Oyorooms IN

Wednesday, 25th January, 2017 6:50 AM

BREAKING NEWS

ಪ್ರಮುಖ ಸುದ್ದಿಗಳು

ಚಾಳಿ ಬಿಡದ ಪಾಕಿಸ್ತಾನ, ಬಾರಾಮುಲ್ಲಾದಲ್ಲಿ ದಾಳಿ, ನದಿಗೆ ಹಾರಿ ಉಗ್ರ ಪರಾರಿ..!!

strike

ಜಮ್ಮುಕಾಶ್ಮೀರ: ಭಾರತದ ಸರ್ಜಿಕಲ್ ಸ್ಟ್ರೈಕ್ ಬೆನ್ನಲ್ಲೆ ಬಾರಾಮುಲ್ಲಾದ ಜಾನ್ಬಾಜ್ ಪೋರಾದಲ್ಲಿರುವ ಸೇನಾ ನೆಲೆಯ ಮೇಲೆ ಭಾನುವಾರ ರಾತ್ರಿ ಉಗ್ರರು ದಾಳಿ ನಡೆಸಿದ್ದು, ದಾಳಿಯಲ್ಲಿ ಇಬ್ಬರು ಉಗ್ರರು ಭಾರತದ ಸೈನಿಕರ ಗುಂಡಿಗೆ ಬಲಿಯಾಗಿದ್ದರೆ, ಬಿಎಸ್ಎಫ್ ಯೋಧನೋರ್ವ ಹುತಾತ್ಮರಾಗಿದ್ದಾರೆ.

ಬಾರಾಮುಲ್ಲಾದ ಸೇನೆ ಕ್ಯಾಂಪ್ ಗೆ ಝೇಲಂ ನದಿ ಮೂಲಕ ಒಳನುಗ್ಗಿದ ಉಗ್ರರು, ಸೇನೆಯ ಮೇಲೆ ಗ್ರೇನೇಡ್ ಹಾಗೂ ಗುಂಡಿನದಾಳಿ ನಡೆಸಿದ್ದು, ಭದ್ರತಾ ಸಿಬ್ಬಂದಿ ನೀಡಿದ ತಿರುಗೇಟಿಗೆ ಉಗ್ರರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ಯೋಧನಿಗೆ ಗಾಯವಾಗಿದೆ ಎಂದು ಬಿಎಸ್ಎಫ್ ಹೇಳಿದೆ.

ಬಾರಾಮುಲ್ಲಾದ ಸೇನಾ ಕ್ಯಾಂಪ್ ಮೇಲೆ ದಾಳಿ ವಿಫಲವಾದ ನಂತರ ಉಗ್ರರು ಝೇಲಂ ನದಿಗೆ ಹಾರಿ ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಘಟನೆ ಬಗ್ಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹಾಗೂ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಮಾಹಿತಿ ನೀಡಲಾಗಿದೆ.

English summary: baramulla terorr attack, 2 terries died

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು