Oyorooms IN

Thursday, 27th July, 2017 4:13 AM

BREAKING NEWS

ಪ್ರಮುಖ ಸುದ್ದಿಗಳು

ಚರ್ಮದ ಸೌಂದರ್ಯ ಹೆಚ್ಚಿಸಲು ಸೂಪರ್ ಸಲಹೆ

%e0%b2%b8%e0%b2%bf%e0%b2%95%e0%b2%a8

ಇಂದಿನ ದಿನಗಳಲ್ಲಿ ಮಾನವನು ಬರಿ ಮಾತು-ನೋಟ ಎಂಬಂತ ನಾಣ್ನುಡಿಗೆ ಜೋತುಬಿದ್ದಿದ್ದು ತಮ್ಮ ಆಂತರಿಕ ಸೌಂದರ್ಯಕ್ಕಿಂತ ದೇಹದ ಸೌಂದರ್ಯಕ್ಕೆ ಹೆಚ್ಚಿನ ಒತ್ತು ಕೊಡುತ್ತಿರುವುದನ್ನು ಎಲ್ಲರೂ ಗಮನಿಸುತ್ತೇವೆ.  ಆದ ಕಾರಣ ನಾನು ಕಪ್ಪಿದ್ದೇನೆ, ನಾನು ಸೌಂದರ್ಯವಾಗಿಲ್ಲ ಎಂಬ ಕೀಳರಿಮೆಯನ್ನು ಬಿಟ್ಟು ಎಲ್ಲರೂ ತಮ್ಮ ಸುತ್ತಮುತ್ತಲೇ ಇರುವ ಪರಿಸರ ಮೂಲದಿಂದ ಲಭಿಸುವ ಆಹಾರಗಳನ್ನು ತಮ್ಮ ದಿನನಿತ್ಯದ ಊಟದ ಮೆನುವಿನಲ್ಲಿ ಸೇರಿಸಿಕೊಂಡರೆ ಸಾಕು ಹೆಲ್ದಿ ತ್ವಚೆಗೆ ಒಡೆಯ-ಒಡತಿಯರಾಗುವುದರಲ್ಲಿ ಎರಡು ಮಾತಿಲ್ಲ.  ಮಾರುಕಟ್ಟೆಯಲ್ಲಿ ಕಡಿಮೆ ಅಥವಾ ದುಬಾರಿ ಬೆಲೆಯನ್ನು ತೆತ್ತು ಕೊಂಡುಕೊಳ್ಳುವ ರಾಸಾಯನಿಕಯುಕ್ತ ಸೌಂದರ್ಯವರ್ಧಕಗಳಿಂದ ಆ ಕ್ಷಣಕ್ಕೆ ಮಾತ್ರ ನಮಗೆ ಕೃತಕ ಸೌಂದರ್ಯ ಲಭಿಸುವುದೇ ಹೊರತು ಮುಂದೊಂದು ದಿನ ಅಡ್ಡ ಪರಿಣಾಮ ಬೀರಿ ನಿಮ್ಮ ಸೌಂದರ್ಯ ಹಾಳಾಗುವುದರಲ್ಲಿ ಎರಡು ಮಾತಿಲ್ಲ.

ಆದ್ದರಿಂದ ಪ್ರತಿಯೊಬ್ಬರೂ ಆರೋಗ್ಯಯುತ ಚರ್ಮ ಮತ್ತು ಸೌಂದರ್ಯವನ್ನು ಹೊಂದಲು ಈ ಕೆಳಗಿರುವ ದಶ ಸೂತ್ರಗಳನ್ನು ತಮ್ಮ ದಿನನಿತ್ಯದ ಆಹಾರ ಶೈಲಿಯಲ್ಲಿ ಅಳವಡಿಸಿಕೊಂಡರೆ ಸಾಕು ಎಲ್ಲರೂ ಹಸನ್ಮುಖಿಗಳಾಗಬಹುದು.

