Oyorooms IN

Saturday, 19th August, 2017 4:41 PM

BREAKING NEWS

ಪ್ರಮುಖ ಸುದ್ದಿಗಳು

ಆರ್ ಬಿಐನಲ್ಲಿಯೇ ಕ್ಯಾಶ್ ಮುಗಿದುಹೋಗಿದೆಯಂತೆ..!!

modi-4

ಚೆನ್ನೈನಲ್ಲಿರುವ ಆರ್ ಬಿಐ ಆಫೀಸ್ ನಲ್ಲಿ ಕಳೆದ ಒಂದು ವಾರದಿಂದ 500, 1000 ನೋಟುಗಳನ್ನು ಬದಲಾಯಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ನಿರಾಸೆಯಿಂದ ಮರಳುತ್ತಿದ್ದಾರೆ, ಬ್ಯಾಂಕ್ ಗಳಿಗೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂ ಆ ಆಫೀಸ್ ನಲ್ಲಿ ನಗದು ಖಾಲಿಯಾಗುತ್ತಿದ್ದು, ಇದರಿಂದ ಗಂಟೆಗಟ್ಟಲೇ ಕ್ಯೂನಲ್ಲಿ ನಿಂತಿರುವವರು ನಿರಾಸೆಯೊಂದಿಗೆ ವಾಪಾಸ್ ಮನೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ನೋಟುಗಳನ್ನು ರದ್ದುಗೊಳಿಸಿರುವ ಸರ್ಕಾರ ನೋಟು ಬದಲಾಯಿಸಿಕೊಳ್ಳಲು ಡಿಸೆಂಬರ್ 30 ಅನ್ನು ಕೊನೆದಿನವನ್ನಾಗಿ ಘೋಷಿಸಿದ್ದು, ಅಲ್ಲಿಯವರಗೆ ನೋಟುಗಳನ್ನು ಬದಲಾಯಿಸಿಕೊಳ್ಳದವರ ಹಣ ಗೋವಿಂದವಾದಂತೆಯೇ ! ಅಂತಿಮ ದಿನಾಂಕ ಹತ್ತಿರವಾದಂತೆ, ಆರ್ ಬಿಐನಲ್ಲಿಯೂ ಹಣ ಖಾಲಿಯಾಗುತ್ತಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಕಪ್ಪುಹಣವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಜನರು ಸ್ವಾಗತಿಸುತ್ತಿದ್ದು, ಕನಿಷ್ಠ ಅಗತ್ಯತೆಗೆ ಸಹ ಹಣ ಸಿಗದೇ ಇರುವುದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ, ವ್ಯಾಪಾರ ವಹಿವಾಟನ್ನು ಬಿಟ್ಟು ಹಣ ಬದಲಾವಣೆಗೆ ಕ್ಯೂನಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ.

1960ರಲ್ಲಿ ಚೆನ್ನೈನಲ್ಲಿ ಸ್ಥಾಪನೆಯಾಗಿರುವ ಆರ್ ಬಿಐಗೆ ಅಂದಿನಿಂದ ಜನರು ಹೋಗುವುದು ಕಡಿಮೆಯೇ ಆದರೆ ನೋಟು ರದ್ದುಗೊಳಿಸಿದ್ದರಿಂದ ಆರ್ ಬಿಐ ಬ್ಯಾಂಕ್ ಗೆ ಹೋಗುವ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದ್ದು, ಬ್ಯಾಂಕ್ ಗಳಲ್ಲಿ 2000 ನೋಟುಗಳನ್ನು ನೀಡುತ್ತಿರುವುದರಿಂದ ಚಿಲ್ಲರೆ ಸಮಸ್ಯೆ ಉದ್ಭವವಾಗಿದೆ, 7 ಗಂಟೆ, 3 ಗಂಟೆ ಕ್ಯೂನಲ್ಲಿ ನಿಂತರು ಹಣ ಸಿಗುತ್ತಿರುವುದು ಮಾತ್ರ ಕಡಿಮೆಯೇ ಅದರಲ್ಲಿ ಹೊಸ ನೋಟು ನೀಡುತ್ತಿರುವುದರಿಂದ ಸಮಸ್ಯೆ ಹೆಚ್ಚುತ್ತಿದೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ.

English summary:  Chennai RBI office runs out of money time being taken to bring new notes raises fake currency

 

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...