Oyorooms IN

Sunday, 20th August, 2017 10:49 PM

BREAKING NEWS

ಪ್ರವಾಸ

ಜಗತ್ತೀನ ಮತ್ತೊಂದು ತಾಜ್ ಮಹಲ್ ಬೋಲ್ಟ್ ಕ್ಯಾಸಲ್

1024px-BoldtCastle_aerial 

ಸ್ಪೆಷಲ್‌ ಡೆಸ್ಕ್‌:     ತಾಜ್ ಮಹಲ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಪ್ರೇಮಕಥೆಗೆ ಜೀವಂತ ಸಾಕ್ಷಿಯಾಗಿ ನಿಂತುಕೊಂಡಿರುವ ಅಮೋಘ ಪ್ರೇಮ ಸೌಧ. ಇಂತಹ ಮತ್ತೊಂದು ಕಟ್ಟಡವನ್ನು ಇಡೀ ವಿಶ್ವದಲ್ಲಿ ಎಲ್ಲಿಯೂ ಕಾಣಲು ಸಾಧ್ಯವಿಲ್ಲ, ಆದರೆ ತಾಜ್ ಮಹಲ್ ಕಟ್ಟಿದ ಸ್ಟೋರಿಗೆ ಹೋಲಿಕೆಯಾಗುವಂತಹ ಸ್ಟೋರಿ, ದೂರದ ಕೆನಡ ದೇಶದಲ್ಲಿ ನಡೆದು ಹೋಗಿದೆ. ಕೆನಾಡದ 1000 ಐಲ್ಯಾಂಡ್ಸ್ ನಲ್ಲಿ ಇರುವ ಹಾರ್ಟ್ ಲ್ಯಾಂಡಿನಲ್ಲಿ ಈ ಭವ್ಯವಾದ ಸೌಧವನ್ನು ನಿರ್ಮಾಣ ಮಾಡಲಾಗಿದೆ.

Château_de_Boldt

ವೈಭವದ ಮಹಲು ಬೋಲ್ಟ್ ಕ್ಯಾಸಲ್
ಅದು 1851 ರ ದಶಕದಲ್ಲಿ ಅಮೇರಿಕದಲ್ಲಿ ಚಾರ್ಚ್ ಚಾರ್ಲ್ಸ್ ಬೋಲ್ಟ್ ಅಮೇರಿಕದ ಒಬ್ಬ ಕೋಟ್ಯಾಧೀಶನಾಗಿದ್ದ, ಅವನು ಅಮೇರಿಕಾದಲ್ಲಿ ದೊಡ್ಡ ದೊಡ್ಡ ಹೋಟೆಲ್ ಗಳ್ನನು ನಿರ್ಮಿಸುವುದರಲ್ಲಿ ನಿಪುಣನಾಗಿದ್ದ. ಆತನದ್ದು ಎಂತಹವರನ್ನು ಆರ್ಕಷಣೆ ಮಾಡುವ ಸೌಂದರ್ಯ ಹಾಗೂ ಬೇರೆಯವರನ್ನು ಪ್ರಭಾವಗೊಳಿಸುವ ಸಾಮರ್ಥ ಆತನಿಗಿತ್ತು. ಹೀಗಿರುವಾಗ ಆತನಿಗೆ ಒಂದು ಕ್ಲಬ್ ನಲ್ಲಿ ಅಸಿಸ್ಟೆಂಟ್ ಮ್ಯಾನೇಜರ್‍ ಹುದ್ದೆಗೆ ನೇಮಕವಾಯಿತು. ಅಲ್ಲಿನ ಮ್ಯಾನೇಜರ್‍ ಮಗಳು ಲೂಯಿಸ್ ಆಗಾಗ ತನ್ನ ತಂದೆಯ ಕೆಲಸಕ್ಕೆ ನೆರವಾಗಲು ಆಗಾಗ ಹೋಟೆಲ್ಗೆ ಬರುತ್ತಿದ್ದಳು. ಲೂಯಿಸ್ ಕೂಡ ಅಪ್ರತಿಮ ಸುಂದರಿ. ಅವಳ ಬಂಗಾರ ವರ್ಣದ ಕೂದಲು, ಹಾಲಿನಲ್ಲಿ ಅದ್ದಿ ತೆಗೆದತಂಹ ಸೌಂದರ್ಯದ ಗಣಿ ಆಕೆ, ಸದಾ ಮಿನುಗುತ್ತಿದ್ದ ಮುಗುಳು ನಗೆ, ಎಲ್ಲವೂ ಚಾರ್ಲ್ಸ್ ಬೋಲ್ಟ್ ಅನ್ನು ಆಕರ್ಷಣೆ ಮಾಡಲು ಹೆಚ್ಚು ಕಾಲ ಬೇಕಾಗಿರಲಿಲ್ಲ. ಚಾರ್ಲ್ಸ್ ಬೋಲ್ಟ್ ಆತನ ಅಭಿಮಾನಿಯಾಗಿ ಬಿಟ್ಟ.

