Oyorooms IN

Wednesday, 24th May, 2017 1:17 AM

BREAKING NEWS

ಉತ್ತರ ಕನ್ನಡ

ಮೇಲಾಧಿಕಾರಿಗಳ ಕಿರುಕುಳ? ಭಟ್ಕಳ ಪಿಎಸ್ಐ ರೇವತಿ ರಾಜೀನಾಮೆ

ಮೇಲಾಧಿಕಾರಿಗಳ ಕಿರುಕುಳ? ಭಟ್ಕಳ ಪಿಎಸ್ಐ ರೇವತಿ ರಾಜೀನಾಮೆ

ಉತ್ತರ ಕನ್ನಡ : ದೂರು ದಾಖಲಿಸಿಕೊಳ್ಳಲು ಅನಗತ್ಯವಾಗಿ ವಿಳಂಬ ಮಾಡಿದ್ದಾರೆಂಬ ಆರೋಪದ ಮೇಲೆ ಭಟ್ಕಳ ಪಿಎಸ್ಐ ರೇವತಿಯವರನ್ನು ಅಮಾನತುಗೊಳಿಸಲಾಗಿದೆ. ಆದರೆ ಅಮಾನತು ಆದೇಶ ಕೈಸೇರುವ ಮುನ್ನವೇ ಪಿಎಸ್ಐ ರೇವತಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಹಣಕ್ಕಾಗಿ ಬೇಡಿಕೆ ಮತ್ತು ಕೊಲೆ ಬೆದರಿಕೆ ಬಂದಿದೆ ಎಂದು ಬಟ್ಕಳದ ಮೊಹ್ಸಿನ್ ಎಂಬುವವರು ದೂರು ನೀಡಲು ಬಂದಿದ್ದರು ಎನ್ನಲಾಗಿದೆ. ಆದರೆ ದೂರು ದಾಖಲಿಸಿಕೊಳ್ಳಲು ಪಿಎಸ್ಐ ವಿಳಂಬ ಮಾಡಿದ್ದಾರೆ ಎಂದು ಪಿಎಸ್ಐ ವಿರುದ್ಧ ಐಜಿ, ಡಿಜಿಯವರಿಗೆ ಮೊಹ್ಸಿನ್ ದೂರು ನೀಡಿದ್ದರು.

ಅದರೆ ರಾಜೀನಾಮೆ ಸಲ್ಲಿಸಿರುವ ರೇವತಿ ಯವರು, ತಮಗೆ ಹಿರಿಯ ಅಧಿಕಾರಿಗಳಿಂದ ಕಿರುಕುಳವಿದೆ ಎಂದು ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. ರೇವತಿಯವರ ಕಿರುಕುಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಎಸ್.ಪಿ ವಂಶಿ ಕೃಷ್ಣ, ಕರ್ತವ್ಯ ಲೋಪದ ಮೇಲೆ ರೇವತಿಯವರನ್ನು ಅಮಾನತು ಮಾಡಲಾಗಿದ್ದು, ಯಾವುದೇ ಕಿರುಕುಳ ನೀಡಿಲ್ಲ ಎಂದು ಹೇಳಿದ್ದಾರೆ.

ಉತ್ತರ ಕನ್ನಡ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...