Oyorooms IN

Friday, 24th February, 2017 6:44 AM

BREAKING NEWS

ಕೋಲಾರ

ಕೋಲಾರ : ಗಂಡ ಚೀಟಿ ವ್ಯವಹಾರ ಮಾಡಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೂಡಿ ಹಾಕಿದ್ರು

ಕೋಲಾರ : ಗಂಡ ಚೀಟಿ ವ್ಯವಹಾರ ಮಾಡಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೂಡಿ ಹಾಕಿದ್ರು

ಕೋಲಾರ : ಚೀಟಿ ವ್ಯವಹಾರ ಮಾಡಿ ಚೀಟಿದಾರರಿಗೆ ಕೈಕೊಟ್ಟು ತಲೆ ಮರೆಸಿಕೊಂಡಿದ್ದ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳನ್ನ ಗೃಹ ಬಂಧನದಲ್ಲಿ ಇರಿಸಿರುವ ಘಟನೆ ಕೋಲಾರದ ರಹಮತ್ ನಗರದಲ್ಲಿ ನಡೆದಿದೆ.

ಸೈಯಾದ್ ಅನ್ಸಾರ್ ಎಂಬಾತ ಚೀಟಿ ವ್ಯವಹಾರ ಮಾಡಿ ಕಳೆದ 1 ತಿಂಗಳಿಂದ ಚೀಟಿದಾರರಿಗೆ ಹಣ ನೀಡದೇ ಪರಾರಿಯಾಗಿದ್ದನು. ಇದರಿಂದ ಕುಪಿತಗೊಂಡ ಇಶ್ರಾತ್ ಸೈಯಾದ್ ಅನ್ಸಾರ್ ಎಂಬಾತ ಸೈಯಾದ್ ಅನ್ಸಾರ್ ಅವರ ಪತ್ನಿ ವಹೀದಾ ಬೇಗಂ, ಸೈಯದ್ ಆಯುಬ್, ಸಹಿದಾ ಸಬ್ಬನರ್ ರನ್ನು ತನ್ನ ಮನೆಯಲ್ಲಿ ಒಂದು ತಿಂಗಳ ಕಾಲ ಗೃಹಬಂಧನದಲ್ಲಿ ಇರಿಸಿಕೊಂಡಿದ್ದನು.

ಮಕ್ಕಳು ಒಂದು ತಿಂಗಳಿಂದ ಶಾಲೆಗೆ ಹೊಗದೇ ಇದ್ದರು. ಅಕ್ಕ ಪಕ್ಕದವರು, ಸಂಬಂಧಿಗಳು, ಸ್ಥಳೀಯರು ಮನವರಿಗೆ ಮಾಡಿ ಬಿಡುವಂತೆ ತಿಳಿಸದರು ಪ್ರಯೋಜನವಾಗಿಲ್ಲ. ಅದೇ ರೀತಿ ಇವತ್ತು ಗಲ್ ಪೇಟೆ ಪೊಲೀಸರು ಮನೆಗೆ ದಾಳಿ ಮಾಡಿ ಗೃಹ ಬಂಧನದಲ್ಲಿ ಇದ್ದ ತಾಯಿ ಮಕ್ಕಳನ್ನು ಬಿಡುಗಡೆ ಮಾಡಿಸಿ ಚಿಕಿತ್ಸೆಗಾಗಿ ಅಸ್ಪತ್ರೆಗೆ ದಾಖಲಿಸಲಾಗಿದೆ.
ಗೃಹಬಂಧನ ಬಗ್ಗೆ ಗಲ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಇಶ್ರಾತ್ ಸೇರಿದಂತೆ ಇಬ್ಬರನ್ನು ಬಂಧಿಸಿ ವಿಚಾರಣೆ ಮುಂದುವರೆಸಿದ್ದಾರೆ.

ವರದಿ : ಕೋಲಾರ ಚಂದ್ರ, ಪ್ರತಿನಿಧಿ

ಕೋಲಾರ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...