Boldt_Generatorenhaus_KANNADAONLINENEWS

ಲೂಯಿಸ್ಳ ಅಂದವನನ್ನು ಸವೆಯಲು ಅಕ್ಕಪಕ್ಕದ ತುಂಟಹುಡುಗರು ಉದ್ದೇಶಪೂರ್ವಕವಾಗಿ ಅವಳ ನಗೆಯ‌ನ್ನು ನೋಡಲು ಬರುತ್ತಿದ್ದರು, ಚಾರ್ಲ್ಸ್ ಬೋಲ್ಟ್ ಕೂಡ ಅವಳನ್ನು ಮನದ ಅರಸಿಯಂತೆ ಪ್ರೀತಿಸತೊಡಗಿದ, ಅವರಿಬ್ಬರ ನಡುವೆ ಪ್ರೇಮ ಏರ್ಪಡಲು ಬಹಕಾಲ ಬೇಕಾಗಿರಲಿಲ್ಲ. ಅವರಿಬ್ಬರ ನಡುವೆ ಪ್ರೇಮಾಂಕುರವಾಗಿ 1877ರಲ್ಲಿ ಅವರ ಪ್ರೀತಿ ಮದುವೆ ಬಳಿಕ ಅವರು ಫಿಲಡೆಲ್ಫಿಯಾದಲ್ಲಿ ಹೋಟೆಲ್ ಬೋಲ್ಟ್ ವ್ಯೂ ಅನ್ನು ನಿರ್ಮಿಸಿದರು.

ಆ ಹೋಟೆಲ್ ಎಷ್ಟು ಆದ್ಬುತವಾಗಿ ನಿರ್ಮಾಣ ಮಾಡಲಾಗಿತ್ತು ಎಂದರೇ ಖುದ್ದು ಲೂಯಿಸ್ ನಿಂತು ಕೊಂಡು ಹೋಟೆಲ್ಗಳ ಪ್ರತಿಯೊಂದು ಕೋಣೆಯನ್ನು ಡಿಸೈನ್ ಮಾಡಿದ್ದಳು. ಅದರ ಅಂದಕ್ಕೆ ಜನರು ಮನಸೋತು ಹೋಗಿದ್ದರು. ಆ ಹೋಟೆಲ್ ನಲ್ಲಿ ಅತ್ಯಂತ ರುಚಿಯಾದ ಆಹಾರ ರಾಜಮನೆತನದ ತನಕ ತಲುಪಿತು. ಹೀಗಾಗಿ ಇವರಿಬ್ಬರ ಪರಿಚಯ ವಿಶೇಷ ವ್ಯಕ್ತಿಗಳಲ್ಲಿ ಒಬ್ಬರಂತೆ ಆಗತೊಡಗಿತು. ಈ ಒಂದು ಆಪ್ತ ಸಂಬಂಧದಿಂದಾಗಿ ನ್ಯೂರ್ಯಾಕ್ ಸಿಟಿಯಲ್ಲಿ ನಿರ್ಮಾಣವಾಗುತ್ತಿದ್ದ ಅತ್ಯಂತ ದೊಡ್ಡ ಹೋಟೆಲ್ ವಾರ್ಡಿಫ್ಗೆ ಚಾರ್ಲ್ಸ್ ಬೋಲ್ಟ್ ಅನ್ನು ಪ್ರೋಪ್ರೈಟರ್‍ ಆಗಿ ನೇಮಕ ಮಾಡಲಾಗಿತ್ತು,

