Oyorooms IN

Sunday, 28th May, 2017 12:03 AM

BREAKING NEWS

ಚಾಮರಾಜನಗರ

ನಾಲೆಗೆ ಉರುಳಿದ ಕಾರು ಇಬ್ಬರ ಸಾವು

accident

ಚಾಮರಾಜನಗರ: ಇನೋವಾ ಕಾರು ನಿಯಂತ್ರಣ ತಪ್ಪಿ ಕಬಿನಿ ನಾಲೆಗೆ ಉರುಳಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕುದೇರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಮೈಸೂರಿನ ದರ್ಶನ್, ಕಾರ್ತಿಕ್ ಸಾವನ್ನಪ್ಪಿದ್ದು, ಮತ್ತೊರ್ವ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ..

ಉಮ್ಮತ್ತೂರಿನ ಏಕಲವ್ಯ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳಾಗಿದ್ದ ದರ್ಶನ್, ಕಾರ್ತಿಕ್, ದರ್ಶನ್ ದಸರೆ ರಜೆಯನ್ನು ಮುಗಿಸಿ ವಾಪಾಸ್ ಕಾಲೇಜಿಗೆ ಹೋಗುತ್ತಿದ್ದ ಘಟನೆ ನಡೆದಿದ್ದು, ಕಾರು ನಿಯಂತ್ರಣ ತಪ್ಪಿ ನಾಲೆಗೆ ಉರುಳಿದ್ದರಿಂದ ಕಾರ್ತಿಕ್ ಮತ್ತು ದರ್ಶನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

ಕಾರನ್ನು ಚಾಲನೆ ಮಾಡುತ್ತಿದ್ದ ದರ್ಶನ್ ಪ್ರಾಣಾಪಾಯದಿಂದ ಪಾರಾಗಿದ್ದು, ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ನಾಲೆಯಲ್ಲಿ ಮುಳುಗಿದ್ದ ಇಬ್ಬರು ವಿದ್ಯಾರ್ಥಿಗಳ ಶವವನ್ನು ಹೊರತೆಗೆದಿದ್ದು. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary:  car upside in chamaraja nagar

ಚಾಮರಾಜನಗರ ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...