Oyorooms IN

Saturday, 19th August, 2017 4:32 PM

BREAKING NEWS

ಕವನ

*ಅನುಭೂತಿ*

4
ಸಂತಸದ ಸುಳಿಯಲಿ
ಮನವಿಂದು ಸಿಲುಕಿಹುದು
ಹಂಬಲದ ಅಲೆಯಲಿ
ಬೆರಗಿನ ಅನುಭಾವ
ಒತ್ತಡದ‌ ಬದುಕಲೂ
ಕಾಳಜಿಯ ಮಾಂತ್ರಿಕತೆ
ಬೆಂಬಿಡದ ನೋವಲೂ
ಆಪ್ತತೆಯ ಮಹಾಪೂರ
ಅಚ್ಚರಿಯ ತಿರುವಿನಲಿ
ಕರೆತಂದು ನಿಲಿಸಿಹುದು
ಮುಗಿಯದ ಬಂಧದಲಿ
ಸ್ಪುರಿಸಿಹ ಪ್ರೀತಿ
ಬತ್ತದ ಒಲವಿದು
ಚಿರಂತನ ಚಿಲುಮೆ
ಸ್ಪರ್ಶ‌ಸಾನಿಧ್ಯ ಮೀರಿದ
ದಿವ್ಯ ಪ್ರೇಮಾನುಭೂತಿ
ನನ್ನುಸಿರ ಉಸಿರಲಿ
ಅರಿಯದೆಲೆ ಬೆರೆತಿರುವೆ
ತೀರದ  ಮೋಹವಿದಲ್ಲ
ಅಲೌಕಿಕ ಭಾವದೀಪ್ತಿ
 ಸವಿತ ಎಸ್ ಪಿ ತುಮಕೂರು
ಸವಿತ ಎಸ್ ಪಿ ತುಮಕೂರು

ಕವನ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...