Oyorooms IN

Wednesday, 18th January, 2017 5:31 PM

BREAKING NEWS

ಜ್ಯೋತಿಷ್ಯ

ವಾರ ಭವಿಷ್ಯ

%e0%b2%85%e0%b2%b8

ಮೇಷ : ಜನರೊಂದಿಗೆ ಅಥವಾ ಅಪರಿಚಿತರೊಂದಿಗೆ ನೀವು ಹೊಂದುವ ಭಿನ್ನಾಭಿಪ್ರಾಯಗಳು ಎಂದಿಗಿಂತಲೂ ಹೆಚ್ಚಾಗಿ ನಿಮ್ಮನ್ನು ಕಾಡಬಹುದು.ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ಲೀಜ್, ಗುತ್ತಿಗೆಗಳು ಅನುಕೂಲವಾಗಲಿವೆ. ಕೆಲವರಿಗೆ ವಾಹನ ಯೋಗವಿರುತ್ತದೆ. ಪತಿ ಪತ್ನಿಯರಲ್ಲಿ ಉತ್ತಮ ಪ್ರೇಮ ದೊರೆತು ಕುಟುಂಬದಲ್ಲಿ ಸಂತಸದ ವಾತಾವರಣವಿರುತ್ತದೆ.ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.

ವೃಷಭ : ನಿಮ್ಮ ಆಶಾವಾದ ಮತ್ತು ಧನಾತ್ಮಕ ವರ್ತನೆ ಮತ್ತು ಹೆಜ್ಜೆಗಳ ನಿಮ್ಮ ಸುತ್ತಲಿರುವ ಜನರನ್ನು ಪ್ರಭಾವಿತರನ್ನಾಗಿಸುತ್ತವೆ. ಸಾಂಘಿಕ ಪ್ರಯತ್ನದಿಂದ ಯಶಸ್ಸು ಲಭ್ಯ. ಜನರೊಂದಿಗೆ ಬೆರೆಯುವುದು ಮತ್ತು ನಿಮ್ಮ ಹವ್ಯಾಸದಲ್ಲಿ ಆನಂದಪಡುವುದು. ದೈನಂದಿನ ವಿಷಯಕ್ಕೆ ಹೆಚ್ಚಿನ ಸಮಯ ವ್ಯಯಿಸುತ್ತೀರಿ. ಆರೋಗ್ಯ ಮತ್ತು ಮನೆ ವಾತಾವರಣದಲ್ಲಿ ಈಗ ಸಮಯ ನಿಮಗೆ ಸಾಧಕವಾಗಿದೆ.ಹೊಸ ಯೋಜನೆಗಳ ತಯಾರಿ ಮತ್ತು ಅನುಷ್ಠಾನಗಳಿಗೆ ಒಳ್ಳೆಯ ಸಮಯ.

ಮಿಥುನ : ನಿಮ್ಮ ಮೇಲಧಿಕಾರಿ, ಅಧಿಕಾರಿವರ್ಗವು ಸವಾಲು ಎದುರಿಸುವ ಕುರಿತ ನಿಮ್ಮ ಆಕಾಂಕ್ಷೆ ಮತ್ತು ಆತ್ಮವಿಶ್ವಾಸಕ್ಕೆ ಪೂರಕವಾಗಿ ಪ್ರತಿಕ್ರಿಯಿಸುತ್ತಾರೆ.ಮನೆಯಲ್ಲಿ ಶಾಂತಿಯ ವಾತಾವರಣ. ನಿಮ್ಮ ಉನ್ನತಾಧಿಕಾರಿ ಅಥವಾ ಅಧಿಕಾರಿಗಳಿಂದ ಬೆಂಬಲ ಬರುತ್ತದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ. ಇಂದು ವಾಗ್ವಾದಕ್ಕಿಳಿಯಬೇಡಿ.ಕಚೇರಿಗಳಲ್ಲಿ ಸಹದ್ಯೋಗಿಗಳಿಂದ ಕಿರುಕುಳ.

ಕರ್ಕಾಟಕ : ನಿಮ್ಮ ಇಷ್ಟದ ಕಾರ್ಯಗಳು ಉತ್ತಮವಾಗಿ ಸಾಗಲಿವೆ.ವಿದ್ಯಾರ್ಥಿಗಳು ಅತಿ ಉತ್ಸಾಹದಲ್ಲಿ ಕೆಲವನ್ನು ಮರೆಯುವ ಸಾಧ್ಯತೆಗಳಿವೆ. ಮಹಿಳೆಯರಿಂದ ದೂರವಿರಿ.ಕೌಟಂಬಿಕ ನೆಮ್ಮದಿ ದೊರೆಯಲಿದೆ. ದೂರಪ್ರಯಾಣದಲ್ಲಿ ಎಚ್ಚರವಿರಲಿ.ಅಭಿವೃದ್ಧಿಗೆ ಹೊಸ ನೀತಿಗಳು ಜಾರಿಗೆ ಬರಲಿವೆ. ಮನೆಗೆ ಬಂಧುಗಳು ಆಗಮಿಸುವುದರಿಂದ ಉತ್ತಮ ವಾತಾವರಣ ಕಂಡುಬರಲಿದೆ.ಮನೆಯಲ್ಲಿ ಶಾಂತಿಯ ವಾತಾವರಣವಿದೆ.

ಸಿಂಹ : ಸಂಸಾರದಲ್ಲಿ ವಿರಸ ಉಂಟಾಗುತ್ತದೆ. ಕೆಲವರಿಗೆ ಆರ್ಥಿಕ ಪರಿಸ್ಥಿತಿ ಹಾಗೂ ಸಾಮಾಜಿಕ ಸ್ಥಾನ ಮಾನಗಳಿಗೆ ಧಕ್ಕೆ ಉಂಟಾಗಬಹುದು.ಸರಿಯಾದ ದಾರಿಯಲ್ಲಿ ನಿಮ್ಮ ಉತ್ಸಾಹ ಮತ್ತು ಬುದ್ಧಿವಂತಿಕೆಯನ್ನು ಬಳಸಿದಲ್ಲಿ ಯಶಸ್ಸು ಖಂಡಿತ. ವ್ಯಾಪಾರವನ್ನು ಸಂಭಂಧಗಳೊಡನೆ ಸೇರಿಸುವುದರಿಂದ ನೀವು ಇಂದು ನಷ್ಟ ಅನುಭವಿಸಲಿದ್ದೀರಿ. ಧನವ್ಯಯ. ಪ್ರೀತಿಪಾತ್ರರಿಂದ ಸಂತಸ. ನೀವು ರಂಜನೆ ಪಡೆಯಬೇಕಿದ್ದರೆ ಮತ್ತು ಇತರರನ್ನೂ ಸತ್ಕರಿಸಬೇಕೆಂದಿದ್ದರೆ, ಬೆರೆಯಿರಿ.

ಕನ್ಯಾ : ನಿಮ್ಮ ಏಕಾಗ್ರತಾ ಶಕ್ತಿಗಳ ಮೂಲಕ ಹೊಸತನ್ನು ಕಲಿಯುತ್ತೀರಿ ಮತ್ತು ನೀವು ಕಲಿತಿರುವುದನ್ನು ಹೆಮ್ಮೆಯಿಂದ ಮತ್ತು ಸರಾಗವಾಗಿ ಹೇಳುತ್ತೀರಿ. ನಿಮ್ಮ ಕೋಪದ ಮೇಲೆ ನಿಯಂತ್ರಣವಿರಲಿ. ಆರ್ಥಿಕ ಒತ್ತಡಗಳು ಎದುರಾಗುವ ಸಾಧ್ಯತೆಗಳಿರುವುದರಿಂದ ಅನಗತ್ಯ ವೆಚ್ಚದಲ್ಲಿ ಕಡಿಮೆ ಮಾಡುವುದು ಸೂಕ್ತ. ಕೃಷಿ ಕ್ಷೇತ್ರದವರಿಗೆ ಉತ್ತಮ ಧನಲಾಭ. ಅವಿವಾಹಿತರಿಗೆ ವಿವಾಹ ಯೋಗವಿದೆ.

