Oyorooms IN

Thursday, 17th August, 2017 4:57 PM

BREAKING NEWS

ತುಮಕೂರು

ಆರು ವರ್ಷಗಳಿಂದ ಬರಕ್ಕೆ ತುತ್ತಾಗಿರುವ ತುಮಕೂರು ಜಿಲ್ಲೆ

ತುಮಕೂರು: ಕಳೆದ ಆರು ವರ್ಷಗಳಿಂದ ಜಿಲ್ಲೆಯನ್ನು ಬಿಟ್ಟು ಬಿಡದಂತೆ ಕಾಡುತ್ತಿರುವ ಬರ, ಈ ವರ್ಷ ಮಾತ್ರ ರೈತರು, ಕೃಷಿ ಕಾರ್ಮಿಕರು ಉಸಿರಾಡಲು ಆಗದಂತಹ ಸ್ಥಿತಿಯನ್ನು ತಂದಿಟ್ಟಿದೆ. ವರ್ಷದಿಂದ ವರ್ಷಕ್ಕೆ ಮಳೆ ನಂಬಿ ಭೂಮಿಗೆ ಬಿತ್ತನೆ ಮಾಡಿ ಕೈ ಸುಟ್ಟುಕೊಳ್ಳುವ ರೈತರ ಸಂಖ್ಯೆಯೇ ಹೆಚ್ಚಿದ್ದು,ಎನ್.ಡಿ.ಆರ್.ಎಫ್ ನಿಯಮ ಕೂಡ ಕೆಲವೊಮ್ಮೆ ರೈತರಿಗೆ ಬೆಳೆವಿಮೆ ಸಿಗದಂತಹ ಸ್ಥಿತಿಯನ್ನು ತಂದೊಡ್ಡುತ್ತಿದ್ದು,ಇದು ರೈತರ ಉರಿಯುವ ಗಾಯಕ್ಕೆ ಉಪ್ಪು ಸವರಿದಂತಾಗಿದೆ.

ಕಳೆದ ಎರಡು ಮೂರು ವರ್ಷಗಳಿಗೆ ಹೊಲಿಕೆ ಮಾಡಿದರೆ ಈ ಸಾಲಿನ ಬರ ಹೆಚ್ಚು ಗಂಭೀರವಾಗಿದೆ.ಮುಂಗಾರಿನ ವಿಫಲವಾದರೆ,ಹಿಂಗಾರು ಮಳೆಯಾದರೂ ಕೈ ಹಿಡಿದು ರಾಗಿ, ಜೋಳದಂತಹ ಒಂದಿಷ್ಟು ಆಹಾರ ಪದಾರ್ಥಗಳನ್ನು ಬೆಳೆಯಲಾದರೂ ಅವಕಾಶ ಲಭಿಸುತಿತ್ತು.ಈ ವರ್ಷ ಹಿಂಗಾರು ಮಳೆಯೂ ಸಹ ಶೇ100 ವಿಫಲವಾಗಿದ್ದು, ಜಾನುವಾರುಗಳ ಜೊತೆ ಜನರಿಗೂ ಗಂಜೀ ಕೇಂದ್ರ ತೆರೆಯುವಂತಹ ಅನಿವಾರ್ಯತೆ ಸೃಷ್ಟಿಸಿದರೂ ಆಶ್ಚರ್ಯವಿಲ್ಲ.