ಲೂಯಿಸ್ ಹಾಗೂ ಬೋಲ್ಟ್ ಇವರಿಬ್ಬರ ಅದ್ಬುತವಾದ ಪ್ರಯತ್ನ ಹಾಗೂ ಕ್ರಿಯಾಶೀಲತೆಯ ನಿರ್ಮಾಣವವಾದ ವಾರ್ಡಿಫ್ ಜಗತ್ತಿನ ಅತ್ಯುತ್ತಮ ಹೋಟೆಲ್ ಗಳಲ್ಲಿ ಒಂದೆನಿಸಿಕೊಂಡವು. ಇನ್ನೂ ರಾಜ ಮನೆತನಕ ಮತ್ತಷ್ಟು ಹತ್ತಿರವಾದ ನಂತರ ಚಾರ್ಲ್ಸ್ ಬೋಲ್ಟ್ ಮತ್ತು ಲೂಯಿಸ್ ಅವರಿಗೆ ಅದೇ ರೀತಿಯಲ್ಲಿ ಅನೇಕ ದೊಡ್ಡ ದೊಡ್ಡ ಹೋಟೆಲ್ಗಳನ್ನು ನಿರ್ಮಿಸಿದರು.

ಪ್ರೀತಿಯ ಪ್ರತೀಕ

ಚಾರ್ಲ್ಸ್ ಬೋಲ್ಟ್ ತನ್ನ ಪತ್ನಿ ಲೂಯಿಸ್ಳನ್ನು ಪ್ರೀತಿಯಿಂದ ” ಬ್ಯೂಟಿಫುಲ್ ಪ್ರಿನ್ಸೆಸ್ ” ಎಂದು ಕರೆಯುತ್ತಿದ್ದ. ಚಾರ್ಲ್ಸ್ ಬೋಲ್ಟ್ ಅಕೆಯನ್ನು ಅಷ್ಟರ ಮಟ್ಟಿಗೆ ಆಕೆಯನ್ನು ಪ್ರೀತಿಸುತ್ತಿದ್ದ. ಅವಳ ಹೊರತಾಗಿ ತನ್ನ ಜೀವನವನ್ನು ಆತ ಕಲ್ಪಿಸಿಕೊಳ್ಳುತ್ತ ಇರಲಿಲ್ಲ. ಆಕೆಯ ಮೇಲಿರುವ ಪ್ರೀತಿಗೆ ಏನನ್ನಾದರೂ ವಿಶೇಷವಾಗಿ ಪ್ರೀತಿಸ ಬೇಕೆಂದು ಅವನು ಸದಾ ಯೋಚಿಸುತ್ತಿದ್ದ.

ತನ್ನ ಕಾರ್ಯಯೋಜನೆಗೆ ಒಂದು ರೂಪುಕೊಡಲು ಕೆನಾಡದ 1000  ಐಲ್ಯಾಂಡಿನಲ್ಲಿರುವ ಹಾರ್ಟ್ ಲ್ಯಾಂಡ್ ಅನ್ನು ಆಯ್ಕೆ ಮಾಡಿಕೊಂಡ, ಅಲ್ಲಿ ಸ್ಮರಣಾರ್ಹ ಸ್ಮಾರಕ ಮಾಡಲು ನಿರ್ಧರಿಸಿ. ಅಂದಿನ ಕಾಲದ ಹೆಸರಾಂತ, ಶಿಲ್ಪಿಗಳು ಮತ್ತು ಕರಕುಶಲ ಕಲೆಯಲ್ಲಿ ನಿಪುಣರಾರದವರನ್ನು ಈ ಕೆಲಸಲಲ್ಲಿ ತೊಡಗಿಸಿದ. ಪ್ರತಿಯೊಂದು ಕೆಲಸ ಲೂಯಿಸ್ಳ ಆಸಕ್ತಿ, ಅವಳ ಅಪೇಕ್ಷೆಯ ಮೇರೆಗೆ ನಡೆಯುತಿತ್ತು, ಅವರು ನಿರ್ಮಿಸುತ್ತಿದ್ದ ಹೋಟೆಲ್ನಲ್ಲಿ ಲೂಯಿಸು ಖುದ್ದು ಮತುವರ್ಜಿ ವಹಿಸಿಕೊಂಡು ಪ್ರತಿಯೊಂದು ರೂಮ್ ಗಳನ್ನು ವಿಶೇಷ ವಿನ್ಯಾಸ, ಅಲಂಕಾರಮಾಡಿಸಿದಳು, ಆಕೆ ಚಿಕ್ಕ-ಪುಟ್ಟ ವಿಷಯಗಳ ಬಗೆಗೂ ಬಹಳ ಆಸಕ್ತಿವಹಿಸಿ ಎಲ್ಲ ಕೆಲಸವನ್ನು ಮಾಡುತ್ತಿದ್ದಳು. ಬೋಲ್ಟ್ ತನ್ನ ಹೆಂಡತಿ ಮೇಲೆ ಇಟ್ಟ ಪ್ರತಿ ಎಷ್ಟರ ಮಟ್ಟಿಗೆ ಇತ್ತೆಂದರೆ ಆಕೆ ಕತ್ತಲಲ್ಲಿ ಇರಬಾರದೆಂದು ಬೋಲ್ಟ್ ತನ್ನದೇ ಉಪಯೋಗಕ್ಕೆ ಪವರ್‍ ಹೌಸ್ ಅನ್ನು ನಿರ್ಮಾಣ ಮಾಡಿದ್ದ.