ತುಲಾ : ಸ್ವಾರ್ಥಿಗಳಾಗದಿರಿ.ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.ನಿರುದ್ಯೋಗಿಗಳಿಗೆ ಉದ್ಯೋಗವಕಾಶ. ಪೂರಕ ವಾತಾವರಣವಿರುತ್ತದೆ. ನಿಮ್ಮ ವಿರೋಧಿಗಳ ಯೋಜನೆಗಳು ತಲೆಕೆಳಗಾಗುತ್ತವೆ.ಪ್ರೇಮ ಮತ್ತು ಪ್ರಣಯ ಸಲ್ಲಾಪದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.ಸಂತಸದ ಕ್ಷಣಗಳು ಎದುರಾಗಲಿವೆ.

ವೃಶ್ಚಿಕ : ಬಂಧು ಮಿತ್ರರೊಡನೆ ಜಾಗೃತೆಯಿಂದ ಮಾತನಾಡಬೇಕಾಗುತ್ತದೆ, ಇಲ್ಲವಾದಲ್ಲಿ ಮನಸ್ಥಾಪವಾಗುವ ಸಾಧ್ಯತೆಗಳು ಎದುರಾಗುತ್ತವೆ. ಕೃಷಿಯಿಂದ ಹೆಚ್ಚಿನ ಲಾಭ.ಕೃಷಿಕರಿಗೆ ಬೆಳೆ ಹಾನಿ ಸಾಧ್ಯತೆ. ಪ್ರೇಮ ವ್ಯವಹಾರಗಳಲ್ಲಿ ಧನಾತ್ಮಕ ಪ್ರತಿಕ್ರಿಯೆ ಕಂಡುಬರಲಿದೆ. ನಿಮ್ಮ ಹಣಕಾಸು ವಿಷಯಗಳಲ್ಲಿ ಮುಂದುವರಿಯುವಾಗ ಎಚ್ಚರಿಕೆಯಿಂದಿರಬೇಕಾಗುತ್ತದೆ. ಹಿರಿಯ ಅದಿಕಾರಿಗಳಿಂದ ಕಿರುಕುಳ.

ಧನು : ವ್ಯವಹಾರಕ್ಕೆ ದೀರ್ಘಕಾಲದಿಂದ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಹೊಸ ಯೋಜನೆಗಳು ಮತ್ತು ಯೋಚನೆಗಳಲ್ಲಿ ನಿಮಗೆ ಯಶಸ್ಸು ದೊರೆಯಲಿದೆ.ಮಾನಸಿಕ ನೆಮ್ಮದಿ ದೊರೆಯಲಿದೆ. ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ.ಕೆಲವು ಅಡೆತಡೆಗಳ ಬಳಿಕ ಯಶಸ್ಸು ನಿಮ್ಮದಾಗಲಿದೆ. ವೈವಾಹಿಕ ಜೀವನವು ಇಂದು ಸಿಹಿ ಅನುಭವ ನೀಡುತ್ತದೆ. ಕೌಟಂಬಿಕ ನೆಮ್ಮದಿ ದೊರೆಯಲಿದೆ.