ಜಿಲ್ಲೆಯ ಸುಮಾರು 4.35ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶದಲ್ಲಿ ಮುಂಗಾರಿನಲ್ಲಿ ಬಿತ್ತನೆಯಾಗಿದ್ದು 3.13 ಲಕ್ಷ ಆಂದರೆ ಶೇ79ರಷ್ಟು ಮಾತ್ರ. ಎಪ್ರಿಲ್,ಮೇ ನಲ್ಲಿ ಉತ್ತಮ ಮಳೆಯಾದುದ್ದನ್ನೇ ನಂಬಿದ ರೈತರ ರಾಗಿ, ಜೋಳ,ಶೇಂಗಾ, ತೋಗರಿ, ಮುಸುಕಿನ ಜೋಳ ಮತ್ತಿತರ ಧಾನ್ಯಗಳನ್ನು ಬಿತ್ತನೆ ಮಾಡಿ ಇನ್ನೇನ್ನು ಹೂಬಿಟ್ಟು, ಕಾಳುಕಟ್ಟ ಬೇಕು ಎಂಬ ಕಾಲಕ್ಕೆ ಆಂದರೆ ಜುಲೈ, ಆಗಸ್ಟ್,ಸೆಪ್ಟಂಬರ್,ಆಕ್ಟೋಬರ್ ತಿಂಗಳಲ್ಲಿ ಶೇ79ರಿಂದ 85ರಷ್ಟು ಮಳೆಯ ಕೊರತೆಯಿಂದ ಬಿತ್ತನೆ ಮಾಡಿದ್ದ 3.13ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ 2.47 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಿದ್ದ ಸಂಪೂರ್ಣ ಬೆಳೆ ನಷ್ಟವಾಗಿದ್ದು, ಭೂಮಿಗೆ ಬಿತ್ತನೆ ಮಾಡಿದ್ದ ಶೇನ76ರಷ್ಟು ಬೆಳೆ ನಷ್ಟ ಅನುಭವಿಸಿದೆ.

ಕೃಷಿ 160 ಕೋಟಿ ರೂ ನಷ್ಟ: ಜಿಲ್ಲೆಯ 2.18ಲಕ್ಷ ರೈತರು ಈ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿದ್ದು,ಜಿಲ್ಲಾಡಳಿತ ರೂಪಿಸಿದ ವಿಶೇಷ ತಂತ್ರಜ್ಞಾನದ ಮೂಲಕ ನಿಖರವಾಗಿ ಬೆಳೆ ಹಾನಿಯನ್ನು ಅಂದಾಜಿಸಿದ್ದು, ಕೃಷಿ ಇಲಾಖೆಗೆ ಸಂಬಂಸಿದ 160.67 ಕೋಟಿ ರೂ ನಷ್ಟ ಸಂಭವಿಸಿದೆ.ಪ್ರಧಾನ ಮಂತ್ರಿಗಳ ಫಸಲ್ ಭೀಮಾ ಯೋಜನೆ ಹಾಗೂ ಇನ್ನಿತರ ವಿಮಾ ಯೋಜನೆಗಳಿಗೆ ಜಿಲ್ಲೆಯ 41062 ರೈತರು ಮಾತ್ರ ಹೆಸರು ನೊಂದಾಯಿಸಿದ್ದು,ಇವರಿಗೆ ಬೆಳೆ ವಿಮೆ ಹಣ ಲಭಿಸಿದರೆ, ಉಳಿದ 1.80ಲಕ್ಷ ರೈತರಿಗೆ ಯಾವುದೇ ಪರಿಹಾರವಿಲ್ಲದಂತಾಗಿದೆ.ಸರಕಾರ ಇವರ ನೆರವಿಗೆ ಬರಬೇಕೆನ್ನುವುದು ರೈತರ ಆಗ್ರಹವೂ ಆಗಿದೆ.

