Oyorooms IN

Tuesday, 23rd May, 2017 12:24 AM

BREAKING NEWS

ತುಮಕೂರು

ಭದ್ರ ಮೇಲ್ದಂಡೆ ಯೋಜನೆತುಮಕೂರು ಜಿಲ್ಲೆಗೆ 4.6ಟಿ.ಎಂ.ಸಿ ನೀರು ಜಿಲ್ಲೆಯ ಚಿ.ನಾಹಳ್ಳಿ,ಶಿರಾ, ಪಾವಗಡ ತಾಲೂಕಿಗೆ ಪ್ರಯೋಜನ

 

12

ತುಮಕೂರು: ರಾಜ್ಯದ ಮಧ್ಯಕರ್ನಾಟಕದ ನಾಲ್ಕು ಜಿಲ್ಲೆಗಳ೨.೨೫ಲಕ್ಷ ಹೆಕ್ಟೇರ್ ಭೂಮಿಗೆ ನೀರಾವರಿ ಮತ್ತು ೩೬೭ ಕೆರೆಗಳನ್ನು ತುಂಬಿಸುವ ಭದ್ರ ಮೇಲ್ದಂಡೆ ಯೋಜನೆಯ ಕಾಮಗಾರಿ ಪ್ರಗತಿಯಲ್ಲಿದ್ದು,ನಿಗಧಿಯಂತೆ ೨೦೧೮-೧೯ನೇ ಸಾಲಿಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ.

ಮಧ್ಯಕರ್ನಾಟಕದ ತುಮಕೂರು, ಚಿತ್ರದುರ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳ 12 ತಾಲೂಕುಗಳ ಕುಡಿಯುವ ನೀರು ಮತ್ತು ನೀರಾವರಿಗೆ ಸಂಬಂದಿಸಿದಂತೆ 12,340 ಕೋಟರೂಗಳ ಬಹು ಉದ್ದೇಶದ ಯೋಜನೆಯು 2008ರಲ್ಲಿ ಆರಂಭವಾದ ಭದ್ರಾಮೇಲ್ದಂಡೆ ಯೋಜನೆ ಕಾಮಗಾರಿಗಳು ಮೂರು ಹಂತದಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಕೇಂದ್ರ ಜಲ ಆಯೋಗದ ನೀಡಿರುವ ಅನುಮೋದನೆಯಂತೆ ಈಗಾಗಲೇ ತುಂಗಾ ನದಿಯಿಂದ ಎರಡು ಹಂತದಲ್ಲಿ ನೀರೆತ್ತಿ 11 ಕಿ.ಮಿ.ಕಾಲುವೆ ಮೂಲಕ ಭದ್ರ ಹಿನ್ನೀರಿಗೆ ಹರಿಸುವುದು,ಭದ್ರಾ ಹಿನ್ನೀರಿನಿಂದ 2 ಹಂತದಲ್ಲಿ ಮತ್ತೆ ನೀರೆತ್ತಿ 40 ಕಿ.ಮಿ.ಕಾಲುವೆ ಮೂಲಕ ಚಿತ್ರದುರ್ಗ ಜಿಲ್ಲೆ ಅಜ್ಜನಪುರ ಸುರಂಗ ಮಾರ್ಗಕ್ಕೆ ಹಾಯಿಸುವುದು,ಅಜ್ಜನಪುರ ಬಳಿ 7 ಕಿ.ಮಿ. ದೂರದ ಸುರಂಗ ಮಾರ್ಗ ನಿರ್ಮಿಸುವ ಈ ಮೂರು ಹಚಿತದ ಕಾಮಗಾರಿಗಳನ್ನು ಈಗಾಗಲೇ ಕೈಗೆತ್ತಿ ಕೊಂಡಿದ್ದು,ಮೊದಲು ಇದ್ದ 1,07,265 ಹೆಕ್ಟೇರ್‌ಗೆ ನೀರಾವರಿ ಒದಗಿಸುವುದಕ್ಕೆ ಬದಲಾಗಿ, ಹನಿ ನೀರಾವರಿಯ ಮೂಲಕ 2,25,515 ಹೆಕ್ಟೇರ್‌ಗೆ ನೀರೊದಿಗಿಸುವುದು ಹಾಗೂ 367 ಕೆರೆಗಳನ್ನು ತುಂಬಿಸುವ ಪರಿಷ್ಕತ ಪ್ರಸ್ತಾವನೆಯನ್ನು ಕೇಂದ್ರ ಜಲ ಅಯೋಗದ ಮುಂದೆ ಸಲ್ಲಿಸಿದೆ.

