Oyorooms IN

Tuesday, 23rd May, 2017 12:18 AM

BREAKING NEWS

ಪ್ರಮುಖ ಸುದ್ದಿಗಳು

ಕಾವೇರಿ ನೀರು ಕುಡಿಯಲು ಮಾತ್ರ, ವಿಧಾನ ಪರಿಷತ್ ನಿರ್ಣಯ

parishad

ಬೆಂಗಳೂರು: ಕಾವೇರಿ ಪ್ರಾಂತ್ಯದಲ್ಲಿ ಕುಡಿಯುವ ನೀರಿಗಾಗಿ ಮಾತ್ರ ಜಲಾಶಯಗಳಲ್ಲಿರುವ ನೀರನ್ನು ಬಳಸಿಕೊಳ್ಳುವ ನಿರ್ಣಯವನ್ನು ವಿಧಾನ ಮಂಡಲ ತುರ್ತು ಅಧಿವೇಶನದಲ್ಲಿ ಅಂಗೀಕರಿಸಲಾಗಿದೆ. ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಎಸ್.ರವಿ.ಮಂಡಿಸಿದ ಪ್ರಸ್ತಾವನೆ ಪ್ರತಿಪಕ್ಷಗಳು ಒಪ್ಪಿಗೆ ನೀಡಿವೆ.

ಜಲಸಂಕಷ್ಟ ವರ್ಷ ಎಂದು ಪರಿಗಣಿಸಿದ್ದು, ಹಾಲಿ ಇರುವ ನೀರನ್ನು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಮಾತ್ರ ಬಳಸಿಕೊಳ್ಳಬೇಕು ಎಂಬ ನಿರ್ಣಯ ಕೈಗೊಂಡಿದ್ದು, ವಿಧಾನಪರಿಷತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.

ಕೆಆರ್ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿರುವ ನೀರನ್ನು ಕಾವೇರಿಕೊಳ್ಳದ ಪಟ್ಟಣಗಳ ಕುಡಿಯುವ ನೀರಿಗಾಗಿ ಬಳಸಿಕೊಳ್ಳಲು ನಿರ್ಣಯ ಕೈಗೊಳ್ಳಲಾಗಿದ್ದು, ಬೇರೆ ಯಾವ ಕಾರಣಕ್ಕೂ ನೀರನ್ನು ಒದಗಿಸಲು ಸಾಧ್ಯವಿಲ್ಲ ಎಂದು ಸರ್ವಾನುಮತದ ನಿರ್ಣಯ ತೆಗೆದುಕೊಳ್ಳಲಾಗಿದೆ.

English summary: Cauvery row vidhan parishad passes resolution on Cauvery.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...