ತೋಟಗಾರಿಕೆ 85 ಕೋಟಿ ರೂ ನಷ್ಟ: ಜಿಲ್ಲೆಯ ಶೇ32.22ರಷ್ಟು ಪ್ರದೇಶದಲ್ಲಿ ಅಂದರೆ 2,27,352 ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ರೀತಿಯ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಿದ್ದು,ಇವುಗಳಲ್ಲಿ ಶೇ67.01 ಪ್ರದೇಶದಲ್ಲಿ ಅಂದರೆ 1.52 ಲಕ್ಷ ಹೆಕ್ಟೇರ್‌ನಲ್ಲಿ ತೆಂಗು ಮತ್ತು ಶೇ15.27ರಷ್ಟು ಪ್ರದೇಶದಲ್ಲಿ ಅಂದರೆ 34,219ಹೆಕ್ಟೇರ್‌ನಲ್ಲಿ ಅಡಿಕೆ ಬೆಳೆದರೆ, ಶೇ11.15ರಲ್ಲಿ ಹಣ್ಣಿನ ಬೆಳೆಗಳು, ಶೇ2.74ರಷ್ಟು ಪ್ರದೇಶದಲ್ಲಿ ತರಕಾರಿ ಬೆಳೆಗಳನು ಬೆಳೆಯುತ್ತಿದ್ದು, ಅಡಿಕೆ ಮತ್ತು ತೆಂಗು ಮಳೆಯಿಲ್ಲದೆ ಮರಗಳು ಹಾಳಾಗುತ್ತಿರುವುದು ಒಂದಡೆಯಾದರೆ,ಬೆಲೆಯಿಲ್ಲದಯೂ ಬೆಳೆಗಾರರು ಕಂಗಾಲಾಗಿದ್ದಾರೆ.ತೋಟಗಾರಿಕೆ ಇಲಾಖೆ ನಡೆಸಿದ ಸಮೀಕ್ಷೆಯ ಪ್ರಕಾರ 81,638 ತೋಟಗಾರಿಕಾ ಬೆಳೆಗಾರರು ನಷ್ಟಕ್ಕೆ ಒಳಗಾಗಿದ್ದು, 85.99ಕೋಟಿ ರೂ ನಷ್ಟ ಸಂಭವಿಸಿದೆ.ಕೃಷಿ ಮತ್ತು ತೋಟಗಾರಿಕೆಯಲ್ಲಿ ಸಣ್ಣ ಮತ್ತು ಮಧ್ಯಮ ಹಿಡುವಳಿಗಾರರೇ ಹೆಚ್ಚಿನ ಸಂಖ್ಯೆಯಲ್ಲಿ ನಷ್ಟಕ್ಕೆ ಒಳಗಾಗಿರುವುದು ಗಮನಾರ್ಹ ವಿಚಾರವಾಗಿದೆ.