ಭದ್ರಮೇಲ್ದಚಿಡೆ ಯೋಜನೆ ಪರಿಷ್ಕೃತ ಯೋಜನೆಯಂತೆ ತುಮಕೂರು ಜಿಲ್ಲೆಯ ೩ ತಾಲೂಕುಗಳ 84,900 ಹೇಕ್ಟೆರ್ ಭೂಮಿಗೆ ನೀರು ಮತ್ತು 131 ಕೆರೆಗಳಿಗೆ 4.6 ಟಿ.ಎಂ.ಸಿ ನೀರು ಒದಗಿಸಲು ಅಜ್ಜನಪುರ ಸುರಂಗದ ನಂತರ ತುಮಕೂರು ಬ್ರಾಂಚ್ ಕೆನಾಲ್ ನಿರ್ಮಾಣಕ್ಕೆ ಚಾಲನೆ ದೊರೆತ್ತಿದೆ.ಅಜ್ಜನಪುರದ ಸುರಂಗದ ನಂತರ ತುಮಕೂರು ಮತ್ತು ಚಿತ್ರದುರ್ಗ ನಾಲೆಗಳು ಸೃಷ್ಟಿಯಾಗಲಿದ್ದು,ಚಿತ್ರದುರ್ಗ ನಾಲೆಯಿಂದ 1,20,465 ಹೆಕ್ಟೆರ್ ನೀರಾವರಿ ಮತ್ತು 157 ಕೆರೆಗಳನ್ನು ತುಂಬಿಸಲಾಗುವುದು.

ಅಜ್ಜನಪುರ ಸುರಂಗದ ನಂತರ ಸೃಷ್ಟಿಯಾಗುವ ತುಮಕೂರು ಬ್ರಾಂಚ್ ಕೆನಾಲ್ ನೂರು ಕಿ.ಮಿ. ನಂತರ ಹೊಸದುರ್ಗದ ಮೂಲಕ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರು ಹೋಬಳಿಗೆ ಪ್ರವೇಶ ಪಡೆಯಲಿದೆ. ತುಮಕೂರು ಬ್ರಾಂಚ್ ಕೆನಾಲ್ ನಿರ್ಮಾಣಕ್ಕೆ 30 ಕಿ.ಮಿ.ಅಲೈನ್‌ಮೆಂಟ್‌ಗೆ ಅಪ್ರೂಲ್ ದೊರೆತ್ತಿದ್ದು, 17 ಕಿ.ಮಿ.ಸರ್ವೆ ಕಾರ್ಯ ಚಾಲ್ತಿಯಲ್ಲಿದೆ. 2010ರಲ್ಲಿ ಕೇಂದ್ರ ಜಲ ಆಯೋಗನ ನೀಡಿದ ಅನುಮೋದನೆಯಂತೆ ಕಾಮಗಾರಿಗಳು ಆರಂಭವಾಗಿದ್ದು, ಸದ್ಯದಲ್ಲಿಯೇ ಪರಿಷ್ಕತ ಯೋಜನೆಗೆ ಅನುಮೋದನೆ ದೊರೆಯಲಿದೆ ಎಂಬುದು ಚಿತ್ರದುರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರಮೇಲ್ದಂಡೆ ಯೋಜನೆಯ ಮುಖ್ಯ ಇಂಜಿನಿಯರ್ ಕಚೇರಿಯ ಮೂಲಗಳು ತಿಳಿಸಿವೆ.ಈ ಸಂಬಂಧ ಅಕ್ಟೋಬರ್ 19ರಂದು ಹುಳಿಯಾರು ಮೂಲಕ ಹಾದು ಹೋಗುವ ನಾಲೆಯ ಬಗ್ಗೆ ತಿಳುವಳಿಕೆ ನೀಡಲು ರೈತರ ಸಭೆ ಆಯೋಜಿಸಿದ್ದು,ಈ ಸಭೆಯಲ್ಲಿ ಯೋಜನೆಯಿಂದ ಜಿಲ್ಲೆಗೆ ದೊರೆಯಬಹುದಾದ ಪ್ರಯೋಜನೆಗಳ ಬಗ್ಗೆ ಚರ್ಚೆ ನಡೆಸಲಿದ್ದು,ತುಮಕೂರು ಜಿಲ್ಲಾಧಿಕಾರಿಗಳು ಅಂದಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

