Oyorooms IN

Friday, 24th March, 2017 7:39 PM

BREAKING NEWS

ಪ್ರಮುಖ ಸುದ್ದಿಗಳು

ನಟಿಯ ಮೇಲೆ ಗುಂಡಿನ ದಾಳಿ: ಬೆನ್ನತ್ತಿ 11 ಬಾರಿ ಗುಂಡು ಹೊಡೆದ ದುಷ್ಕರ್ಮಿಗಳು

actress-shot-dead

ಲಾಹೋರ್: ಅಪರಿಚಿತ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ನಟಿ ಕಿಸ್ಮತ್ ಬೇಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾವಿನ್ಸ್ ನಲ್ಲಿ ನಡೆದಿದೆ. ಸ್ಟೇಜ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಾಪಾಸ್ ಮನೆಗೆ ಮರಳುತ್ತಿದ್ದಾಗ ನಟಿ ಕಿಸ್ಮತ್ ಬೇಗ್ ಮೇಲೆ ಕಾರು, ಮೋಟಾರ್ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾರೆ.

ಕಿಸ್ಮತ್ ಬೇಗ್ ಕಾಲು, ಹೊಟ್ಟೆಯ ಮೇಲೆ 11 ಬಾರಿ ಗುಂಡಿನ ದಾಳಿ ನಡೆಸಿದ್ದು, ತೀವ್ರವಾಗಿ ಗಾಯಗೊಂಡಿದ್ದ ನಟಿಯನ್ನು ಆಕೆಯ ಕಾರು ಚಾಲಕ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾನೆ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಲೇ ಕಿಸ್ಮತ್ ಪ್ರಾಣಬಿಟ್ಟಿದ್ದಾರೆ, ಕಿಸ್ಮತ್ ಕಾರು ಚಾಲಕನ ಪರಿಸ್ಥಿತಿಯೂ ಗಂಭೀರವಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಿಸ್ಮತ್ ಬೇಗ್ ಮಾಜಿ ಪ್ರಿಯಕರನೇ ಈ ಕೃತ್ಯವನ್ನು ಎಸಗಿರಬಹುದು ಎಂದು ಪೊಲೀಸರು ಅನುಮಾನಿಸುತ್ತಿದ್ದ, ಪ್ಲ್ಯಾನ್ ಮಾಡಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ಸ್ಟೇಜ್ ಶೋ ಮುಗಿಸಿಕೊಂಡು ಥಿಯೇಟರ್ ನಿಂದ ಹೊರಬಂದ ಮೇಲೆ ಕಿಸ್ಮತ್ ಅವರನ್ನು ಬೆನ್ನತ್ತಿದ ಆಗುಂತಕರು  ಕಿಸ್ಮತ್ ಇನ್ಮೇಲೆ ನೀನು ಡ್ಯಾನ್ಸ್ ಮಾಡೋದಿಲ್ಲ ಎಂದು ಅಪರಿಚಿತ ಹೇಳಿದ್ದಾನೆ ಎಂದು ಹೇಳಿದ್ದಾರೆ. ಕಿಸ್ಮತ್ ಮೇಲೆ ಈ ಹಿಂದೆಯೂ ಎರಡು ಬಾರಿ ಹತ್ಯಾಯತ್ನ ನಡೆದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಳು.

English summary: actress shot dead in pakistan

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ...



ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ...