Oyorooms IN

Sunday, 28th May, 2017 12:05 AM

BREAKING NEWS

ಧಾರವಾಡ

ಅಯ್ಯಪ್ಪನಿಗಾಗಿ ಬೆತ್ತಲಾದ ಮಾಲಾಧಾರಿಗಳು: ನಗ್ನ ಪೂಜೆ

ಧಾರವಾಡ:  ಸಂಕ್ರಾಂತಿ ಮಕರ ಜ್ಯೋತಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೈಗೆ ತೆರಳುತ್ತಾರೆ, 40 ದಿನಗಳ ವಿಶೇಷ ವ್ರತ ಕೈಗೊಳ್ಳುವ ಮಾಲಾಧಾರಿಗಳು, ಸಂಸಾರ ಜಂಜಾಟದಿಂದ ಹೊರಗುಳಿದು, ಅಯ್ಯಪ್ಪನ ಪೂಜೆಯಲ್ಲಿ ತಲ್ಲೀನರಾಗುವುದು ವಾಡಿಕೆ. ಆದರೆ ಧಾರವಾಡದ ಕಲಘಟಗಿಯಲ್ಲಿ ಮಾತ್ರ ಕೆಲ ಮಾಲಾಧಾರಿಗಳು ಅಯ್ಯಪ್ಪನಿಗಾಗಿ ಬೆತ್ತಲೆ ಪೂಜೆ ಮಾಡುತ್ತಿದ್ದಾರೆ.

ಕಲಘಟಗಿ ತಾಲ್ಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಹೊಲದಲ್ಲಿ ಬೀಡುಬಿಟ್ಟಿರುವ ನಾಲ್ವರು ಅಯ್ಯಪ್ಪ ಮಾಲಾಧಾರಿಗಳು, ನಾಗಾ ಸಾಧುಗಳಂತೆ ಬೆತ್ತಲಾಗಿ 15 ದಿನಗಳಿಂದ ಪೂಜೆ ಪುನಸ್ಕಾರದಲ್ಲಿ ತೊಡಗಿಕೊಂಡಿದ್ದಾರೆ. ಅಯ್ಯಪ್ಪ ಮಾಲಾಧಾರಿಗಳ ಈ ವಿಚಿತ್ರ ಆಚರಣೆಯಿಂದ ಗ್ರಾಮದಲ್ಲಿನ ಮಹಿಳೆಯರು ಹೊಲಗಳಿಗೆ ಹೋಗಲು ಮುಜುಗರ ಪಡುತ್ತಿದ್ದಾರೆ.

ನಗ್ನರಾಗಿ ಅಯ್ಯಪ್ಪನ ಪೂಜೆ ಮಾಡುತ್ತಿರುವ ಮಾಲಾಧಾರಿಗಳು ಮಾತ್ರ ಇದೊಂದು ಕಠಿಣ ವ್ರತ ಇದನ್ನು ಈ ರೀತಿ ಮಾಡುವುದರಿಂದ ಸಿದ್ಧಿ ದೊರೆಯುತ್ತದೆ ಎಂದು ಹೇಳಿದ್ದಾರೆ, ಏನಾದ್ರೂ ಆಗಲಿ ಅಯ್ಯಪ್ಪ ಮಾಲಾಧಾರಿಗಳ ಭಕ್ತಿ ಗ್ರಾಮಸ್ಥರ ಪಾಲಿಗೆ ಅಯ್ಯಯ್ಯಪ್ಪ ಎನ್ನುವಂತಾಗಿರುವುದು ಸುಳ್ಳಲ್ಲ.

English summary : Ayyappa votary nude worship in Dharwad

ಧಾರವಾಡ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...