Oyorooms IN

Tuesday, 28th March, 2017 7:37 PM

BREAKING NEWS

ಪ್ರಮುಖ ಸುದ್ದಿಗಳು

ಬೆಳಗಾವಿ ಮೇಯರ್, ಉಪ ಮೇಯರ್ ನಾಪತ್ತೆ

belagavi_mayor

ಬೆಳಗಾವಿ: ಕನ್ನಡ ರಾಜ್ಯೋತ್ಸವದ ದಿನ ಕಪ್ಪು ಪಟ್ಟಿ ಧರಿಸಿ ಕರಾಳ ದಿನ ಆಚರಿಸಿದ್ದ ಬೆಳಗಾವಿ ಪಾಲಿಕೆ ಮೇಯರ್ ಸರಿತಾ ಪಾಟೀಲ್ ಹಾಗೂ ಉಪಮೇಯರ್ ಸಂಜಯ್ ಶಿಂಧೆ ನಾಪತ್ತೆಯಾಗಿದ್ದಾರೆ. ಬೆಳಗಾವಿ ನಗರ ಮೊದಲ ಹಾಗೂ ಎರಡನೇ ಪ್ರಜೆಗಳಾದ ಈ ಇಬ್ಬರೂ ಪಾಲಿಕೆ ಆವರಣದಿಂದ ಸರ್ಕಾರಿ ವಾಹನದ ಜೊತೆ ನಾಪತ್ತೆಯಾಗಿರುವುದು ಈ ಚರ್ಚೆಗೆ ಗ್ರಾಸವಾಗಿದೆ.

ಮೇಯರ್ ಹಾಗೂ ಉಪಮೇಯರ್ ಅಷ್ಟೇ ಅವರ ಕಾರಿನ ಚಾಲಕರು ಕಾಣೆಯಾಗಿದ್ದು, ಅವರ ಮೊಬೈಲ್ ಅನ್ನು ಸಂಪರ್ಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎನ್ನಲಾಗಿದ್ದು, ಮಹಾರಾಷ್ಟ್ರ ಏಕೀಕರಣ ಸಮಿತಿ ಜೊತೆ ನಿಕಟ ಸಂಪರ್ಕವನ್ನು ಹೊಂದಿರುವ ಮೇಯರ್, ಉಪಮೇಯರ್ ಮಹಾರಾಷ್ಟ್ರಕ್ಕೆ ಹೋಗಿರಬಹುದು ಎನ್ನುವ ಅನುಮಾನ ವ್ಯಕ್ತವಾಗಿದೆ.

ಕರ್ನಾಟಕವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಮೇಯರ್ ಹಾಗೂ ಉಪ ಮೇಯರ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಗೂ  ಕನ್ನಡ ಪರ ಸಂಘಟನೆಗಳ ಭಯದಿಂದ ಬೆಳಗಾವಿ ಬಿಟ್ಟು ಹೋಗಿದ್ದಾರೆ ಎನ್ನಲಾಗಿದ್ದು,  ಪ್ರಕರಣದ ಸಂಬಂಧ ಸಿಎಂ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳಿಂದ ವರದಿ ಕೇಳಿದ್ದು, ರಾಜ್ಯದ ವಿರುದ್ಧ ಕರಾಳ ದಿನವನ್ನು ಆಚರಿಸಿದ ಇವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸರ್ಕಾರ ಚಿಂತನೆ ನಡೆಸಿದೆ.

 

English summary:  belagavi mayor and deputy mayor escape form belagavi

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...