Oyorooms IN

Saturday, 22nd July, 2017 4:29 PM

BREAKING NEWS

ಪ್ರಮುಖ ಸುದ್ದಿಗಳು

ಎಟಿಎಂ ನಲ್ಲಿ 4000 ಸಾವಿರ ಡ್ರಾ ಮಾಡಿದ್ರೆ 80 ಸಾವಿರ ಬಂತು..!!

ಮೈಸೂರು: ಮೈಸೂರಿನ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ 4 ಸಾವಿರ ಡ್ರಾ ಮಾಡಿದರೆ, ಬರೋಬ್ಬರಿ 80,000 ಬಂದಿದ್ದರಿಂದ ಜನರು ಆಶ್ಚರ್ಯಚಕಿತರಾಗಿದ್ದಾರೆ, ನಡೆದಿದೆಲ್ಲಾ ನಡೆದು ಹೋಯಿತು, ಈಗ ಬ್ಯಾಂಕ್ ಅಧಿಕಾರಿಗಳು ಹಣ ಡ್ರಾ ಮಾಡಿವರನ್ನು ಗುರುತಿಸಿ ಅವರಿಗೆ ಫೋನ್ ಮಾಡಿ ಹಣವನ್ನು ವಾಪಸ್ ಮರಳಿಸುವಂತೆ ಕೋರುತ್ತಿದ್ದಾರೆ.

ಮೈಸೂರಿನ ಕುಂಬಾರಕೊಪ್ಪದ ಬಸ್ಟಾಂಡ್ ನಲ್ಲಿರುವ ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದಲ್ಲಿ ಸುಂದರೇಶ್ ಎನ್ನುವವರು 4,000 ಡ್ರಾ ಮಾಡುವುದಕ್ಕೆ ಹೋಗಿದ್ದಾರೆ, ಸುಂದರೇಶ್ ನಾಲ್ಕು ಸಾವಿರ ಡ್ರಾ ಮಾಡಿದರೆ, 2,000 ಮುಖಬೆಲೆಯ 80 ಸಾವಿರ ಬಂದಿದೆ. 80,000 ಬಂದಿದ್ದರಿಂದ ಸುಂದರೇಶ್ ತನ್ನ ಸ್ನೇಹಿತರಿಗೆ ಫೋನ್ ಮಾಡಿ ಅವರಿದ್ದಲೂ ತಲಾ 4,000 ಹಣ ಡ್ರಾ ಮಾಡಿಸಿದ್ದಾನೆ, ಇದರಿಂದಾಗಿ ಸುಂದರೇಶ್ ಹಾಗೂ ಸ್ನೇಹಿತರಿಗೆ ಬರೋಬ್ಬರಿ 4 ಲಕ್ಷರೂಪಾಯಿ ಸಿಕ್ಕಿದೆ.

ಎಟಿಎಂನಿಂದ ಈ ರೀತಿ ಹಣ ಬಂದಿದ್ದರಿಂದ ಶಾಕ್ ಗೆ ಒಳಗಾದ ಸುಂದರೇಶ್ ಬ್ಯಾಂಕ್ ಅಧಿಕಾರಿಗಳಿಗೆ ಫೋನ್ ಮಾಡಿ ಹಣ ಬರುತ್ತಿರುವುದನ್ನು ಹೇಳಿದ್ದಾನೆ, ಬ್ಯಾಂಕ್ ಅಧಿಕಾರಿಗಳು ಬಂದು ಎಟಿಎಂ ಕೇಂದ್ರವನ್ನು ಬಂದ್ ಮಾಡಿದ್ದು, ಸುಂದರೇಶ್ ಹಾಗೂ ಸ್ನೇಹಿತರು ತಾವು ಡ್ರಾ ಮಾಡಿದ್ದ ಹಣವನ್ನು ವಾಪಾಸ್ ನೀಡಿದ್ದಾರೆ.

ಎಟಿಎಂ ಕೇಂದ್ರದಲ್ಲಿ ಹಣವನ್ನು ತುಂಬುವ ಸೆಕ್ಯೂರ್ ವ್ಯಾಲ್ಯೂ ಸಂಸ್ಥೆಯ ಸಿಬ್ಬಂದಿ 100 ರೂಪಾಯಿ ನೋಟು ಇಡುವ ಜಾಗದಲ್ಲಿ 2,000 ನೋಟು ಇಟ್ಟಿದ್ದರಿಂದ ಹೀಗೆ ಆಗಿದೆ ಎಂದು ಬ್ಯಾಂಕ್ ಅಧಿಕಾರಿಗಳ ವಿಚಾರಣೆ ವೇಳೆ ಬೆಳಕಿಗೆ ಬಂದಿದ್ದು, ಈ ವಿಚಾರ ಬೆಳಕಿಗೆ ಬರುವ ವೇಳೆಗಾಗಲೇ ದೊಡ್ಡ ಮೊತ್ತದ ಹಣವನ್ನು ಖಾತೆದಾರರು ಡ್ರಾ ಮಾಡಿದ್ದಾರೆ, ಈಗ ಬ್ಯಾಂಕ್ ಸಿಬ್ಬಂದಿ ಅವರಿಗೆ ಫೋನ್ ಮಾಡಿ ಹಣವನ್ನು ವಾಪಸ್ ನೀಡುವಂತೆ ಮನವಿ ಮಾಡುತ್ತಿದ್ದಾರೆ.

English summary: Atm card swiped withdraw 4 thousand rupees but customer got 80 thousand rupees in mysore

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...