Oyorooms IN

Thursday, 29th June, 2017 4:10 PM

BREAKING NEWS

ಚಿಕ್ಕಬಳ್ಳಾಪುರ

ಬಾಲಕಿ ಮೇಲೆ ಅತ್ಯಾಚಾರವೆಸಗಿ ಎಸ್ಕೇಪ್ ಆದ ಯುವಕ

ಚಿಕ್ಕಬಳ್ಳಾಪುರ: ಅಪ್ರಾಪ್ತ ಬಾಲಕಿ ಮೇಲೆ ಯುವಕನೊಬ್ಬ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಚಿಂತಾಮಣಿ ತಾಲೂಕಿನ ಹೆಬ್ಬಾರ ಗ್ರಾಮದಲ್ಲಿ ನಡೆದಿದೆ. ಕರಿಯಪಲ್ಲಿಯ ಖಾಸಗಿ ಶಾಲೆಯಲ್ಲಿ ನಾಲ್ಕನೆ ತರಗತಿ ಓದುತ್ತಿದ್ದ ಬಾಲಕಿ ಶಾಲೆಯಲ್ಲಿ ಜ್ವರ ಬಂದ ಕಾರಣ ಶಾಲೆಯವರು ಮಗುವನ್ನು ಮನೆಗೆ ಕರೆದುಕೊಂಡು ಹೋಗುವಂತೆ ಪೋಷಕರಿಗೆ ತಿಳಿಸಿದ್ದಾರೆ. ಈಕೆಯ ತಂದೆಗೆ ಹುಷಾರಿಲ್ಲದ ಕಾರಣ ಸಂಬಂಧಿಕರಾದ ಕಲ್ಯಾಣ್‍ಗೆ ಮಗುವನ್ನು ಕರೆತರಲು ಕಳುಹಿಸಿದ್ದರು. ಶಾಲೆಯಿಂದ ಮಗುವನ್ನು ಬೈಕ್‍ನಲ್ಲಿ ಕರೆತರುವ ಮಾರ್ಗಮಧ್ಯೆ ಈಕೆಯ ಮೇಲೆ ಅತ್ಯಾಚಾರವೆಸಗಿ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಜರುಗಿಸಿದ್ದಾರೆ.

ಚಿಕ್ಕಬಳ್ಳಾಪುರ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...