Oyorooms IN

Wednesday, 29th March, 2017 10:54 AM

BREAKING NEWS

ಪ್ರಮುಖ ಸುದ್ದಿಗಳು

ಬಳ್ಳಾರಿ : ನೀರಿಗೆ ಧುಮಿಕಿ ಐವರನ್ನು ಕಾಪಾಡಿ ಮೃತಪಟ್ಟ ಭಾವಿ ಯೋಧ

ಬಳ್ಳಾರಿ : ನೀರಿಗೆ ಧುಮಿಕಿ ಐವರನ್ನು ಕಾಪಾಡಿ ಮೃತಪಟ್ಟ ಭಾವಿ ಯೋಧ
ಬಳ್ಳಾರಿ : ನೀರಿಗೆ ಧುಮಿಕಿ ಐವರನ್ನು ಕಾಪಾಡಿ ಮೃತಪಟ್ಟ ಭಾವಿ ಯೋಧ

ಬಳ್ಳಾರಿ: ಸೈನ್ಯಕ್ಕೆ ನೇಮಕವಾಗಿ ತರಬೇತಿ ಪಡೆಯಲು ಕೆಲವೇ ದಿವಸಗಳು ಬಾಕಿ ಇರುವಂತೆ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಲು ಹೋಗಿ ದೇಶದ ಭಾವಿ ಯೋಧ ಮೃತಪಟ್ಟಿರುವ ಘಟನೆ ಹೂವಿನ ಹಡಗಲಿ ತಾಲೂಕಿನಲ್ಲಿ ನಡೆದಿದೆ. ಪ್ರಭು ಮೃತಪಟ್ಟ (22) ಯುವಕ ನಾಗಿದ್ದಾರೆ.

ಗದಗ ಮೂಲದ 20 ಮಂದಿಯ ಕುಟುಂಬ ಮೈಲಾರ ಲಿಂಗೇಶ್ವರ ದರ್ಶನಕ್ಕಾಗಿ ಇಂದು ಆಗಮಿಸಿದ್ದರು. ಮೈಲಾರ ಲಿಂಗೇಶ್ವರ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನಕ್ಕೆ ತೆರಳಲು ಕುಟುಂಬ ನಿರ್ಧರಿಸಿತ್ತು. ಮಹಿಳೆಯರು ಮತ್ತು ಪುರುಷರು ಬೇರೆ ಬೇರೆ ಕಡೆಯಲ್ಲಿ ಸ್ನಾನ ಮಾಡುತ್ತಿರುವಾಗ ಮೂರು ವರ್ಷದ ಮಗುವೊಂದು ನದಿಗೆ ಇಳಿದು ನೀರಿನ ಸೆಳೆತಕ್ಕೆ ಸಿಲುಕಿತ್ತು. ಇದನ್ನು ನೋಡಿದ ಕುಟುಂಬದ ನಾಲ್ವರು ಸದಸ್ಯರ ಜೊತೆ ಪ್ರಭು ನದಿಗೆ ಧುಮುಕಿದ್ದರು.

ನೀರಿನ ಸೆಳೆತ ಜಾಸ್ತಿ ಇದ್ದರೂ ಮಗು ಮತ್ತು ಇವರನ್ನು ಕೈ ಕೈ ಹಿಡಿದು ರಕ್ಷಿಸಿದ್ದರೂ ಕೊನೆಗೆ ಪ್ರಭು ನೀರಿ ಸೆಳೆತಕ್ಕೆ ಕೊಚ್ಚಿಕೊಂಡು ಹೋಗಿ ಮೃತಪಟ್ಟಿದ್ದಾರೆ. ಇನ್ನೂ ತನಗೆ ಈಜು ಬಾರದೇ ಇದ್ದರು ನೀರಿನಲ್ಲಿ ಸಿಕ್ಕಿ ಹಾಕಿಕೊಂಡವರನ್ನು ರಕ್ಷಣೆ ಮಾಡಲು ಹೋಗಿ ಪ್ರಭು ತೀರಿಹೋಗಿದ್ದಾರೆ ಎಂದು ಕುಟುಂಬ ಸದ್ಯಸರು ತಿಳಿಸಿದ್ದಾರೆ. ಮೃತ ಪ್ರಭು ಮುಂದಿನ ತಿಂಗಳು ಸೇನೆಯ ತರಬೇತಿಗೆ ತೆರಳಬೇಕಿತ್ತು ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...