Oyorooms IN

Friday, 24th February, 2017 11:18 AM

BREAKING NEWS

ಉದ್ಯೋಗ

ಬಾಗಲಕೋಟೆ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ

jobs

ಬಾಗಲಕೋಟೆ:  ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಅಧೀನ ನ್ಯಾಯಾಲಯಗಳಲ್ಲಿ ಪ್ರಸ್ತುತ ಖಾಲಿ ಇರುವ ಮತ್ತು ಹಿಂಬಾಕಿ ಉಳಿದ ಶೀಘ್ರ ಲಿಪಿಗಾರ, ಬೆರಳಚ್ಚುಗಾರ, ಆದೇಶ ಜಾರಿಕಾರರ ಮತ್ತು ಸಿಪಾಯಿ ಹುದ್ದೆ ಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಶೀಘ್ರ ಲಿಪಿಗಾರರು-11, ಬೆರಳಚ್ಚುಗಾರರು-08, ಆದೇಶ ಜಾರಿಕಾರರು-04 ಹಾಗೂ ಸಿಪಾಯಿ-08 ಹುದ್ದೆಗಳು ಖಾಲಿ ಇವೆ. ಶೀಘ್ರಲಿಪಿಗಾರರ ಹುದ್ದೆಗೆ ಅರ್ಜಿ ಸಲ್ಲಿಸುವವರು ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಕನ್ನಡ ಮತ್ತು ಆಂಗ್ಲ ಶೀಘ್ರಲಿಪಿ ಹಾಗೂ ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಬೆರಳಚ್ಚುಗಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಾಸಾಗಿದ್ದು, ಹಿರಿಯ ಕನ್ನಡ ಮತ್ತು ಆಂಗ್ಲ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.

ಆದೇಶ ಜಾರಿಕಾರರ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಪಾಸಾಗಿರಬೇಕು. ಸಿಪಾಯಿ ಹುದ್ದೆಗೆ 7ನೇ ತರಗತಿ ಪಾಸಾಗಿದ್ದು, ಕನ್ನಡ ಓದಲು ಬರೆಯಲು ಬರಬೇಕು.ಸಾಮಾನ್ಯ ವರ್ಗಕ್ಕೆ 35, ಪ್ರವರ್ಗ 2ಎ, 2ಬಿ, 3ಎ, 3ಬಿಗೆ 38 ಹಾಗೂ ಪರಿಶಿಷ್ಟ ಜಾತಿ, ಪಂಗಡ, ಪ್ರವರ್ಗ-1ಕ್ಕೆ 40 ವರ್ಷ ಮೀರಿರಬಾರದು. ಭರ್ತಿ ಮಾಡಿದ ಅರ್ಜಿಯ ಜೊತೆಗೆ ದಾಖಲಾತಿಗಳ ಸ್ವಯಂ ದೃಢೀಕೃತ ನಕಲು ಪ್ರತಿಗಳನ್ನು ಲಗತ್ತಿಸಿ ಅಕ್ಟೋಬರ 3 ರಂದು ಸಂಜೆ 5 ಗಂಟೆಯೊಳಗಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಬಾಗಲಕೋಟ ಇವರಿಗೆ ಸಲ್ಲಿಸಬೇಕು.

ಉದ್ಯೋಗ ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...