Oyorooms IN

Wednesday, 25th January, 2017 6:48 AM

BREAKING NEWS

ದಿನ ಭವಿಷ್ಯ

ದಿನಭವಿಷ್ಯ 6 ಅಕ್ಟೋಬರ್ 2016

dina-bhavisya

ರಾಹುಕಾಲ: ಮಧ್ಯಾಹ್ನ 1:30 ರಿಂದ 3:00
ಗುಳಿಕಕಾಲ: ಬೆಳಗ್ಗೆ 9:00 ರಿಂದ 10:30
ಯಮಗಂಡಕಾಲ: ಬೆಳಗ್ಗೆ 6:00 ರಿಂದ 7:30 
ಮೇಷ: ಆರೋಗ್ಯದ ಬಗ್ಗೆ ಗಮನ ಹರಿಸಿ. ಅನಿರೀಕ್ಷಿತ ಧನಲಾಭ ದೊರೆಯುವ ಸಾಧ್ಯತೆ ಇದೆ.ನಿಮ್ಮ ವ್ಯವಹಾರಗಳಲ್ಲಿ ಸ್ನೇಹಿತರಿಂದ ನೆರವು ದೊರೆಯುತ್ತದೆ. ವಿವಾದಗಳಲ್ಲಿ ತಲೆಹಾಕಬೇಡಿ, ಅನಗತ್ಯ ತೊಂದರೆ ಎದುರಾಗಲಿವೆ.
ವೃಷಭ: ಕಳೆದ ಕೆಲ ಕಾಲಗಳಿಂದ ಭಾಧಿಸುತ್ತಿರುವ ಸಮಸ್ಯೆಗಳು ನಿವಾರಣೆಯಾಗಿ ಮಾನಸಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿ.ರಾಜಕಾರಣಿಗಳಿಗೆ ಉತ್ತಮ ಯೋಗವಿದೆ.
ಮಿಥುನ: ಎಲ್ಲರಿಗೂ ಆತ್ಮೀಯರಾಗಿ ಮತ್ತು ಉತ್ಸಾಹಕರಾಗಿರುವಂತಿರಲು ಪ್ರಯತ್ನಿಸಿ, ಒಂದು ಪ್ರಣಯದ ಸಂಜೆ ನಿಮಗೆ ಉತ್ಸಾಹ ಮತ್ತು ಆನಂದವನ್ನು ನೀಡಲಿದೆ.ನಿಗದಿತ ಅವಧಿಯಲ್ಲಿ ಕಾರ್ಯಗಳನ್ನು ಪೂರ್ಣಗೊಳಿಸಿ.
ಕರ್ಕಾಟಕ: ದಿನ ಆರಂಭವಾಗುತ್ತಿರುವಂತೆಯೇ ನಿಮ್ಮ ತೀಕ್ಷ್ಣ ಬುದ್ದಿವಂತಿಕೆ ಬೆಳಕಿಗೆ ಬರುತ್ತದೆ. ಆದಾಗ್ಯೂ, ಮೀನ ಮೇಷ ಎಣಿಸುವ ಗೊಂದಲವನ್ನು ತಪ್ಪಿಸಿ.ಹಿರಿಯರ ಆರೋಗ್ಯದ ಕಾಳಜಿ ವಹಿಸಿ.
ಸಿಂಹ: ನಿಮ್ಮ ಅಗತ್ಯ ಮತ್ತು ಇಚ್ಛೆಗಳನ್ನು ವ್ಯಕ್ತಪಡಿಸಲು ಹಾಗೂ ನಿಮಗೆ ನಿಜವಾಗಿಯೂ ಏನು ಬೇಕು ಎಂಬುದನ್ನು ಇತರರಿಗೆ ತಿಳಿಸಲು ಇದು ಸೂಕ್ತ ಸಮಯ. ನೆರೆಹೊರೆಯವರಿಂದ ನೆರವು.
