರೆ. ನಂಜನಗೂಡು ಕಡೆಯಿಂದ ಹೊಂಡಾ ಫ್ಯಾಷನ್ ಪ್ರೊ ದಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಶಿವಕುಮಾರ್ ಹಾಗೂ ಚಾಮರಾಜನಗರದಿಂದ ಕಡೆಯಿಂದ ನಂಜನಗೂಡು ಕಡೆಗೆ ಬರುತ್ತಿದ್ದ ಯಮಹ ಲಿಬಿರೋ ಬೆಂಡರವಾಡಿ ಕೆರೆ ಸಮೀಪದ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಈ ಘಟನೆ ನಡೆದಿದೆ.

ರಂಗಸ್ವಾಮಿ ಅವರ ಹಿಂಬದಿ ಸವಾರ ಸಿಂಗನಪುರದ ಸಿದ್ದರಾಜು ಎಂಬುವವರಿಗೆ ತೀವ್ರವಾಗಿ ಗಾಯವಾಗಿದ್ದು ಸರ್ಕಾರಿ ಜಿಲ್ಲಾಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಈ ಸಂಬಂಧ ಚಾಮರಾಜನಗರ ಸಂಚಾರಿ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.

ವರದಿ:ರಾಮಸಮುದ್ರ ಎಸ್ ವೀರಭದ್ರಸ್ವಾಮಿ

ಚಾಮರಾಜನಗರ ಇನ್ನಷ್ಟು

ಪ್ರಮುಖ ಸುದ್ದಿಗಳು