Oyorooms IN

Wednesday, 24th May, 2017 8:03 AM

BREAKING NEWS

ಪ್ರಮುಖ ಸುದ್ದಿಗಳು

ತಂಗಿಯ ಪ್ರೇಮಕ್ಕೆ ಪ್ರಾಣಬಿಟ್ಟ ಅಣ್ಣ

suicide

ತೆಲಂಗಾಣ: ಚಿಕ್ಕವಯಸ್ಸಿಗೆ ಕುಟುಂಬದ ಜವಾಬ್ದಾರಿಯನ್ನು ಹೊತ್ತು, ಜೊತೆಗೆ ಹುಟ್ಟಿದ ಒಬ್ಬಳೇ ಒಬ್ಬಳು ತಂಗಿಯ ಮದುವೆಯನ್ನು ಅದ್ದೂರಿಯಾಗಿ ಮಾಡಬೇಕೆಂದು ಏರ್ಪಾಟು ಮಾಡಿದ್ದ ಅಣ್ಣನಿಗೆ, ತಂಗಿ ಪ್ರೇಮ ವಿವಾಹ ಮಾಡಿಕೊಂಡು ಶಾಕ್ ನೀಡಿದ್ದಾಳೆ. ಇದರಿಂದ ಆಘಾತಗೊಂಡ ಅಣ್ಣ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆ ಮೇದಕ್ ನಲ್ಲಿ ನಡೆದಿದೆ.

ಮೇದಕ್ ಜಿಲ್ಲೆ ತೂಪ್ರಾನ್ ಗ್ರಾಮದ ಶ್ರಾವಣ್ ಕುಮಾರ್ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ತಂದೆ ಚಿಕ್ಕವಯಸ್ಸಿನಲ್ಲಿಯೇ ಸಾವನ್ನಪ್ಪಿದ್ದರಿಂದ ಕುಟುಂಬ ಜವಾಬ್ದಾರಿಯನ್ನು ತೆಗೆದುಕೊಂಡು, ಸಂಸಾರ ನಡೆಸುತ್ತಿದ್ದ, ತನ್ನ ತಂಗಿಗೆ ಅದ್ದೂರಿಯಾಗಿ ಮದುವೆ ಮಾಡ್ಬೇಕೆಂದು ಒಳ್ಳೆಯ ಸಂಬಂಧವನ್ನು ನೋಡಿ ನಿಶ್ಚಿತಾರ್ಥ ಕೂಡ ಮಾಡಿದ್ದಾನೆ.

ನಿಶ್ಚಿತಾರ್ಥವಾದ ನಂತರ ಪ್ರೀತಿಯ ತಂಗಿ ಪ್ರೀತಿಸಿದ ಹುಡುಗನೊಂದಿಗೆ ಮದುವೆ ಮಾಡಿಕೊಂಡು ಪೊಲೀಸರ ಮೊರೆ ಹೋಗಿದ್ದಾಳೆ. ಪೊಲೀಸರು ಶ್ರಾವಣ್ ಕುಮಾರ್ ನನ್ನು ಠಾಣೆಗೆ ಕರೆಸಿ ಮಾತನಾಡಿದ್ದಾರೆ. ಪ್ರೀತಿಯಿಂದ ನೋಡಿಕೊಂಡ ತಂಗಿ ತನ್ನ ಮರ್ಯಾದೆಯನ್ನು ಹಾಳು ಮಾಡಿದಳು ಎಂದು ಶ್ರಾವಣ್ ಮಧ್ಯರಾತ್ರಿಯಲ್ಲಿ ಮನೆ ಬಿಟ್ಟು ಹೋಗಿ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿದ್ದಾನೆ.

English summary: brother commit suicide after sister marry her lover

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...