Oyorooms IN

Friday, 23rd June, 2017 12:24 PM

BREAKING NEWS

ಜಿಲ್ಲಾ ಸುದ್ದಿಗಳು

ಫೇ‌ಸ್‌ಬುಕ್ ಪೋಸ್ಟ್‌ ವೈರಲ್‌ ಆದ್ಮೇಲೆ ಉಲ್ಟ ಹೊಡೆದ ಪಿ.ಎಸ್‌.ಐ ಗಾಯತ್ರಿ

ಪೋಸ್ಟ್‌ ವೈರಲ್‌ ಆದ್ಮೇಲೆ ಉಲ್ಟ ಹೊಡೆದ ಮಹಿಳಾ ಪಿ.ಎಸ್‌.ಐ

ಬಳ್ಳಾರಿ : ಪೋಲಿಸ್‌ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗತ್ತಿಗೆ ತಿಳಿಯುತ್ತಿರುವ ಸಮಯದಲ್ಲಿ ಪೋಲಿಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಘಟನೆಗಳು ಇರುಸು ಮುರುಸು ಉಂಟು ಮಾಡುತ್ತಿದೆ. ಈ ನಡುವೆ ಆಗಸ್ಟ್‌ 26 ರಂದು ಪೋಸ್ಟ್‌ ಮಾಡಿದ್ದ ಗಾಯತ್ರಿ ಫರ್ಹಾನ್ ಈಗ ಆ ಪೋಸ್ಟ್ ಅನ್ನು ಡೀಲಿಟ್‌ ಮಾಡಿ, ಮತ್ತೊಂದು ಸ್ಟೇಟಸ್ ಅನ್ನು ಹಾಕಿದ್ದಾರೆ.

ನನ್ನ ಸ್ಟೇಟಸ್ ಬಣ್ಣ ನೀಡುವ ಪ್ರಯತ್ನಗಳನ್ನು ಮಾಡಬೇಡಿ ನಾನು ಸಾಮಾನ್ಯರಂತೆ ಮಾತನಾಡಿರುವೆ ಎಂದಿದ್ದಾರೆ.
ಗಾಯತ್ರಿ ಫರ್ಹಾನ್ ಈ ಹಿಂದೆ ಫೇಸ್ಬುಕ್ ನಲ್ಲಿ ಏನು ಹೇಳಿಕೊಂಡಿದ್ದರು. ಪೋಲಿಸ್‌ ಇಲಾಖೆಯಲ್ಲಿ ಮಹಿಳಾ ಪೋಲಿಸರನ್ನು ಜನರು ಒಪ್ಪಿಕೊಳ್ಳುವುದು ಬಹಳ ಕಷ್ಟ, ಈ ಪರಿಸ್ಥಿತಿಯನ್ನು ನಾನು ಇಲಾಖೆ ಸೇರಿಕೊಂಡ ಸಮಯದಿಂದ ನೋಡಿದ್ದೇನಮೆ. ಇಲಾಖೆಯಲ್ಲಿ ಪುರಷರಿಗಿಂತಲೂ ಮಹಿಳೆಯರು ಹೆಚ್ಚು ಶ್ರಮ ಪಡುತ್ತಾರೆ. ಆದರೆ, ಈ ಪರಿಶ್ರಮವನ್ನು ಯಾರೂ ಗುರ್ತಿಸುವುದಿಲ್ಲ.

ಕಳೆದ ಏಳು ವರ್ಷದಿಂದ ಪೋಲಿಸ್ ಇಲಾಖೆಯಲ್ಲಿ 24×7 ಕೆಲಸ ಮಾಡುತ್ತಿರುವೆ ಆದರೆ ಇಲ್ಲಿನ ಪರಿಸ್ಥಿಗೆ ಹೊಂದಿಕೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿರುವೆ. ಇಲಾಖೆಯಲ್ಲಿ ನಡೆಯುವ ಕೆಲ ಘಟನೆಗಳು ಕಣ್ಣಲ್ಲಿ ನೀರು ತರಿಸುತ್ತವೆ. ಆದರೆ, ಆ ಕಣ್ಣೀರು ಎಲ್ಲಿ ನಮ್ಮನ್ನು ಕುಗ್ಗಿಸುತ್ತದೆಯೋ.

ಎಲ್ಲಿ ನಮ್ಮ ಆತ್ಮವಿಶ್ವಾಸವನ್ನು ನಾಶಪಡಿಸುತ್ತದೆಯೇ ಎಂದು ಬೇರೊಬ್ಬರ ಮುಂದೆ ತೋರಿಸಿಕೊಳ್ಳುವುದಿಲ್ಲ. ಉದ್ಯೋಗದಲ್ಲಿ ತೃಪ್ತಿಯಿಲ್ಲ.

ನನ್ನೊಂದಿಗೆ ಇಲಾಖೆಗೆ ಸೇರಿದ್ದ ಸಾಕಷ್ಟು ಮಂದಿ ಕೆಲಸ ಬಿಟ್ಟಿದ್ದಾರೆ ಮಹಿಳೆಯರು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸುವುದು ಕಷ್ಟಕರವಾಗಿದೆ. ಇದೊಂದು ಒನ್ ಮ್ಯಾನ್ ಆರ್ಮಿಯಂತಿದೆ. ಮಾಡು ಇಲ್ಲವೇ ಮಡಿ ಎಂಬ ತತ್ವದ ಬಗ್ಗೆ ನಂಬಿದ್ದೇನೆಂದು ಎಂದು ಗಾಯತ್ರಿ ಅವರು ಈ ಹಿಂದೆ ಮಾಡಿದ್ದ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದರು.

ಇನ್ನು ಘಟನೆ ಬಗ್ಗೆ ಸಮಗ್ರವಾದ ವರದಿ ನೀಡುವಂತೆ ಗೃಹ ಸಚಿವ ಜಿ.ಪರಮೇಶ್ವರ್‍ ಅವರು ಸೂಚನೆ ನೀಡಿದ್ದಾರೆ.

psi gayatri-post

ಜಿಲ್ಲಾ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...