Oyorooms IN

Tuesday, 28th March, 2017 7:34 PM

BREAKING NEWS

ಉಡುಪಿ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮತ್ತಿಬ್ಬರ ಸೆರೆ

ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮತ್ತಿಬ್ಬರ ಸೆರೆ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟವರ ಸಂಖ್ಯೆ ಐದಕ್ಕೇರಿದೆ.

ಮೂರನೇ ಆರೋಪಿ ನಿರಂಜನ್ ಭಟ್‍ನ ತಂದೆ ಶ್ರೀನಿವಾಸ್ ಭಟ್, ಕಾರು ಚಾಲಕ ರಾಘವೇಂದ್ರ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.

ಸಾಕ್ಷ್ಯ ನಾಶ ಆರೋಪದಡಿ ಮಣಿಪಾಲ ಪೊಲೀಸರಿಂದ ಬಂಧನವಾಗಿದ್ದು, ಭಾಸ್ಕರ ಶೆಟ್ಟಿ ಕೊಲೆ ಪ್ರಕರಣವನ್ನು ಮರೆಮಾಚಿದ್ದು ಮತ್ತು ಶವವನ್ನು ನಾಪತ್ತೆ ಮಾಡುವಲ್ಲಿ ಸಹಕರಿಸಿ ತನಿಖೆಯ ದಿಕ್ಕು ತಪ್ಪಿಸಿದ ಆರೋಪ ಇವರ ಮೇಲಿದೆ.

ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಅವರನ್ನು ಆಸ್ತಿ ವಿಚಾರವಾಗಿ ಜುಲೈ 28ರಂದು ಪತ್ನಿ ರಾಜೇಶ್ವರಿ, ಪುತ್ರ ನವನೀತ್ ಶೆಟ್ಟಿ ಕೊಲೆ ಮಾಡಿದ್ದರು. ಕೊಲೆ ನಡೆಸಲು ತಾಯಿ ಮಗನಿಗೆ ಸಹಾಯ ಮಾಡಿದ್ದ ಜ್ಯೋತಿಷಿ ನಿರಂಜನ ಭಟ್ ಈ ಮೂವರನ್ನು ಈಗಾಗಲೇ ಬಂಧಿಸಲಾಗಿದೆ.

ಉಡುಪಿ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...