Oyorooms IN

Tuesday, 17th January, 2017 10:16 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಚಿಕ್ಕಬಳ್ಳಾಪುರ

ನೀರಿನ ಅಭಾವ  ಕೃಷಿ ತ್ಯಜಿಸಲು ಸಜ್ಜಾಗಿರುವ ರೈತ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಕಳವಳ

2

ಶಿಡ್ಲಘಟ್ಟ: ನೀರಿನ ಅಭಾವ ಮತ್ತು ಪ್ರಕೃತಿಯ ಮುನಿಸುನಿಂದ ರೈತರು ಕೃಷಿ ಲಾಭದಾಯಕ ಬೆಳೆ ಅಲ್ಲವೆಂದು ಕೈಬಿಡುವ ನಿರ್ಧಾರಕ್ಕೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಸಕಲ ಸೌಲಭ್ಯಗಳನ್ನು ಮತ್ತು ಅಗತ್ಯ ತರಬೇತಿ ನೀಡಲು ಕ್ರಮ ಕೈಗೊಳ್ಳಬೇಕಾಗಿದೆ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಹೇಳಿದರು.
ತಾಲೂಕಿನ ಹಿತ್ತಲಹಳ್ಳಿ ಗ್ರಾಮದ ಹೆಚ್.ಜಿ.ಗೋಪಾಲಗೌಡ ತೋಟದಲ್ಲಿ ರಾಜ್ಯ ಮಾವು ಅಭಿವೃಧ್ಧಿ ಮತ್ತು ಮಾರುಕಟ್ಟೆ ನಿಗಮ ಹಾಗೂ ಸಿರಿ ರೈತ ಕೂಟ ಬೋದಗೂರು ಹಾಗೂ ಸಂಯುಕ್ತಾಶ್ರಯದಲ್ಲಿ ಮಾವು ಬೆಳೆಗಾರರಿಗೆ ಮಾವು ಸುಸ್ತಿರ ಕೃಷಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಆಧುನಿಕ ಯುಗದಲ್ಲಿ ರೈತರಿಗೆ ತಜ್ಞರಿಂದ ಅಗತ್ಯ ತರಬೇತಿ ನೀಡುವ ಜೊತೆಗೆ ಸರಕಾರದಿಂದ ವಿವಿಧ ಇಲಾಖೆಗಳಿಂದ ನೀಡುವ ಸೌಲಭ್ಯಗಳನ್ನು ರೈತರ ಮನೆಬಾಗಲಿಗೆ ತಲುಪಿಸಲು ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಬೇಕೆಂದ ಸೂಚಿಸಿ ರೈತರು ಸರಕಾರದಿಂದ ದೊರೆಯುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಕೃಷಿ ಬೆಳೆಗಳಲ್ಲಿ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಂಡು ಗುಣಮಟ್ಟವನ್ನು ಹೆಚ್ಚಿಸಿಕೊಂಡು ಅಧಿಕ ಇಳುವರಿ ಪಡೆದು ಆರ್ಥಿಕವಾಗಿ ಸದೃಡರಾಗಬೇಕೆಂದು ಕರೆ ನೀಡಿದರು.
ಜಿಪಂ ಸಿಇಓ ಮಂಜುನಾಥ್ ಮಾತನಾಡಿ ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಹಿನ್ನೆಲೆಯಲ್ಲಿ ಮಜಿನರೇಗಾ ಯೋಜನೆಯಡಿ ಬರಪರಿಹಾರ ಕಾಮಗಾರಿಗಳನ್ನು ನಡೆಸಲು ಗ್ರಾಮ ಪಂಚಾಯಿತಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ರೈತರು ಮಿತನೀರು ಬಳಕೆ ಮಾಡಿ ಮಿಶ್ರ ಬೆಳೆಗಳನ್ನು ಬೆಳೆಯಲು ಆಸಕ್ತಿವಹಿಸಬೇಕೆಂದು ಸಲಹೆ ನೀಡಿ ಸ್ವಚ್ಛಭಾರತ ಮಿಷನ್ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಸಿಕೊಂಡು ನೈರ್ಮಲ್ಯ ಕಾಪಾಡಿಕೊಳ್ಳಬೇಕೆಂದು ಕೋರಿದರು.

ತೋಟಗಾರಿಕೆ ಇಲಾಖೆಯ ನಿವೃತ್ತ ಅಪರ ನಿರ್ದೇಶಕ ಡಾ.ಎಸ್.ವಿ.ಹಿತ್ತಲಮನಿ ಹಾಗೂ ಸಸ್ಯರೋಗ ತಜ್ಞ ಡಾ.ದೇವರಾಜ್ ರೈತರಿಗೆ ತಾಂತ್ರಿಕ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಮಾವು ಅಭಿವೃಧ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದ್ರೇಗೌಡ,ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ,ಜಿಪಂ ಉಪ ನಿರ್ದೇಶಕ ನಾಗಭೂಷಣ್,ಕೃಷಿ ಪಂಡಿತ ಪುರಸ್ಕೃತ ಹಿತ್ತಲಹಳ್ಳಿ ಗೋಪಾಲಗೌಡ,ಕೆನರಾ ಬ್ಯಾಂಕಿನ ಎಜಿಎಂ ಬಸವರಾಜು,ನಬಾರ್ಡ್ ಬ್ಯಾಂಕಿನ ಡಿಡಿಎಂ ಚಿತ್ರಶ್ರೀಧರ್,ಹಾಪ್‌ಕಾಮ್ಸ್ ನಿರ್ದೇಶಕ ಮುತ್ತೂರು ಚಂದ್ರೇಗೌಡ,ಬೆಳ್ಳೂಟಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷ ವೆಂಕಟೇಶ್,ಮುಖಂಡರಾದ ಗಂಗನಹಳ್ಳಿ ವೆಂಕಟೇಶ್,ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಆನಂದ್ ಮತ್ತಿತರರು ಉಪಸ್ಥಿತರಿದ್ದರು.

ಚಿಕ್ಕಬಳ್ಳಾಪುರ ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...