ಕ್ಯಾಪ್ಸಿಕಮ್:

ಜನಸಾಮಾನ್ಯರಿಗೆ ತೀರ ಪರಿಚಯವಿರುವ ರುಚಿಯಾದ ತರಕಾರಿಗಳಲ್ಲಿ ಕ್ಯಾಪ್ಸಿಕಮ್ ಒಂದಾಗಿದ್ದು ಇದರಲ್ಲಿ ಹೇರಳವಾಗಿ ವಿಟಮಿನ್ ಸಿ ಡಯಟರಿ ಪೈಬರ್, ವಿಟಮಿನ್ ಬಿ6 ಅಂಶಗಳು ಹೇರಳವಾಗಿದ್ದು, ಇದು ಚರ್ಮದ ಬಿರುಕುಗಳನ್ನು ತಪ್ಪಿಸಿ ಉತ್ತಮ ರಕ್ತ ಸಂಚಾರಕ್ಕೆ ನೆರವಾಗುತ್ತವೆ.

ಡಾರ್ಕ್ ಚಾಕಲೇಟ್:

ಪ್ರತಿದಿನ ಒಂದು ಡಾರ್ಕ್ ಚಾಕಲೇಟ್ ಸವಿಯುವುದರಿಂದ ಬರಿ ರುಚಿಯಷ್ಟೇ ಅಲ್ಲ ಇದರಿಂದ ಕೊಬ್ಬಿನಾಂಶ, ಕೋಕೋವಾ ಕಾಯಿಯ ಪೆÇೀಷಕಾಂಶಗಳು ಹಾಗೂ ಹಾಲಿನ ಅಂಶಗಳು ಹೆಚ್ಚಿದ್ದು, ಇದರಿಂದ ಚರ್ಮದ ಒರಟುತನ ಹೋಗಲಾಡಿಸುತ್ತದೆ.

ಸಲ್ಮಾನ್ (ಒಂದು ಜಾತಿಯ ಕಡಲಮೀನು):

ಕಡಲಲ್ಲಿ ಹೇರಳವಾಗಿ ಸಿಗುವ ಒಂದು ಜಾತಿಯ ಮೀನು ಇದಾಗಿದ್ದು, ಇದನ್ನು ದಿನನಿತ್ಯದ ಆಹಾರದಲ್ಲಿ ಬಳಸುವುದರಿಂದ ಹೃದಯದ ಸ್ನಾಯುಗಳು ಬಲಗೊಂಡು ಮೆದುಳಿನ ಆರೋಗ್ಯ ವೃದ್ಧಿಯಾಗಿ ಇದರಲ್ಲಿರುವ ಒಮೆಗಾ3 ಅಂಶವು ಕೂದಲುಗಳ ವೃದ್ಧಿಗೆ ಸಹಾಯಕವಾಗುತ್ತವೆ.

ತೆಂಗಿನಕಾಯಿ ಎಣ್ಣೆ:

ತೆಂಗಿನ ಎಣ್ಣೆಯಲ್ಲಿ ಶೇ.90ರಷ್ಟು ಕ್ಯಾಲೋರಿ ಹಾಗೂ ಕೊಬ್ಬಿನಾಂಶ ಹಾಗೂ ಲಾರಿಕ್ ಆ್ಯಸಿಡ್, ವಿಟಮಿನ್ ಇ ಹೇರಳವಾಗಿದ್ದು ಇದು ತ್ವಚೆಯ ಹೊಳಪಿಗೆ ಕಾರಣವಾಗುತ್ತದೆ.

ಗ್ರೀನ್ ಟೀ :

ಇಂದಿನ ದಿನಗಳಲ್ಲಿ ಗ್ರೀನ್‍ಟೀ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು ಇದರ ಬೇಡಿಕೆಯೂ ಸಹ ಆರೋಗ್ಯದ ದೃಷ್ಟಿಯಿಂದ ಹೆಚ್ಚಿದೆ. ಇದರಲ್ಲಿ ಅಮಿನೋ ಆಸಿಡ್ ಜೊತೆಗೆ ಆ್ಯಂಟಿ ಆಕ್ಸಿಡೆಂಟ್ಸ್ ಹೆಚ್ಚಿದೆ. ಬೆಳಗ್ಗೆ ಎದ್ದ ನಂತರ ಕಾಲಿ ಹೊಟ್ಟೆಗೆ ಒಂದು ಕಪ್ ಗ್ರೀನ್‍ಟೀ ಹೀರುವುದರಿಂದ ರಕ್ತದೊತ್ತಡ ಕಡಿಮೆಯಾಗಿ ದೇಹಕ್ಕೆ ಆಹ್ಲಾದತೆ ದೊರಕುತ್ತದೆ.

