Oyorooms IN

Wednesday, 29th March, 2017 8:52 PM

BREAKING NEWS

ಪ್ರಮುಖ ಸುದ್ದಿಗಳು

ಅನೈತಿಕ ಸಂಬಂಧಕ್ಕೆ ಅಡ್ಡಿ,  ಕತೆ ಕಟ್ಟಿದ ಪತ್ನಿ

5

ರಾಯಚೂರು: ಅನೈತಿಕ ಸಂಬಂಧಗಳಿಂದ ಏನೆಲ್ಲಾ ಆಗಿವೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ಓದಿರುತ್ತೀರಿ. ಹೀಗೆ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಮಹಿಳೆಯೊಬ್ಬಳು ಕೊಲೆ ಮಾಡಿದ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ಹಟ್ಟಿ ಚಿನ್ನದ ಗಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ದಂಪತಿ ಕೂಲಿ ಕೆಲಸ ಮಾಡಿಕೊಂಡಿದ್ದು, ದಂಪತಿಯ ನಡುವೆ ದಿನ ಜಗಳವಾಗುತ್ತಿತ್ತು. ಮನೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಗೆ ಬೇರೆ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಇರುವುದನ್ನು ಗಮನಿಸಿದ್ದ ಪತಿ, ಆಕೆಗೆ ಬುದ್ಧಿ ಮಾತು ಹೇಳಿದ್ದನಾದರೂ, ಮಹಿಳೆ ನಿರ್ಲಕ್ಷ್ಯ ತೋರಿದ್ದಾಳೆ. ಗಂಡನ ಬುದ್ಧಿಮಾತು, ಜಗಳ ಜಾಸ್ತಿಯಾಗಿದ್ದರಿಂದ ಮಲಗಿದ್ದವನ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದಾಳೆ.
ದುಷ್ಕರ್ಮಿಗಳು ಕೊಲೆ ಮಾಡಿದ್ದಾಗಿ ಕಟ್ಟು ಕತೆ ಕಟ್ಟಿದ್ದಾಳೆ.

ಕೊಲೆಯಾದ ವ್ಯಕ್ತಿಯ ಸಹೋದರ ನೀಡಿದ ದೂರಿನ ಅನ್ವಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮಹಿಳೆಯ ವಿಚಾರಣೆ ನಡೆಸಿದಾಗ, ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಚಪ್ಪಲಿ ಏಟು: ದೆಹಲಿಗೆ ಕಾರಿನಲ್ಲಿ ಹೊರಟ ಗಾಯಕ್ವಾಡ್

ಉಸ್ಮಾನಬಾದ್: ಏರ್ ಇಂಡಿಯಾ ಅಧಿಕಾರಿಯನ್ನು...


ತಮ್ಮನಿಗಾಗಿ ಯಾರು ಮಾಡದ ತ್ಯಾಗ ಮಾಡಿದ ಅಕ್ಕ..!

ಆಸ್ಟ್ರೇಲಿಯಾ:ಅಕ್ಕ-ತಮ್ಮನ ಸಂಬಂಧಕ್ಕಿಂತ ಪವಿತ್ರವಾದ ಸಂಬಂಧ...


ಇನ್ನೊಂದು ಈಶಾನ್ಯ ರಾಜ್ಯದ ಮೇಲೆ ಬಿಜೆಪಿ ಕಣ್ಣು !

ನವದೆಹಲಿ: ಈಗಾಗಲೇ ಈಶಾನ್ಯ ರಾಜ್ಯಗಳಾದ...