121

ಭದ್ರ ಮೇಲ್ದಂಡೆ ಯೋಜನೆಯಿಂದ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ, ಶಿರಾ ಮತ್ತು ಪಾವಗಡ ತಾಲೂಕುಗಳಿಗೆ ನೀರಾವರಿ ಸೌಲಭ್ಯ ದೊರೆಯಲಿದ್ದು, ಚಿಕ್ಕನಾಯಕನಹಳ್ಳಿ ತಾಲೂಕಿನ 4657 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಮತ್ತು 19 ಕೆರೆಗಳು, ಶಿರಾ ತಾಲೂಕಿನ 14,558 ಹೆಕ್ಟೇರ್‌ಗೆ ನೀರಾವರಿ ಮತ್ತು 41 ಕೆರೆಗಳಿಗೆ ನೀರು ಹಾಗೂ ಪಾವಗಡ ತಾಲೂಕಿನ 30 ಕೆರೆಗಳಿಗೆ ನೀರು ತುಂಬಿಸುವ ಉದ್ದೇಶ ಈ ಯೋಜನೆಯಲ್ಲಿದೆ. ಮಧ್ಯಕರ್ನಾಟಕದ ಚಿಕ್ಕಮಗಳೂರು,ಚಿತ್ರದುರ್ಗ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳ ನೀರಾವರಿ ಮತ್ತು ಕುಡಿಯುವ ನೀರಿಗಾಗಿ ಭದ್ರಮೇಲ್ದಚಿಡೆ ಯೋಜನೆಯಿಂದ 29.5 ಟಿ.ಎಂ.ನೀರು ಬಳಕೆ ಮಾಡಿಕೊಳ್ಳಲು ಕೇಂದ್ರ ಜಲ ಆಯೋಗ ಈಗಾಗಲೇ ಅನುಮತಿ ನೀಡಿದೆ

ಈಗಾಗಲೇ ಹೇಮಾವತಿ ಯೋಜನೆಯಿಂದ ತುಮಕೂರು ಜಿಲ್ಲೆಗೆ ತುಮಕೂರು ನಗರ ಹಾಗೂ ಪಾವಗಡ ಹೊರತು ಪಡಿಸಿ ಉಳಿದ ತಾಲೂಕು ಕೇಂದ್ರಗಳಿಗೆ ಕುಡಿಯುವ ನೀರಿನ ಯೋಜನೆ ರೂಪಿತಗೊಂಡಿದೆ. ಅಲ್ಲದೆ ಎತ್ತಿನಹೊಳೆ ಯೋಜನೆಯ ಮೂಲಕ ಸಹ ಜಿಲ್ಲೆ ಕುಡಿಯುವ ನೀರು ಒದಗಿಸಲು ಸರಕಾರ ಮುಂದಾಗಿದೆ.ಇದರ ಜೊತೆಗೆ ಭದ್ರಮೇಲ್ದಂಡೆ ಯೋಜನೆ ಮೂಲಕವೂ ಜಿಲ್ಲೆಗೆ ನೀರು ದೊರೆತರೆ ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸದು ಎಂಬುದು ನೀರಾವರಿ ತಜ್ಞರ ಲೆಕ್ಕಾಚಾರವಾಗಿದೆ.ಬರದಿಂದ ತತ್ತರಿಸಿ ಕುಡಿಯುವ ನೀರಿಗೆ ಹಪಹಪಿಸುತ್ತಿರುವ ಜಿಲ್ಲೆಗೆ ಮುಂದೆಯಾದರೂ ಒಳ್ಳೆಯ ಪರಿಹಾರ ದೊರೆತೀತೆ ಎಂಬುದನ್ನು ಕಾದು ನೋಡಬೇಕಿದೆ.

ತುಮಕೂರು ಜಿಲ್ಲೆಗೆ ಭದ್ರಮೇಲ್ದಚಿಡೆ ಯೋಜನೆಯ ಮೂಲಕ ರೈತರ ಜಮೀನಿಗೆ ನೀರು ಮತ್ತು ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಚಾಲನೆ ದೊರೆಯುತ್ತಿದೆ. ನಾಲೆ ಹಾದು ಹೋಗುವ ಭಾಗದ ರೈತರಲ್ಲಿ ಅರಿವು ಮೂಡಿಸಿ, ಯೋಜನೆಯ ಪ್ರಯೋಜನಗಳನ್ನು ತಿಳಿಸುವ ನಿಟ್ಟಿನಲ್ಲಿ ಅಕ್ಟೋಬರ್ 19 ರಂದು ಹುಳಿಯಾರಿನಲ್ಲ್ಲಿ ರೈತರ ಸಭೆ ನಡೆಸಲಾಗುತ್ತಿದ್ದು, ಅಂದಿನ ಸಭೆಯಲ್ಲಿ ನಾನು ಪಾಲ್ಗೊಳ್ಳುತಿದ್ದೇನೆ. ಈ ಯೋಜನೆಯಿಂದ ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಕೊಂಚ ಮಟ್ಟಿಗೆ ಕಡಿಮೆಯಾಗಲಿದೆ

-ಕೆ.ಪಿ.ಮೋಹನ್‌ರಾಜ್ ಜಿಲ್ಲಾಧಿಕಾರಿ ತುಮಕೂರು ಜಿಲ್ಲೆ

ವರದಿ : ರಂಗರಾಜು.ಎನ್.ಡಿ.ತುಮಕೂರು

ತುಮಕೂರು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...