ಬೋಲ್ಟ್ ಕ್ಯಾಸಲ್ ನಿರ್ಮಾಣಗೊಂಡಿತು ಬೋಲ್ಟ್ ತನ್ನ ಪ್ರೀತಿಯ ಪತ್ನಿಯ ಜೊತೆ ಇದೇ ಹೋಟೆಲ್ಗೆ ೪ ಸಲ ರಜೆಯನ್ನು ಕಳೆಯಲು ಬಂದಿದ್ದ.`ಪ್ರತಿ ಸಾರಿ ಇಲ್ಲಿಗೆ ಬಂದಾಗಲೆಲ್ಲ ಅವನು ಅವಳನ್ನು ಸಾಕಷ್ಟು ಸುತ್ತಾಡಿಸುತ್ತಿದ್ದ, ಅವಳಿಗೆ ಏನೊಂದು ಕಡಿಮೆಯಾಗ ಹಾಗೇ ನೋಡಿಕೊಳ್ಳುತ್ತಿದ್ದ. ತನ್ನ ಪ್ರಿತಿಪಾತ್ರಳ ಹೆಂಡತಿಯ ಸವಿ ನೆನಪಿಗಾಗಿ ಬೋಲ್ಟ್ ಆ ಹೋಟೆಲ್ ಅನ್ನು ಹೃದಯದ ಆಕಾರದಲ್ಲಿ ನಿಮಾರ್ಣಮಾಡಿದ್ದ. ಇಷ್ಟೆಲ್ಲ ತನ್ನ ಹೆಂಡತಿಯನ್ನು ಇಷ್ಟಪಡುತ್ತಿದ್ದ ಬೋಲ್ಟ್ ಪಾಲಿಗೆ ವಿಧಿ ಇನ್ನಿಲದ ಹಾಗೇ ಆಟವಾಡಿಬಿಟ್ಟಿತ್ತು. ಬರೀ ನಾಲ್ಕು ವರ್ಷಗಳ ಬೇಸಿಗೆ ಕಾಲದ ರಜೆಯನ್ನು ಮಾತ್ರ ಬೋಲ್ಟ್ ಹಾಗೂ ಲೂಯಿಸ್ ಕಳೆಯುತ್ತಾರೆ, ತನ್ನ ಮುದ್ದು ಮಡದಿಗೆ ಈ ಸುಂದರವಾದ ಮಹಲ್ ಅನ್ನು ಜನ್ಮದಿವಸದ ಬರ್ತ್ ಡೇ ಗಿಫ್ಟ್ ಅನ್ನು ನೀಡ ಬೇಕು ಎಂದು ಅಂದುಕೊಂಡವನಿಗೆ ಲೂಯಿಸ್ ತನ್ನ ಹುಟ್ಟು ಹಬ್ಬಕ್ಕೂ ಮುನ್ನ 1 ತಿಂಗಳ ಮುಂಚೆ 42 ವರ್ಷದ ವಯಸ್ಸಿನಲ್ಲಿ ಆಕ್ಮಸಿಕವಾಗಿ ವಿಧಿವಶಳಾಗುತ್ತಾಳೆ. 1904 ೪ರಲ್ಲಿ ತನ್ನ ಹೆಂಡತಿಯ ಸಾವಿನಿಂದ ತೀರ ಮಾನಸಿಕ್ಕ ಖಿನ್ನತೆಗೆ ಒಳಗಾದ ಬೋಲ್ಟ್ ಹಾರ್ಟ್‌ಲ್ಯಾಂಡಿನಲ್ಲಿ ಬೋಲ್ಟ್ ಕ್ಯಾಸಲ್ ನ ಕೆಲಸವನ್ನು ನಿಲ್ಲಿಸಿಬಿಟ್ಟ. ತನ್ನ ಜೀವದ ಹೆಂಡತಿ ಸಾವನ್ನು ಆರಗಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿ ಬಿಟ್ಟ ಬೋಲ್ಟ್ ಹುಚ್ಚನಾಗಿಬಿಟ್ಟ. ಲೂಯಿಸ್ ಸತ್ತ 12ವರ್ಷಗಳ ನಂತರವು ಕೂಡ ಬೋಲ್ಟ್ ಅ ಪ್ರೇಮ ಸೌಧದ ಕಡೆಗೆ ಒಮ್ಮೆಯೂ ಹೋಗಲಿಲ್ಲ. ಇತ್ತ ಬೋಲ್ಟ್ ಕ್ಯಾಸಲ್ ದಿನ ಕಳೆದ ಹಾಗೇ ಕಳ್ಳ ಕಾಕರ, ದರೋಡೆಕೋರರ ಸ್ವರ್ಗವಾಗಿ ಹೋಗುತ್ತದೆ. ಅನೇಕ ಸುಂದರ ಕಲಾಕೃತಿಗಳು ಸೇರಿದಂತೆ ಭವ್ಯವಾದ ಪ್ರೇಮ ಸೌಧವು ದಿನಕಳೆದಂತೆ ಖಾಲಿಯಾಗ ತೊಡಗಿತು.

