Oyorooms IN

Tuesday, 17th January, 2017 10:19 AM

BREAKING NEWS

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!! , ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ ,

ಚಿಕ್ಕಮಗಳೂರು

ನಾಳೆ ಸಂಜೆ ಒಳಗೇ ಎಲ್ಲ ಅಕ್ರಮ ಚಟುವಟಿಕೆಗಳು ಬಂದ್ ಆಗಬೇಕು : ಚಿಕ್ಕಮಗಳೂರು ಎಸ್‌ಪಿ

Chikkamagaluru sp press meet

ಚಿಕ್ಕಮಗಳೂರು: ಚಿಕ್ಕಮಗಳೂರಿನ ನೂತನ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿಸುವ ಅಣ್ಣಾಮಲೈ ಅವರು ಜಿಲ್ಲೆಯಲ್ಲಿ ನಡೆಯುತ್ತಿರುವ ಮಟ್ಕಾದಂಧೆ, ಬೆಟ್ಟಿಂಗ್, ಗ್ಯಾಂಬ್ಲಿಂಗ್ ಗೆ ಸೇರಿದಂತೆ ಮುಂತಾದಾ ಕಾನುನೂ ಬಾಹಿರ ಚಟುವಟಿಕೆಗೆ ಬ್ರೇಕ್‌ ಹಾಕುವದಕ್ಕೆ ಮುಂದಾಗಿದ್ದು ಸಮಾಜಘಾತಕರ ಹೆಡೆ ಮುರಿ ಕಟ್ಟುವುದಕ್ಕೆ ಸಿದ್ದರಾಗಿದ್ದಾರೆ.

ಉಡುಪಿಯಿಂದ ಚಿಕ್ಕಮಗಳೂರಿಗೆ ವರ್ಗಾವಣೆಗೊಂಡ ಬಳಿಕ ಅಣ್ಣಾಮಲೈ ಅವರ ಮೇಲೆ ನೀರಿಕ್ಷೆಗಳು ದೊಡ್ಡದಾಗಿವೆ. ಖುದ್ದು ಗೃಹ ಸಚಿವರು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಕಾರಣ, ಗೃಹ ಸಚಿವರಿಗೆ ಯಾವುದೇ ತಲೆ ನೋವು ತರದ ಹಾಗೇ, ಎಲ್ಲರನ್ನು ಗಣನೆಗೆ ತೆಗೆದುಕೊಂಡು ಜಿಲ್ಲೆಯಲ್ಲಿ ಕಾನುನೂ ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಮಲೈವರ ಜವಾಬ್ದಾರಿ ಹೆಚ್ಚಿದೆ. ಜಿಲ್ಲೆಯಲ್ಲಿ ಅವ್ಯಾತವಾಗಿ ನಡೆಯುತ್ತಿರುವ ಮಟ್ಕಾದಂಧೆ, ಬೆಟ್ಟಿಂಗ್, ಗ್ಯಾಂಬ್ಲಿಂಗ್, ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವುದು ಸಂಪೂರ್ಣವಾಗಿ ನಿಲ್ಲಿಸಬೇಕು ಇಲ್ಲದಿದ್ದರೇ ಅಂತವರ ವಿರುದ್ದ ಕಠಿಣ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ನಾಳೆ ಸಂಜೆ ಒಳಗೇ ಎಲ್ಲ ಚಟುವಟಿಕೆಗಳು ಬಂದ್ ಆಗಬೇಕು ಇಲ್ಲದಿದ್ದರೇ ಯಾವ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದರೇ ನೇರವಾಗಿ ಪೋಲಿಸ್ ಠಾಣೆಯ ಅಧಿಕಾರಿಯನ್ನು ಅಮಾನತ್ತು ಮಾಡಲಾಗುವುದು ಎಂಬ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸಣ್ಣ ಪುಟ್ಟ ಕ್ರೈಂ ಪ್ರಕರಣಗಳನ್ನು ಬಿಡೋದಿಲ್ಲ, ಹೆಲ್ಮೆಟ್ ಕಡ್ಡಾಯವಾಗಿ ಧರಿಸಲೇ ಬೇಕು. ಸಂಚಾರ ಜಾಗೃತಿ ಮತ್ತು ಚೈನ್ ಸ್ಯ್ನಾಚಿಂಗ್ ಪ್ರಕರಣಗಳು ಇದ್ದು, ಇದಕ್ಕೆ ಸಂಪೂರ್ಣ ಬ್ರೇಕ್ ಹಾಕಲಾಗುವುದು ಎಂದು ಅವರು ಹೇಳಿದ್ದಾರೆ.

