Oyorooms IN

Wednesday, 24th May, 2017 1:19 AM

BREAKING NEWS

ಚಿಕ್ಕಬಳ್ಳಾಪುರ

ಎಪಿಎಂಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತ : ಕೆ.ಗುಡಿಯಪ್ಪ

ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಹಿರಿಯ ಕಾಂಗ್ರೇಸ್ ಮುಖಂಡರು ಹಾಗೂ ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ಗುಡಿಯಪ್ಪ ವಿಶ್ವಾಸ ವ್ಯಕ್ತಪಡಿಸಿದರು.
ಜಂಗಮಕೋಟೆ ಬಿ.ಸಿ.ಎಂ.ಬಿ.ಕ್ಷೇತ್ರದ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಡಿ.ನಾರಾಯಣಸ್ವಾಮಿ ಪರವಾಗಿ ತಾಲೂಕಿನ ನಾಗಮಂಗಲ ಗ್ರಾಮದಲ್ಲಿ ಮತದಾರರ ಮನೆಗಳಿಗೆ ತೆರಳಿ ಮತಯಾಚನೆ ಮಾಡಿ ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಮತ್ತು ಮಾಜಿ ಸಚಿವ ವಿ.ಮುನಿಯಪ್ಪ ಹಾಗೂ ಸಂಸದ ಅಭಿವೃಧ್ಧಿ ಕಾಮಗಾರಿಗಳು ಅಭ್ಯರ್ಥಿಗಳಿಗೆ ಶ್ರೀರಕ್ಷೆಯಾಗಲಿದ್ದು ಚಿಕ್ಕಬಳ್ಳಾಪುರ ಎಪಿಎಂಸಿ ಆಡಳಿತ ಚುಕ್ಕಾಣಿ ಕಾಂಗ್ರೇಸ್ ಪಕ್ಷದ ವಶವಾಗಲಿದೆ ಎಂದರು.
ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ವಿ.ಮುನಿಯಪ್ಪ ಅನೇಕ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸಿದ್ದಾರೆ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು,ರಸ್ತೆ,ಚರಂಡಿ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಆದ್ಯತೆ ನೀಡಲಾಗಿದೆ ರೈತರ ಅಭಿವೃಧ್ದಿಗೆ ಪೂರಕವಾಗಿರುವ ಯೋಜನೆಗಳನ್ನು ಸಿದ್ದಪಡಿಸಿ ಜಾರಿಗೊಳಿಸಿದೆ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದ ಅವರು ಕೇಂದ್ರದ ಮಾಜಿ ಮಂತ್ರಿಗಳು ಹಾಗೂ ಸಂಸದರಾದ ಕೆ.ಹೆಚ್.ಮುನಿಯಪ್ಪ ಸಹ ಅನೇಕ ಅಭಿವೃಧ್ದಿ ಕಾಮಗಾರಿಗಳನ್ನು ನಡೆಸಿದ್ದು ಅದು ಕಾಂಗ್ರೇಸ್ ಅಭ್ಯರ್ಥಿಗಳ ಪಾಲಿಗೆ ವರವಾಗಲಿದೆ ಎಂದರು.
ಎಪಿಎಂಸಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳಿಗೆ ಆಟೋರಿಕ್ಷಾ ಚಿಹ್ನೆ ನೀಡಲಾಗಿದೆ ರೈತರು ಕಾಂಗ್ರೇಸ್ ಸರಕಾರದ ಸಾಧನೆಗಳು ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಮತ್ತು ಸಂಸದ ಕೆ.ಹೆಚ್.ಮುನಿಯಪ್ಪನವರ ಅಭಿವೃಧ್ಧಿ ಕಾಮಗಾರಿಗಳನ್ನು ಗುರುತಿಸಿ ಮತ ನೀಡಿ ಬೆಂಬಲಿಸುವ ಮೂಲಕ ಹೆಚ್ಚಿನ ಬಹುಮತದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜಂಗಮಕೋಟೆ ಬಿ.ಸಿ.ಎಂ.ಬಿ.ಕ್ಷೇತ್ರದ ಕಾಂಗ್ರೇಸ್ ಪಕ್ಷದ ಬೆಂಬಲಿತ ಅಭ್ಯರ್ಥಿ ಡಿ.ನಾರಾಯಣಸ್ವಾಮಿ ಮಾತನಾಡಿ ಕಾಂಗ್ರೇಸ್ ಸರಕಾರ ಮತ್ತು ಮಾಜಿ ಸಚವ ವಿ.ಮುನಿಯಪ್ಪ ಮತ್ತು ಸಂಸದ ಕೆ.ಹೆಚ್.ಮುನಿಯಪ್ಪನವರ ಸಾಧನೆಗಳನ್ನು ಮುಂದಿಟ್ಟುಕೊಂಡು ಮತಯಾಚನೆ ಮಾಡುತ್ತಿದ್ದು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ತನಗೆ ರೈತರ ಸೇವೆ ಮಾಡಲು ಎಪಿಎಂಸಿ ಚುನಾವಣೆಗೆ ಸ್ಪರ್ಧಿಸಿದ್ದು ಕ್ಷೇತ್ರಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಯುಪಿಎ ಸರಕಾರ ರೈತರ 79 ಸಾವಿರ ಕೋಟಿ ರೂಗಳ ಸಾಲವನ್ನು ಮನ್ನಾ ಮಾಡಿದ್ದರಿಂದ ಹಲವರು ಋಣಮುಕ್ತರಾಗಿದ್ದಾರೆ ರಾಜ್ಯ ಕಾಂಗ್ರೇಸ್ ಹಾಲು ಉತ್ಪಾದಕರಿಗೆ ನೀಡುತ್ತಿದ್ದ 4 ರೂಗಳ ಪ್ರೋತ್ಸಾಹಧನವನ್ನು 5 ರೂಗಳಿಗೆ ಏರಿಕೆ ಮಾಡಿದೆ 3ಲಕ್ಷ ವರೆಗೆ ಬಡ್ಡಿರಹಿತ ಸಾಲ ಸೌಲಭ್ಯವನ್ನು ನೀಡುತ್ತಿದ್ದು ರೈತರು ಕಾಂಗ್ರೇಸ್ ಸರಕಾರದ ಸಾಧನೆಯನ್ನು ನೋಡಿ ಮತ ನೀಡಬೇಕೆಂದು ಮನವಿ ಮಾಡಿದರು.
ಜಂಗಮಕೋಟೆ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಹೆಚ್.ಎಮ್.ಮುನಿಯಪ್ಪ, ಕೆಪಿಟಿಸಿಎಲ್ ನಿರ್ದೇಶಕ ಭಕ್ತರಹಳ್ಳಿ ಮುನೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಸರಸ್ವತಮ್ಮ ತಮ್ಮಣ್ಣ, ಕಾಂಗ್ರೆಸ್ ಮುಖಂಡ ತಮ್ಮಣ್ಣ,ಯುವ ಮುಖಂಡ ಹೊಸಪೇಟೆ ಶಶಿಕುಮಾರ್,ನಾಗಮಂಗಲ ಗ್ರಾ.ಪಂ.ಅಧ್ಯಕ್ಷೆ ರೂಪಶಿವಕುಮಾರ್, ಎನ್.ಎಸ್.ದೇವರಾಜ್, ಎನ್.ಮುರಳಿಧರ, ಎನ್.ಸಿ.ನಾರಾಯಣಸ್ವಾಮಿ, ಎಸ್.ಕೆ.ಕೆಂಪಣ್ಣ,ಎನ್.ವಿ.ಶಂಕರಪ್ಪ,ಚನ್ನಕೇಶವ, ಭಕ್ತರಹಳ್ಳಿ ವೆಂಕಟಮೂರ್ತಿ,ಅಶ್ವತ್ಥಗೌಡ, ಡಿ.ದೇವರಾಜ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...