ಪಾಲಕ್ ಸೊಪ್ಪು :

ನ್ಯೂಟ್ರಿಷಿಯಂಟ್ ಅಂಶಗಳು ಈ ಸೊಪ್ಪಿನಲ್ಲಿ ಅಧಿಕವಾಗಿದ್ದು, ಇದರಲ್ಲಿ ಕಬ್ಬಿಣದ ಅಂಶ, ಮ್ಯಾಗ್ನೀಷಿಯಂ, ಪ್ರೋಟಿನ್ಸ್ ಅಧಿಕವಿರುವ ಕಾರಣ ಚರ್ಮವು ಜಿಡ್ಡುಗಟ್ಟದೆ ದೇಹದ ರಾಸಾಯನಿಕ ಅಂಶಗಳನ್ನು ಹೊರಹಾಕಿ ಚರ್ಮದ ಆರೋಗ್ಯ ಕಾಪಾಡುವಲ್ಲಿ ಪಾಲಾಕ್ ಸೊಪ್ಪು ಸಹಾಯಕವಾಗಿದೆ.

ದ್ವಿದಳ ದಾನ್ಯಗಳು:

ಹೆಸರುಗಳು, ಉದ್ದು, ಅವರೆ, ಸೂರ್ಯಕಾಂತಿ, ಕಡಲೆ ಬೀಜ ಮುಂತಾದ ದ್ವಿದಳ ದಾನ್ಯಗಳನ್ನು ಹೆಚ್ಚಾಗಿ ಆಹಾರದಲ್ಲಿ ಬಳಸುವುದರಿಂದ ವಿಟಮಿನ್ ಇ, ಮ್ಯಾಗ್ನೀಷಿಯಂ, ಒಮೆಗಾ3 ಅಂಶಗಳಿದ್ದು ಚರ್ಮದ ಮೃದುತ್ವ ಮತ್ತು ಅಕಾಲಿಕ ನೆರಿಗೆಗಳನ್ನು ದೂರ ಮಾಡುತ್ತದೆ.

ಪಪ್ಪಾಯ :

ಕಣ್ಣಿನ ಆರೋಗ್ಯ ಮತ್ತು ಚರ್ಮದ ಕಾಂತಿ ಹೆಚ್ಚಿಸಲು ಪಪ್ಪಾಯ ಸಹಾಯಕವಾಗಿದೆ. ಇದರಲ್ಲಿ ಕೊಲೆಸ್ಟ್ರಾಲ್‍ನ್ನು ಸಮತೋಲನದಲ್ಲಿಟ್ಟುಕೊಳ್ಳಲು ಈ ಹಣ್ಣು ಸಹಕಾರಿಯಾಗಿದೆ.

ಸೌತೆಕಾಯಿ :

ಚರ್ಮದಲ್ಲಿರುವ ರಾಸಾಯನಿಕ ವಸ್ತುಗಳನ್ನು ಹೊರಹಾಕಲು ಮತ್ತು ಚರ್ಮವನ್ನು ದೀರ್ಘಕಾಲ ನೀರಿನ ಅಂಶ ಹಾಗೂ ಒಣ ತ್ವಚೆಯಿಂದ ಕಾಪಾಡಲು ಸೌತೆಕಾಯಿ ಅತಿಮುಖ್ಯ.

ಬಾಳೆಹಣ್ಣು:

ಬಾಳೆಹಣ್ಣಿನಲ್ಲಿ ಪೋಟಾಷಿಯಂ ಅಂಶ ಅತ್ಯಧಿಕವಾಗಿದ್ದು, ಚರ್ಮದ ಕಾಯಿಲೆಗಳನ್ನು ತಡೆಯುವಲ್ಲಿ ಜೊತೆಗೆ ತ್ವಚೆಯ ನುಣುಪನ್ನು ಕಾಯ್ದುಕೊಳ್ಳಲು ಬಾಳೆ ಹಣ್ಣಿನಿಂದ ಮಸಾಜ್ ಅಥವಾ ಸೇವನೆಯಿಂದ ಉತ್ತಮ ಫಲಿತಾಂಶ ಸಾಧ್ಯವಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...