Oyorooms IN

Sunday, 26th March, 2017 10:30 PM

BREAKING NEWS

ಪ್ರಮುಖ ಸುದ್ದಿಗಳು

ಬ್ಯಾಂಕ್ ಗೆ ಆ ಭಿಕ್ಷುಕ ಎಷ್ಟು ಹಣ ತಂದ ಗೊತ್ತಾ??

beggar

ಒಬ್ಬ ಭಿಕ್ಷುಕ,, ಬ್ಯಾಂಕಿಗೆ ಎಷ್ಟು ಹಣದೊಂದಿಗೆ ಹೋಗ್ತಾನೆ, ಮಹಾ ಅಂದ್ರೆ ಒಂದು ಸಾವಿರ, ಅದು ಕೂಡ ಹತ್ತು, ಇಪ್ಪತ್ತರ ಚಿಲ್ಲರೆಯೊಂದಿಗೆ ಆದ್ರೆ ಈ ಭಿಕ್ಷುಕ ಮಾತ್ರ ನೇರವಾಗಿ 50 ಲಕ್ಷ ರೂಪಾಯಿಯೊಂದಿಗೆ ಬ್ಯಾಂಕ್ ಗೆ ಹೋಗಿದ್ದಾನೆ, ಈ ಘಟನೆ ನಡೆದಿರುವುದು ತೆಲಂಗಾಣದ ವಿಕಾರಬಾದ್ ಪಟ್ಟಣದಲ್ಲಿ.

ಭಿಕ್ಷುಕ ತನ್ನ ಬಳಿರುವ 50 ಲಕ್ಷವನ್ನು ಡಿಪಾಜಿಟ್ ಮಾಡೋದಕ್ಕೆ ಹೋದಾಗ, ಅಲ್ಲಿಯವರೆಗೂ ಕ್ಯೂನಲ್ಲಿ ಜೊತೆಗೆ ನಿಂತಿದ್ದವರು ಕೂಡ ಶಾಕ್ ಆಗಿದ್ದಾರೆ, 50 ಲಕ್ಷವನ್ನು ತೆಗೆದು, ತನ್ನ ಅಕೌಂಟ್ ಗೆ ಜಮಾ ಮಾಡುವಂತೆ ಅಧಿಕಾರಿಗಳಿಗೆ ಹೇಳಿದ್ದಾನೆ.

ಶಾಕ್ ನಿಂದ ಹೊರಬಂದ ಅಧಿಕಾರಿಗಳು ಒಂದೇ ಸಾರಿ ಇಷ್ಟೊಂದು ಹಣವನ್ನು ಡಿಪಾಜಿಟ್ ಮಾಡೋದಕ್ಕೆ ಪಾನ್ ಕಾರ್ಡ್ ಕಡ್ಡಾಯವಾಗಿ ಬೇಕು ಅಂದಿದ್ದರಿಂದ, ಜೇಬಿನಿಂದ ಪಾನ್ ಕಾರ್ಡ್ ತೆಗೆದು ನೀಡಿದ್ದಾನಂತೆ ಈ ಭಿಕ್ಷುಕ ಲಕ್ಷಪತಿ, ಇದರಿಂದ ಮೈಂಡ್ ಬ್ಲ್ಯಾಕ್ ಆದ ಅಧಿಕಾರಿಗಳು ಆತನ ಖಾತೆಗೆ ಹಣವನ್ನು ಡೆಪಾಜಿಟ್ ಮಾಡದೆ ಹಣ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

ತನ್ನ ಎರಡು ಎಕರೆ ಜಮೀನನ್ನು ಎರಡು ತಿಂಗಳ ಹಿಂದೆ ಮಾರಾಟ ಮಾಡಿದ್ದು, ಆ ಹಣವೇ ಇದು ಎಂದು ಅದಕ್ಕೆ ಸಂಬಂಧಿಸಿದ ಪತ್ರಗಳನ್ನು ತೋರಿಸುವಂತೆ ಬ್ಯಾಂಕ್ ಅಧಿಕಾರಿಗಳು ಕೇಳಿದ್ದರಿಂದ ದಾಖಲೆ ಪತ್ರಗಳನ್ನು ತರುವುದಾಗಿ ಭಿಕ್ಷುಕ ಅಲ್ಲಿಂದ ಹೊರಟು ಹೋದ ಎಂದು ವರದಿಯಾಗಿದೆ.

English summary:  beggar bring 50 lakhs deposit bank in telangana

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...