Oyorooms IN

Saturday, 19th August, 2017 4:32 PM

BREAKING NEWS

ಕವನ

ಕಪ್ಪು ಧನ ಸುಂದರಿ

17
ಕಪ್ಪು ಧನ ಸುಂದರಿ
ನೀ ಶ್ರೀಮಂತರ ಖಜಾನೆಯ ನಾರಿ
ನಿನಗೆ ಮರುಳಾದವರಿಲ್ಲವಲ್ಲೇ…ಮದನಾರಿ
ಈಗ ಸಿಕ್ಕು ನರಳಾಡುತಿರುವೆಯಲ್ಲ ಯಮಾರಿ
ನೀನೆಷ್ಟು ಬಡ ಜನರ ರಕ್ತ ಹೀರಿರುವೆ ವಯ್ಯಾರಿ
ಕೆಲಸವಾಗಲು ಹತ್ತುವರು ಜನರು ನಿನ್ನ ಕಾಲೇರಿ
ನಿನಗಾಗಿ ನಡೆವೆವು…ರಾತ್ರೋ ರಾತ್ರಿ ಸುಫಾರಿ
ನಿನಗೆ ಸಮಾದಿ ಕಟ್ಟಿದನಲ್ಲ ಈ ದೇಶದ ರೂವಾರಿ
ನಿನಗೆ ಇವನೇ ಸಾಟಿ ಕಣೇ ಬಜಾರಿ
ನೆಕ್ಕಿದಿಯಲ್ಲ ಲಂಚವೆಂಬ ನಾಲಿಗೆಯಿಂದ ರಕ್ತ ಹೀರಿ
ಈಗ ಮಾಡಾಯ್ತಲ್ಲ ನಿನ್ನನ್ನು ಸದ್ದಿಲ್ಲದೆ ಪಾರಾರಿ….
ಮತ್ತೆ ಹುಟ್ಟದಿರು ಈ ದೇಶದಲಿ ಕೈ ಮುಗಿವೆ ಕೋರಿ
ಇಷ್ಟು ದಿನ ಮೆರೆತಿದ್ದೆ…ನೀ ಸಿರಿವಂತರ ಬುಜ ಏರಿ
ಇನ್ನು ಮುಂದೆ ನೀನು ಮದವಡಗಿದ ಹೋರಿ
ನೀನು ಆದೇಷ್ಟೋ ಜನರ ನಿದ್ದೆಕೆಡಿಸಿದ ಬಿಕನಾರಿ
ಇನ್ನೂ ಕಾದು ನೋಡಬೇಕು ನಿನ್ನ ಅಳಿವು ಉಳಿವುಗಳ ಬೆನ್ನೇರಿ…..
ಮಲ್ಲೇಶ್ ಯಳವಳ್ಳಿ  ಓಬಳಾಪುರ  ಬಳ್ಳಾರಿ ಜಿಲ್ಲೆ
ಮಲ್ಲೇಶ್ ಯಳವಳ್ಳಿ
ಓಬಳಾಪುರ ಬಳ್ಳಾರಿ ಜಿಲ್ಲೆ

ಕವನ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...