Oyorooms IN

Saturday, 22nd July, 2017 4:28 PM

BREAKING NEWS

ಕೊಡಗು

ಬಾಪೂಜಿ ಸೇವಾ ಕೇಂದ್ರಕ್ಕೆ ಎಂ.ಆರ್.ಸೀತಾರಾಂ ಚಾಲನೆ

bapuji seva kendara

ಮಡಿಕೇರಿ : ಗ್ರಾಮೀಣ ಜನತೆ ಸಾಮಾಜಿಕ ಶೈಕ್ಷಣಿಕ, ವಾಣಿಜ್ಯ ಹಾಗೂ ಕೃಷಿ ಚಟುವಟಿಕೆಗಳ ಸಂಬಂಧಿಸಿದ ದಾಖಲೆಗಳನ್ನು ತ್ವರಿತವಾಗಿ ಪಡೆದುಕೊಳ್ಳುವಂತಾಗಲು ಸಕರ್ಾರ ಪಂಚಾಯತ್ 100 ಬಾಪೂಜಿ ಸೇವಾ ಕೇಂದ್ರವನ್ನು ಆರಂಭಿಸಿದ್ದು, ಆ ದಿಸೆಯಲ್ಲಿ ಜಿಲ್ಲೆಯಲ್ಲಿಯೂ ಸಹ ಬಾಪೂಜಿ ಸೇವಾ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಂ.ಆರ್.ಸೀತಾರಾಂ ಅವರು ಶನಿವಾರ ಚಾಲನೆ ನೀಡಿದರು.

ಕುಶಾಲನಗರ ಬಳಿಯ ಗುಡ್ಡೆಹೊಸೂರು ಗ್ರಾ.ಪಂ.ನಲ್ಲಿ ಬಾಪೂಜಿ ಸೇವಾ ಕೇಂದ್ರದಲ್ಲಿ ಆನ್ಲೈನ್ನಲ್ಲಿ ಆರ್ಟಿಸಿ ದಾಖಲೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಚಾಲನೆ ನೀಡಿದರು.

ವಿವಿಧ ಇಲಾಖೆಗಳ ಸೇವೆಗಳನ್ನು ಒಂದೇ ಸೂರಿನಡಿ ಒದಗಿಸಲು ಸಕರ್ಾರ ಮುಂದಾಗಿದೆ. ಆ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಸಾರ್ವಜನಿಕರಿಗೆ ಅವಶ್ಯವಿರುವ 43 ಸೇವೆಗಳು ತ್ವರಿತವಾಗಿ ಬಾಪೂಜಿ ಸೇವಾ ಕೇಂದ್ರದ ಮೂಲಕ ಸೌಲಭ್ಯ ದೊರೆಯಲಿದೆ ಎಂದರು.

ಗ್ರಾ.ಪಂ.ನ ಪಂಚತಂತ್ರ ತಂತ್ರಾಂಶದೊಂದಿಗೆ ನಾಡಕಚೇರಿ ತಂತ್ರಾಂಶ ಮತ್ತು ಭೂಮಿ ತಂತ್ರಾಂಶ ಸಮಗ್ರೀಕರಣಗೊಳಿಸಲಾಗಿದ್ದು, ಇದರಿಂದ ಅಟಲ್ ಜೀ ಜನಸ್ನೇಹಿ ಕೇಂದ್ರದಡಿ ನಾಡಕಚೇರಿ ಮುಖಾಂತರ ವಿತರಿಸುತ್ತಿರುವ ಕಂದಾಯ ಇಲಾಖೆಯ 39 ಸೇವೆಗಳನ್ನು ಗ್ರಾಮ ಪಂಚಾಯಿತಿಗಳ ಪಂಚತಂತ್ರ ತಂತ್ರಾಂಶದಲ್ಲಿ ಲಭ್ಯವಾಗುವಂತೆ ಮಾಡಲಾಗಿದೆ ಎಂದು ಎಂ.ಆರ್.ಸೀತಾರಾಂ ಅವರು ವಿವರಿಸಿದರು.

ಜಿ.ಪಂ ಸಿ.ಇ.ಓ ಚಾರುಲತಾ ಸೋಮಲ್ ಅವರು ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಆರ್.ಟಿ.ಸಿ. ಮತ್ತಿತರ ಕಂದಾಯ ಇಲಾಖೆಯ ದಾಖಲೆಗಳನ್ನು ಪಡೆದುಕೊಳ್ಳಲು ಸಮೀಪದ ಗ್ರಾ.ಪಂ.ಯ ಪಂಚತಂತ್ರ ತಂತ್ರಾಂಶದ ಮೂಲಕ ನಿಗದಿತ ಸೇವಾ ಶುಲ್ಕವನ್ನು ಪಾವಿತಿಸಲು ಹಾಗೂ ಬೇಡಿಕೆಯನ್ನು ಸಲ್ಲಿಸಲು ಅವಕಾಶ ಕಲ್ಪಿಸುವ ವ್ಯವಸ್ಥೆ ಇದೆ ಎಂದರು.

ಅದರಂತೆ ಪಂಚತಂತ್ರ ತಂತ್ರಾಂಶದ ಮೂಲಕ ಸಾರ್ವಜನಿಕರು ಕಂದಾಯ ಇಲಾಖೆಯ 40 ಸೇವೆಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರು ತಮಗೆ ಬೇಕಿರುವ ದಾಖಲೆಗಳನ್ನು ಗ್ರಾ.ಪಂ.ಗೆ ಸಲ್ಲಿಸಬಹುದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 43 ಜಿ. 2ಸಿ ಸೇವೆಗಳು ಹಾಗೂ ಕಂದಾಯ ಇಲಾಖೆಯ 40 ಜಿ2ಸಿ ಸೇವೆಗಳನ್ನು 2016ರ ಜುಲೈ 1 ರಿಂದ ನೀಡಲಾಗುತ್ತಿದ್ದು, ಇನ್ನಿತರ ಬಿ2ಸಿ17 ಸೇವೆಗಳನ್ನು ಎರಡನೇ ಹಂತದಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ಡಾ.ರಿಚಡರ್್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಉಪ ವಿಭಾಗಧಿಕಾರಿ ಡಾ.ನಂಜುಂಡೇ ಗೌಡ, ಜಿ.ಪಂ.ಸದಸ್ಯರಾದ ಕೆ.ಪಿ.ಚಂದ್ರಕಲಾ, ಲತೀಫ್, ನಗರಸಭೆ ಅಧ್ಯಕ್ಷರಾದ ತಹಶೀಲ್ದಾರರಾದ ಬಿ.ಸಿ.ಶಿವಪ್ಪ, ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ, ಪಿಡಿಒ, ಪ್ರಮುಖರಾದ ಬಿ.ಟಿ.ಪ್ರದೀಪ್, ಕೆ.ಎಂ.ಲೋಕೇಶ್, ವಿ.ಪಿ.ಶಶಿಧರ ಮತ್ತಿತರರು ಇದ್ದರು.

ಕೊಡಗು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...