1977 ರಲ್ಲಿ ಪ್ರವಾಸಿ ಸ್ಮಾರಕವಾಗಿ ಘೋಷಣೆ
1977 ರಲ್ಲಿ ಇದನ್ನು ಪ್ರವಾಸಿ ಸ್ಮಾರಕವನ್ನಾಗಿ ಘೋಷಣೆ ಮಾಡಿದರು ಅಲ್ಲಿನ ಸರ್ಕಾರ. ೫ ಏಕರೆ ಜಾಗದಲ್ಲಿ ನಿರ್ಮಾಣವಾಗಿರುವ ಈ ಪ್ರೇಮ ಸೌಧವು 120 ಕೋಣೆ, 2 ಮಹಲುಗಳನ್ನು ಒಳಗೊಂಡಿರುವ ರೋಮನ್ ಶೈಲಿಯ ಸುಂದರವಾದ ಕಟ್ಟಡ. ಇಲ್ಲೆ ಇರುವ ಅಲ್ಟರ್‍ ಟವರ್‍ ನಲ್ಲಿ ಬೋಲ್ಟ್ ಹಾಗೂ ಲೂಯಿಸ್ ತಮ್ಮ ಬೇಸಿಗೆ ಕಾಲದ ರಜೆಯನ್ನು ಕಳೆಯುತ್ತಿದ್ದರಂತರೆ. ಸುಂದರವಾದ ಹೂ ತೋಟಗಳು ಕೂ ಇಲ್ಲಿದೆ.

ನದಿಯ ತಡದಲ್ಲಿ ನಿರ್ಮಾಣವಾಗಿರುವ ಪ್ರೇಮ ಸೌಧಕ್ಕೆ ಪ್ರತಿ ನಿತ್ಯ ನೂರಾರು ಅಲೆಗಳು ಬಂದು ಅಪ್ಪಳಿಸುತ್ತಿವೆ, ಆದರೆ ಚಾರ್ಚ್ ಚಾರ್ಲ್ಸ್ ಬೋಲ್ಟ್ ತನ್ನ ಮುದ್ದು ಹೆಂಡಿಗಾಗಿ ನಿರ್ಮಾಣ ಮಾಡಿದ್ದ ಬೋಲ್ಟ್ ಕ್ಯಾಸಲ್ ಇಂದಿಗೂ, ಎಂದಿಗೂ ನಮ್ಮನು ಕಾಪಾಡುತ್ತಿವೆ.

ಬರಹ : ಅವಿನಾಶ್ ಆರ್‌ ಭೀಮಸಂದ್ರ

English Sumeery : Boldt Castle is a major landmark and tourist attraction in the Thousand Islands region of the U.S. state of New York. It is located on Heart Island in the Saint Lawrence River. Heart Island is part of the Town of Alexandria, in Jefferson County. Originally a private mansion built by an American millionaire, it is today maintained by the Thousand Islands Bridge Authority as a tourist attraction.

ಪ್ರವಾಸ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...