Oyorooms IN

Saturday, 22nd July, 2017 4:26 PM

BREAKING NEWS

ರಾಜ್ಯ

ಚಿಲ್ಲರೆಗಾಗಿ ಪರದಾಡಿದ ಪುಸ್ತಕದ ವ್ಯಾಪಾರಿಗಳು, ಸಮ್ಮೇಳನದಲ್ಲಿಯೂ ನೋಟಿನ ಬವಣೆ

ರಾಯಚೂರು: ನೋಟಿ ಮೇಲಿನ ನಿಷೇಧದ ಬಿಸಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮೇಲೂ ಬಿದ್ದಿದ್ದು, ಪುಸ್ತಕ ಕೊಳ್ಳಲು ಬರುವ ಗ್ರಾಹಕರಿಗೆ ಚಿಲ್ಲರೆ ಹಣವನ್ನು ನೀಡಲು ಸಾಧ್ಯವಾಗದೆ, ಪುಸ್ತಕ ಮಳಿಗೆಗಳು ಸಮಸ್ಯೆಗಳನ್ನು ಎದುರಿಸಿದ್ದಾರೆ.

ರಾಯಚೂರಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ 400ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳನ್ನು ತೆರೆಯಲಾಗಿದೆ. ಪುಸ್ತಕ ಮಳಿಗೆಗಳಿಗೆ ಬರುವ ಗ್ರಾಹಕರು ತಮಗಿಷ್ಟವಾದ ಲೇಖಕರು ಬರೆದಿರುವ ಪುಸ್ಕಕಗಳನ್ನು ಆಯ್ಕೆ ಮಾಡಿಕೊಂಡು ಪುಸ್ತಕ ಖರೀದಿಸಲು ಮುಂದಾಗುತ್ತಿದ್ದಾರೆ. ಆದರೆ, ಪುಸ್ತಕ ಖರೀದಿ ಮಾಡಲು ಗ್ರಾಹಕರು ಹಾಗೂ ಮಾರಾಟಗಾರರ ಮಧ್ಯೆ ಚಿಲ್ಲರೆಗಳ ಸಮಸ್ಯೆಗಳು ಎದುರಾಗಿದೆ.

book-sell

ಮಳಿಗೆಗಳಿಗೆ ಬರುವ ಬಹುತೇಕ ಗ್ರಾಹಕರು ರು.2000 ಹಾಗೂ 500 ನೋಟುಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಚಿಲ್ಲರೆ ಸಮಸ್ಯೆ ಎದುರಾಗಿದೆ. ಮಳಿಗೆಗಳಿಗೆ ಬರುವ ಸಾಕಷ್ಟು ಗ್ರಾಹಕರು ರು.200 ಪುಸ್ತಕಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ, ರು.2,000 ನೋಟನ್ನು ಕೈಗೆ ಕೊಡುತ್ತಾರೆ. ಇದರಿಂದ ಚಿಲ್ಲರೆ ಸಮಸ್ಯೆಯುಂಟಾಗುತ್ತಿದೆ ಎಂದು ಪುಸ್ತಕ ಮಳಿಗೆಯ ಮಾಲೀಕರು  ಹೇಳುತ್ತಾರೆ.

ಮಳಿಗೆಗೆ ಬರುವ ಗ್ರಾಹಕ ಖರೀದಿಸಲು ಪುಸ್ತಕವೊಂದನ್ನು ಆಯ್ಕೆ ಮಾಡುತ್ತಾನೆ. ಕೊಳ್ಳುವ ವೇಳೆ ನಮ್ಮ ಬಳಿ ಚಿಲ್ಲರೆ ಎಂದರೆ ಗ್ರಾಹಕರ ಬೇಸರ ವ್ಯಕ್ತಪಡಿಸುತ್ತಾರೆ. ಚಿಲ್ಲರೆ ಇಲ್ಲ ಎಂದಾಗ ಸಾಕಷ್ಟು ಗ್ರಾಹಕರು ಪುಸ್ತಕ ಖರೀದಿಸುವುದನ್ನು ಬಿಟ್ಟು ಮಳಿಗೆಯನ್ನು ತೊರೆಯುತ್ತಾರೆ. ಇನ್ನು ಕೆಲವರು ಚಿಲ್ಲರೆಯನ್ನು ತಂದುಕೊಟ್ಟು ಪುಸ್ತಕವನ್ನು ಖರೀದಿಸುತ್ತಾರೆ. ಇದು ಪುಸ್ತಕಗಳ ಮೇಲೆ ಅವರಿಗಿರುವ ಆಸಕ್ತಿಯನ್ನು ತೋರಿಸುತ್ತದೆ ಎಂದು ಪುಸ್ತಕ ಮಳಿಗೆಗಳ ಮಾಲೀಕರು ಹೇಳುತ್ತಾರೆ.

English summary: demonetization effect on sahitya smammelana

ರಾಜ್ಯ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...