ಮಕರ : ಮಿತ್ರರ ಸಹಕಾರದಿಂದ ವ್ಯಾಪಾರದಲ್ಲಿ ಪ್ರಗತಿ, ಸಜ್ಜನರ ಸಹವಾಸ ಲಭಿಸುತ್ತದೆ.ಎಲ್ಲರಿಂದಲೂ ಆದರ ಗೌರವಗಳನ್ನು ಪಡೆಯುತ್ತಾರೆ, ಸಂತಾನ ಪ್ರಾಪ್ತಿ.ಮನೆಯಲ್ಲಿನ ಅಸಹಕಾರದಿಂದ ಮಾನಸಿಕ ಅಶಾಂತಿ. ಮನರಂಜನೆಗಾಗಿ ಯೋಚಿಸುವ ಸಮಯ ಇದು. ಶೇರುಗಳಲ್ಲಿ ಬಂಡವಾಳ ಹೂಡದಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಆರೋಗ್ಯ ಉತ್ತಮವಾಗಿರುತ್ತದೆ.ಉದ್ಯೋಗದಲ್ಲಿ ಬಡ್ಡಿ ಅವಕಾಶ.

ಕುಂಭ : ಉದ್ಯೋಗದಲ್ಲಿರುವ ಜನರು ತಮ್ಮ ಕೆಲಸಗಳಲ್ಲಿ ಸಫಲತೆ ಕಾಣುತ್ತಾರೆ. ನಿಮ್ಮ ಆರೋಗ್ಯದಲ್ಲಿ ಉತ್ತಮ ಪ್ರಗತಿ ಕಂಡುಬರುತ್ತದೆ. ಏಜೆನ್ಸಿಯವರಿಗೆ ಕಂಟ್ರಾಕ್ಟದಾರರಿಗೆ ಒಳ್ಳೆಯ ಅವಕಾಶ. ಸುಬ್ರಹ್ಮಣ್ಯ ಪ್ರಾರ್ಥನೆಯಿಂದ ಕಾರ್ಯ ಸಿದ್ದಿ. ಇಂದು ರಾತ್ರಿ ಸಂತೋಷವನ್ನಾಚರಿಸಲು ನಿಮ್ಮ ಹತ್ತಿರದವರೊಂದಿಗೆ ತೆರಳಬಹುದು.

ಮೀನ : ವಿಶೇಷವಾಗಿ ಗೃಹ ಸಂಬಂಧಿತ ಎಲ್ಲಾ ಸಂಗತಿಗಳು ಪೂರ್ಣಗೊಳ್ಳಬೇಕು ಎಂಬ ಮನೋಭಾವದೊಂದಿಗೆ ನೀವಿಂದು ಗಂಭೀರವದನರಾಗಿರುತ್ತೀರಿ. ಬಡ್ತಿ ದೊರೆಯುವ ಸಂಭವವಿದೆ. ಕೆಲವರು ನಿಮ್ಮಿಂದ ಧನಸಹಾಯವನ್ನು ಬಯಸುತ್ತಾರೆ. ಮುಖ್ಯ ಕೆಲಸವೊಂದರ ಪ್ರಯತ್ನದಲ್ಲಿ ನಿಮಗೆ ಹೆತ್ತವರ ನೆರವು ದೊರೆಯಲಿದೆ. ನ್ಯಾಯ ವ್ಯವಹಾರಗಳಲ್ಲಿ ಗೆಲುವು ಗಳಿಸಲಿದ್ದೀರಿ.ಮಹಿಳೆಯರು ತಮ್ಮ ವಾಕ್ಚಾತುರ್ಯದಿಂದ ಇತರರ ಗಮನ ಸೆಳೆಯುತ್ತಾರೆ.

ಜ್ಯೋತಿಷ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು

ಯಡಿ-ಈಶು  ಮುನಿಸು ಕೇಶವ ಕೃಪಾದಲ್ಲಿ ನಡೆದ ಸಂಧಾನ ಸಭೆ ವಿಫಲ

ಬೆಂಗಳೂರು: ಬಿಜೆಪಿ ಬಿಕ್ಕಟ್ಟು ದಿನದಿಂದ...


ಬಿಜೆಪಿ ಸೇರಿದ ಮಾಜಿ ಮುಖ್ಯಮಂತ್ರಿ ಎನ್.ಡಿ.ತಿವಾರಿ

ನವದೆಹಲಿ: ಹಿರಿಯ ಕಾಂಗ್ರೆಸಿಗ ಮತ್ತು...