Oyorooms IN

Saturday, 21st January, 2017 7:34 AM

BREAKING NEWS

ಕಲಬುರಗಿ

ರೆಡ್ಡಿ ಹಣ ವೈಟ್ ಮಾಡಿಕೊಟ್ಟಿದ್ದ ಭೀಮಾ ನಾಯ್ಕ್ ಬಂಧನ..???

ಕಲಬುರಗಿ: ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅವರ ಮಗಳ ಅದ್ದೂರಿ ಮದುವೆಗೆ ಕಪ್ಪುಹಣವನ್ನು ವೈಟ್ ಮಾಡಿಕೊಟ್ಟ ಆರೋಪದಲ್ಲಿ ತಲೆ ಮರೆಸಿಕೊಂಡಿದ್ದ, ವಿಶೇಷ ಭೂಸ್ವಾಧೀನ ಅಧಿಕಾರಿ ಭೀಮಾನಾಯ್ಕ್ ಅವರನ್ನು ಮಂಡ್ಯ ಹಾಗೂ ಕಲಬುರಗಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬೆಂಗಳೂರು ವಿಶೇಷ ಭೂಸ್ವಾಧೀನ ಅಧಿಕಾರಿಯಾಗಿದ್ದ ಭೀಮಾ ನಾಯ್ಕ್ ಅವರ ಕಚೇರಿ ಕಾರು ಚಾಲಕನಾಗಿದ್ದ ರಮೇಶ್ ಗೌಡ ಎಂಬುವರು ಆತ್ಮಹತ್ಯೆ ಮಾಡಿಕೊಂಡಿದ್ದು, ಅವರು ಬರೆದಿದ್ದ 17 ಪುಟಗಳ ಡೆತ್ ನೋಟ್ ನಲ್ಲಿ ಜನಾರ್ದನ ರೆಡ್ಡಿಯವರ 100 ಕೋಟಿ ಕಪ್ಪುಹಣವನ್ನು ಭೀಮಾನಾಯ್ಕ್ ಅವರು ಕಮೀಷನ್ ಪಡೆದು ವೈಟ್ ಮಾಡಿಕೊಟ್ಟಿದ್ದರು ಎಂದು ಉಲ್ಲೇಖಿಸಿದ್ದರು.

ಕಾರು ಚಾಲಕ ರಮೇಶ್ ಆತ್ಮಹತ್ಯೆ ಮಾಡಿಕೊಂಡ ನಂತರ ಭೀಮಾ ನಾಯ್ಕ್ ತಲೆ ಮರೆಸಿಕೊಂಡಿದ್ದರು, ರಮೇಶ್ ಗೌಡ ಡೆತ್ ನೋಟ್ ನಲ್ಲಿ ಭೀಮಾನಾಯ್ಕ್ ಅವರ ಅಕ್ರಮ, ಭ್ರಷ್ಟಾಚಾರ, ಅಕ್ರಮ ಆಸ್ತಿಗಳ ವಿವರವನ್ನು ಬಹಿರಂಗಗೊಳಿಸಿದ್ದ ರಮೇಶ್ ಗೌಡ, ಜನಾರ್ದನ್ ರೆಡ್ಡಿ ಹಾಗೂ ಶ್ರೀರಾಮುಲು ಅವರ ಹೆಸರನ್ನು ಉಲ್ಲೇಖಿಸಿದ್ದರು.

English summary:  Bhima naik arrested in mandya and kalburgi police joint operation

ಕಲಬುರಗಿ ಇನ್ನಷ್ಟು

ಪ್ರಮುಖ ಸುದ್ದಿಗಳು