16 ಗೋಶಾಲೆ ಆರಂಭ: ಈಗಾಗಲೇ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಂಡಿರುವ ಜಿಲ್ಲಾಡಳಿತ ಮೊದಲು ಹಂತದಲ್ಲಿ ಸುಮಾರು 16 ಗೋಶಾಲೆಗಳನ್ನು ಆರಂಭಿಸಿದೆ.ಅವಶ್ಯವಿದ್ದಲ್ಲಿ ಹೋಬಳಿಗೊಂದರಂತೆ ಗೋಶಾಲೆ ಆರಂಭಿಸಲು ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡಿದೆ.ಗೋಶಾಲೆಗಳಿಗೆ ಬರುವ ಜಾನುವಾರುಗಳಿಗೆ ಕುಡಿಯುವ ನೀರು,ಮೇವು ಒದಗಿಸುವ ಕೆಲಸ ಆರಂಭವಾಗಿದೆ.ಅಲ್ಲದೆ ಗೋಶಾಲೆಗಳನ್ನು ತಮ್ಮ ದನಗಳನ್ನು ಹೊಡೆದು ಕೊಂಡು ಬರುವ ಜನರಿಗೆ ಜಿಲ್ಲೆಯ ಸಹಕಾರ ಇಲಾಖೆ ವತಿಯಿಂದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ.ಆದರೆ ಈ ಹಿಂದೆ,ಆಂದರೆ 2012ರಲ್ಲಿ ಗೋಶಾಲೆಗಳಿಗೆ ಬರುವ ಜನರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿದ್ದ ಡಿ.ಸಿ.ಸಿ.ಬ್ಯಾಂಕ್ ಈ ಬಾರಿ ಎಲ್ಲಿಯೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಲ್ಲ.ಬೆಳಗ್ಗೆ 7-8 ಗಂಟೆಗೆ ದನಗಳನ್ನು ಗೋಶಾಲೆಗೆ ತರುವ ರೈತರು,ಸಂಜೆ 6 ಗಂಟೆಯವರೆಗೂ ಹಸಿದೆ ಇರಬೇಕಾದ ಪರಿಸ್ಥಿತಿ ಇದೆ.ನೋಟು ಬ್ಯಾನ್‌ನಿಂದ ಸಹಕಾರಿ ಬ್ಯಾಂಕ್‌ಗಳ ವಹಿವಾಟಿಗೆ ಹೊಡೆತ ಬಿದ್ದ ಪರಿಣಾಮ ಗೋಶಾಲೆಗಳಲ್ಲಿ ಮಧ್ಯಾಹ್ನ ಬಿಸಿಯೂಟ ಸಾಧ್ಯವಾಗಿಲ್ಲ ಎಂಬುದು ಸಾರ್ವಜನಿಕರಿಂದ ಕೇಳಿ ಬರುತ್ತಿರುವ ಮಾತಾಗಿದೆ.ಬರಪರಿಹಾರ ಪೂರ್ವಬಾವಿ ಸಭೆಯಲ್ಲಿ ಮಧ್ಯಾಹ್ನದ ಊಟ ನೀಡುವುದಾಗಿ ಹೇಳಿದ್ದ ಡಿ.ಸಿ.ಸಿ.ಬ್ಯಾಂಕ್ ಈ ನಿಟ್ಟಿನಲ್ಲಿ ಇದುವರೆಗೂ ಮುಂದಾಗಿಲ್ಲ.

ಜಿಲ್ಲೆಯಲ್ಲಿ ಬರ ನಿಧಾನವಾಗಿ ತನ್ನ ಕಾವನ್ನು ಹೆಚ್ಚಿಸಿಕೊಳ್ಳುತ್ತಿದ್ದು,ಅಲ್ಲಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ತಲೆದೊರಿವೆ. ಬರ ಎದುರಿಸಲು ಇದುವರೆಗೂ 294 ಕೊಳವೆ ಬಾವಿ ಕೊರೆಸಿದ್ದು, 206ರಲ್ಲಿ ನೀರು ದೊರೆತರೆ 88 ವಿಫಲವಾಗಿವೆ.19 ಹಳ್ಳಿಗಳಿಗೆ 28 ಟ್ಯಾಂಕರ್ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದ್ದು,ಮುಂದೆ ಮತಷ್ಟು ಭೀಕರವಾಗುವ ಎಲ್ಲಾ ಲಕ್ಷಣಗಳಿವೆ.ನರೇಗ ಮೂಲಕ ಜನರಿಗೆ ಉದ್ಯೋಗ ದೊರಕಿಸುವ ಪ್ರಯತ್ನ ನಡೆದಿದೆ.

ಬರವನ್ನು ಸಮರ್ಪಕವಾಗಿ ಎದುರಿಸಲು ಜಿಲ್ಲಾಡಳಿತ ಸಿದ್ದತೆ ಮಾಡಿಕೊಂಡಿದೆ.ಜಿಲ್ಲಾಡಳಿತದೊಂದಿಗೆ ಅಧಿಕಾರಿಗಳು, ಸಾರ್ವಜನಿಕರು ಕೈಜೋಡಿಸುವ ಅಗತ್ಯವಿದೆ.ಹತ್ತಿರದ ಗೋಶಾಲೆಗಳಿಗೆ ದನಗಳನ್ನು ತೆಗೆದುಕೊಂಡು ಹೋಗುವ ಕೆಲಸ ರೈತರು ಮಾಡಬೇಕಾಗಿದೆ.

ತುಮಕೂರು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...