ಕನ್ಯಾ: ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.ಇತರರು ನಿಮ್ಮ ಸಮಯವನ್ನು ಯಾಚಿಸುತ್ತಿರುವುದರಿಂದ ನಿಮ್ಮ ಸ್ವಂತ ಇಚ್ಛೆಗಳಿಗಾಗಿ ಕಾಯಬೇಕಾಗಬಹುದು. ಮನೆಯಲ್ಲಿ ಸಂಭ್ರಮದ ವಾತಾವರಣ.
ತುಲಾ: ನಿಮ್ಮ ಪ್ರಯತ್ನಗಳಲ್ಲಿ ಸಾವಧಾನವಾಗಿರಿ. ಕಚೇರಿಯಲ್ಲಿ ನಿಮಗೊಪ್ಪಿಸಿದ ಕೆಲಸ ಪೂರ್ಣಗೊಳಿಸಲು ನೀವು ಸ್ವಲ್ಪ ಹೆಚ್ಚು ಶ್ರಮಪಡಬೇಕಾಗಬಹುದು.ಅಗತ್ಯ ಕಾರ್ಯಗಳನ್ನು ಪೂರ್ಣಗೊಳಿಸಿ.
ವೃಶ್ಚಿಕ: ನಿಮ್ಮ ಸುತ್ತಲ ವಾತಾವರಣವು ಸಂತಸದಾಯಕವಾಗಿರುತ್ತದೆ. ಕುಟುಂಬದವರ ನೆರವು ಪ್ರಾಪ್ತವಾಗುತ್ತದೆ. ಹೊಸ ವಾಹನ ಖರೀದಿಸಲು ನೀವು ಯೋಚಿಸಬಹುದು. ಕಷ್ಟಕರ ಕಾಲದಲ್ಲಿ ಆರ್ಥಿಕ ನೆರವು.
ಧನು: ನಿಮ್ಮ ಸೃಜನಾತ್ಮಕತೆ ಮತ್ತು ಉತ್ಸಾಹಗಳ ಅಗತ್ಯವಿರುವ ಕೆಲಸಗಳಲ್ಲಿ ಯಶಸ್ಸು ಗಳಿಸುತ್ತೀರಿ. ಇಂದು ನೀವು ಸಾಹಸಿ ಮನೋಭಾವ ಹೊಂದಿರುತ್ತೀರಿ. ನಿಮ್ಮ ಪ್ರಯತ್ನ ಸಫಲವಾಗಲಿದೆ.
ಮಕರ: ನಿಮ್ಮ ಸ್ವಂತ ಕೆಲಸವನ್ನು ನೀವು ಜರೂರಾಗಿ ಮಾಡಬೇಕಾಗುತ್ತದೆ. ನಿಮ್ಮ ಯೋಚನೆಗಳ ಬಗ್ಗೆ ಇತರರಿಗೆ ತಿಳಿಸದೇ ಮುಚ್ಚಿಡುವಂತಹ ಕೆಲಸ ಮಾಡಬೇಡಿ.ವಿರೋಧಿಗಳ ಹುನ್ನಾರ ಸಫಲವಾಗುವುದಿಲ್ಲ.
ಕುಂಭ: ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುತ್ತದೆ. ಖರೀದಿ ಸಂತಸದಾಯಕವಾಗಿರುತ್ತದೆ. ಓರ್ವ ಸ್ನೇಹಿತ ದುರುದ್ದೇಶಿತನಾಗಿರುವ ಸಾಧ್ಯತೆ ಇದೆ. ಕೌಟಂಬಿಕ ಕಲಹ ಅಂತ್ಯವಾಗಲಿದೆ.
ಮೀನ: ಮಹಿಳೆಯರೊಂದಿಗೆ ಮಾತನಾಡುವಾಗ ಎಚ್ಚರವಿರಲಿ. ಖಾಸಗಿ ಸಂಸ್ಥೆಗಳ ಉದ್ಯೋಗಿಗಳಿಗೆ ಬಡ್ತಿ ದೊರೆಯಲಿದೆ. ವಿದೇಶಿ ವಸ್ತುಗಳ ಖರೀದಿಗೆ ಸಿದ್ದತೆ.ದೂರದ ಸಂಬಂಧಿಗಳಿಂದ ನೆರವು.

ದಿನ ಭವಿಷ್ಯ ಇನ್ನಷ್ಟು

ಪ್ರಮುಖ ಸುದ್ದಿಗಳು