ಗೋರಕ್ಷಕರ ಹೆಸರಿನಲ್ಲಿ ಗುಂಡಾಗಿರಿ ಯಾರು ಮಾಡ್ತಾರೋ ಅಂತವರೆಲ್ಲ ಕ್ರೀಮಿನಲ್ಸ್. ಈ ಹಿಂದೇ ಅವರ ಮೇಲೆ ಇದ್ದಂತಹ ಎಲ್ಲಾ ಪ್ರಕರಣಗಳು ಮತ್ತೆ ತೆರೆದುಕೊಳ್ಳಲಿದ್ದು, ಅವರಿಗೆ ನೀಡಿರುವಂತಹ ಬೇಲ್ ರದ್ದು ಮಾಡಲಾಗುತ್ತದೆ ಎಂದು ನಕಲಿ ಗೋರಕ್ಷರಿಗೆ ಖಡಕ್ ಎಚ್ಚರಿಕೆ ನೀಡಿ ಮತ್ತೆ ತಪ್ಪು ಮಾಡದಂತೆ ಎಚ್ಚರಿಕೆ ನೀಡುತ್ತಿದ್ದಾರೆ.

ಮತ್ತೆ ಮತ್ತೆ ತಪ್ಪುಗಳನ್ನು ಮಾಡುತ್ತಿದ್ದರೇ ಅಂತವರ ಮೇಲೆ ಗೂಂಡಾ ಕಾಯ್ಡೆ ಜಾರಿ ಮಾಡಲಾಗುವುದು ಇದಕ್ಕೆ ಜಿಲ್ಲಾಧಿಕಾರಿ ಸಹಕಾರ ಅಗತ್ಯವಾಗಿದ್ದು ಚಿಕ್ಕಮಗಳೂರು ಯಾವಾಗಲೂ ಶಾಂತಿಯುತವಾಗಿರಬೇಕು. ಪ್ರತಿಯೊಬ್ಬರಿಗೂ ಹಾಲಿಡೇ ಪ್ಯಾರಡೈಸ್ ಥರಾ ಇರಬೇಕು ಎಂದು ಹೇಳಿದರು. ಪೋಲಿಸ್ ಇಲಾಖೆಯವರು ಯಾರೇ ತಪ್ಪು ಮಾಡಿದರು ಮಾಧ್ಯಮದವರು ಅದನ್ನು ಪ್ರಕಟ ಮಾಡಬೇಕು.

ಮಾಧ್ಯಮ ನಮ್ಮಗೇ ಕನ್ನಡಿ ಇದ್ದ ಹಾಗೇ ಮಾಡಿದ ತಪ್ಪು ಮಾಡದಂತೆ ಇದರಿಂದ ಅರಿಯಲು ಸಾಧ್ಯವಾಗುತ್ತದೆ. ಅಲ್ಲದೇ ಜಿಲ್ಲೆಯಲ್ಲಿ ಹೆಲ್ಮೇಟ್ ಕಡ್ಡಾಯ ಮಾಡಲಾಗುತ್ತಿದ್ದು, ಪ್ರತಿಯೊಬ್ಬ ಪೋಲಿಸ್ ಇಲಾಖೆಯ ಸಿಬ್ಬಂದಿ ಹೆಲ್ಮೆಟ್ ಧರಿಸಲೇ ಬೇಕು ಇಲ್ಲದಿದ್ದರೇ ಅಂತವರನ್ನು ಅಮಾನತು ಮಾಡಲಾಗುವುದು ಎಂಬ ಇಲಾಖೆಯ ಸಿಬ್ಬಂಧಿಗಳಿಗೂ ಎಚ್ಚರಿಕೆ ನೀಡಿದ್ದಾರೆ. ಒಟ್ಟಾರೆಯಾಗಿ ನೂತನ ಎಸ್ಪಿ ಅಣ್ಣಮಲೈ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸುವ ಎಲ್ಲ ಲಕ್ಷಣಗಳು ಕಾಣಿಸುತ್ತಿದ್ದು, ಮುಂದಿನ ದಿನಗಳಲ್ಲಿ ಯಾವ ರೀತಿ ಬದಲಾವಣೆ ಆಗಿದೆ ಎಂಬುದನ್ನು ಕಾದು ನೋಡಬೇಕಿದೆ.

ಚಿಕ್ಕಮಗಳೂರು ಇನ್ನಷ್ಟು

ಪ್ರಮುಖ ಸುದ್ದಿಗಳು

ಆತನಿಗೆ 21…ಆಕೆ 27..ಮದುವೆಯಾದ್ಮೇಲೆ ಈಗ ..!!

ಕರ್ನೂಲ್: ತನಗಿಂತ ವಯಸ್ಸಿನಲ್ಲಿ ದೊಡ್ಡವಳು,...ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ

ತುಮಕೂರು: ಚಲಿಸುವ ವಾಹನದಲ್ಲಿಯೇ ಮಾನಸಿಕ ಅಸ್ವಸ್ಥ...