Oyorooms IN

Sunday, 20th August, 2017 10:53 PM

BREAKING NEWS

ಕೊಪ್ಪಳ

‘ರವಿ ಕಾಣದ್ದನ್ನೂ ಪತ್ರಕರ್ತರು ಹುಡುಕಿ ಬರೆದಿರುತ್ತಾರೆ. ಸಚಿವ ಎಚ್.ಆಂಜನೇಯ

'ರವಿ ಕಾಣದ್ದನ್ನೂ ಪತ್ರಕರ್ತರು ಹುಡುಕಿ ಬರೆದಿರುತ್ತಾರೆ. ಸಚಿವ ಎಚ್.ಆಂಜನೇಯ
‘ರವಿ ಕಾಣದ್ದನ್ನೂ ಪತ್ರಕರ್ತರು ಹುಡುಕಿ ಬರೆದಿರುತ್ತಾರೆ. ಸಚಿವ ಎಚ್.ಆಂಜನೇಯ

ಕೊಪ್ಪಳ : ‘ರವಿ ಕಾಣದ್ದನ್ನೂ ಪತ್ರಕರ್ತರು ಹುಡುಕಿ ಬರೆದಿರುತ್ತಾರೆ. ಹೀಗೆಂದು ಹೇಳಿದವರು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ.

ಕೊಪ್ಪಳದಲ್ಲಿ ಶುಕ್ರವಾರ ಮಾತನಾಡಿದ ಅವರು ಜಾತಿ ಗಣತಿ ವರದಿ ಇನ್ನೂ ಬಿಡುಗಡೆಯಾಗಿಲ್ಲ. ಆದರೆ, ಮಾಧ್ಯಮಗಳಲ್ಲಿ ವರದಿಯ ಅಂಕಿ-ಸಂಖ್ಯೆಗಳು ಬಹಿರಂಗವಾಗುತ್ತಿವೆ. ವರದಿ ಸೋರಿಕೆಯಾಗಿದೆ ಎಂಬ ಸುದ್ದಿಗಳು ಹಬ್ಬಿವೆ. lಅದು ಅಧಿಕೃತ ಅಲ್ಲ. ಜಾತಿ ಗಣತಿ ವರದಿ ಸೋರಿಕೆಯಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕ ಸರ್ಕಾರ 2015ರಲ್ಲಿ ಸುಮಾರು 130 ಕೋಟಿ ವೆಚ್ಚದಲ್ಲಿ ಜಾತಿ ಗಣತಿ ನಡೆಸಿದೆ. ರಾಜ್ಯದ ಪ್ರತಿಯೊಂದು ಕುಟುಂಬಕ್ಕೆ ಸೇರಿದ ವ್ಯಕ್ತಿಗಳ ಸಾಮಾಜಿಕ, ಶೈಕ್ಷಣಿಕ ಸ್ಥಿತಿ-ಗತಿ, ಔದ್ಯೋಗಿಕ-ಆರ್ಥಿಕ, ರಾಜಕೀಯ ಪ್ರಾತಿನಿಧ್ಯ ಅಂಶಗಳ ಮೇಲೆ ನಿಖರವಾದ ಮಾಹಿತಿ ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶವಾಗಿದೆ..

‘ಕೆಲವು ಸಮುದಾಯಗಳಿಗೆ ಕೊಡಬೇಕಾದ ಸೌಲಭ್ಯಗಳ ಬಗ್ಗೆ ಹಿಂದುಳಿದ ವರ್ಗಗಳ ಆಯೋಗದಿಂದ ಶಿಫಾರಸು ಕೇಳಿದ್ದೇವೆ. ಆಯೋಗ ಅದಕ್ಕೆ ಕಾಲಾವಕಾಶ ಕೇಳಿದೆ. ಶಿಫಾರಸು ಬಂದ ನಂತರ ವರದಿಯನ್ನು ಸದನದಲ್ಲಿ ಮಂಡಿಸಲಾಗುವುದು’ ಎಂದು ಸಚಿವರು ಇದೇ ಸಂದರ್ಭದಲ್ಲಿ ಹೇಳಿದರು.

ಕೊಪ್ಪಳ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...