Oyorooms IN

Saturday, 22nd July, 2017 4:27 PM

BREAKING NEWS

ಕಲಬುರಗಿ

ಚಿತ್ತಾಪುರ ತಾಲೂಕಿನ ಟೆಂಗಳಿ 5 ಜನರಿಗೆ ಡೇಂಗ್ಯು ಆತಂಕದಲ್ಲಿ ಜನ

23

ಕಲಬುರಗಿ: ಗ್ರಾಮದಲ್ಲಿ 5 ಜನರಿಗೆ ಡೆಂಗ್ಯುವಾಗಿ ಸಾವಿನ ಕದ ತಟ್ಟಿ ಮರಳಿ ಬಂದಂತಾದ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಟೆಂಗಳಿಯಲ್ಲಿ ನಡೆದಿದೆ.

ಗ್ರಾಮದಲ್ಲಿ ಕಳೆದ ಒಂದು ತಿಂಗಳಲ್ಲಿ ೫ ಡೆಂಗ್ಯು ಪ್ರಕರಣಗಳು ಕಾಣಿಸಿಕೊಂಡಿದ್ದು ತಡವಾಗಿ ಬೆಳಕಿಗೆ ಬಂದಿದೆ. ಈ ವಿಷಯ ಗ್ರಾಮದಲ್ಲಿ ಹರಡುತ್ತಲೇ ಗ್ರಾಮದ ಜನ ಭಯಭೀತರಾಗಿದ್ದಾರೆ. ಕಾರಣ ಈ ಹಿಂದೆ ಡೇಂಗ್ಯುವಿನಿಂದ ನಾಲ್ಕೈದು ಜನ ಸಾವಿಗಿಡಾಗಿದ್ದರು. ಹೀಗಾಗಿ ಜನರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

ಗ್ರಾ.ಪಂ ಸದಸ್ಯ ವೀರಭದ್ರಯ್ಯ ಸಾಲಿಮಠ ಅವರ ಧರ್ಮಪತ್ನಿಗೆ, ಮಗನಿಗೆ ಮತ್ತು ಸೊಸೆ ಸೇರಿದಂತೆ ಕುಟುಂಬದಲ್ಲಿ ಒಟ್ಟು ೩ ಜನರಿಗೆ ಡೇಂಗ್ಯು ಆಗಿದ್ದು, ಅಲ್ಲದೆ ಗ್ರಾಮದ ಇನ್ನು ಇಬ್ಬರಿಗೆ ಡೇಂಗ್ಯು ಆಗಿದೆ ಎಂದು ತಿಳಿದುಬಂದಿದೆ. ಕಲಬುರಗಿ, ಸೋಲಾಪುರ ಆಸ್ಪತ್ರೆಗಳಿಗೆ ತೆರಳಿ ಲಕ್ಷಾಂತರ ರು.ಗಳ ಖರ್ಚು ಮಾಡಿ ಜೀವ ಉಳಿಸಿಕೊಂಡು ಬಂದಿದ್ದಾರೆ. ಇಷ್ಟಾದರೂ ಗ್ರಾಮದಲ್ಲಿ ಆರೋಗ್ಯ ಇಲಾಖೆ ಯಾವದೆ ಕ್ರಮ ಕೈಗೊಳ್ಳದೆ ಇರುವದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಮೊದಲೆ ಪ್ರವಾಹ ಪೀಡಿತ ಪ್ರದೇಶವಾದ ಟೆಂಗಳಿ, ಪ್ರವಾಹ ಬಂದು ಒಂದು ತಿಂಗಳಾಯಿತು ಆದರೆ ಆರೋಗ್ಯ ಇಲಾಖೆಯಿಂದ ಯಾವದೆ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ಇರುವದು ಇಲಾಖೆಯ ಬೇಜವಾಬ್ದಾರಿ ಎತ್ತಿ ತೋರಿಸುತ್ತದೆ. ವೈದ್ಯಾಧಿಕಾರಿ ನಿರ್ಲಕ್ಷದಿಂದ ಗ್ರಾಮದಲ್ಲಿನ ರೋಗಿಗಳು ಚಿಕಿತ್ಸೆಗಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಸುಮಾರು 8 ಸಾವಿರ ಜನಸಂಖ್ಯೆ ಹೊಂದಿರುವ ಟೆಂಗಳಿ ಗ್ರಾಮದಲ್ಲಿ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ. ಹೀಗಾಗಿ ಸಣ್ಣ ಕಾಯಿಲೆ ಬಂದರು ಇಲ್ಲಿನ ಜನರು ಭಯಪಡುವಂತಾಗಿದೆ.

24

ವೈದ್ಯರ ಗೈರು ಹಾಜರಿ: ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರು ಇಲ್ಲದಂತಾಗಿದೆ, ವೈದ್ಯರು ವಾರಕ್ಕೆ ಕೇವಲ ಎರಡು ಬಾರಿ ಬಂದು ಹೋಗುತ್ತಾರೆ, ಆದರೆ ಹಾಜರಿ ಪುಸ್ತಕದಲ್ಲಿ ದಿನಾಲು ಸಹಿ ಮಾಡಿರುತ್ತಾರೆ. ವೈದ್ಯಾಧಿಕಾರಿಗಳ ಇನ್ನೊಂದು ವಿಶೇಷವೆಂದರೆ ಇವತ್ತು ಆಸ್ಪತ್ರೆಗೆ ಬಂದರೆ ನಾಳೆ, ನಾಡಿದ್ದಿನ ಸಹಿ ಹಾಜರಿ ಪುಸ್ತಕದಲ್ಲಿ ಮಾಡಿ ಹೋಗುತ್ತಾರೆ. ವೈದ್ಯಾಧಿಕಾರಿ ಗೈರಾದ ಸಂದರ್ಭದಲ್ಲಿ ಡಿಎಚ್‌ಓ, ಟಿಎಚ್‌ಓ ಮತ್ತು ಇನ್ನು ಇಲಾಖೆಯ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದಾಗ ಮುಂದಿನ ದಿನಗಳ ಸಹಿ ಮಾಡಿರುವದು ನೋಡಿದ್ದಾರೆ ಆದರೆ ಯಾವದೆ ಕ್ರಮ ಕೈಗೊಳ್ಳದೆ ಇರುವದು ನೋಡಿದರೆ, ಇಲಾಖೆ ಹಿರಿಯ ಅಧಿಕಾರಿಗಳ ಕೃಪಕಟಾಕ್ಷ ಟೆಂಗಳಿ ವೈದ್ಯಾಧಿಕಾರಿ ಮೇಲಿದೆ ಅನಿಸುತ್ತದೆ. ಹೀಗಾಗಿಯೇ ಅವರು ವಾರಕ್ಕೆ ಎರಡು ಬಾರಿ ಮಾತ್ರ ಆಸ್ಪತ್ರೆಗೆ ಬರುತ್ತಾರೆ ಹಾಗೂ ಮುಂದಿನ ಸಹಿ ಕೂಡಾ ಮಾಡುತ್ತಾರೆ.

ಪಕ್ಷದ ವ್ಯಾಮೋಹಕ್ಕೆ ಮಣಿದು ಡಾ. ಜಾಧವ್ ಸೈಲೆಂಟ್ :  ಇಲ್ಲಿನ ವೈದ್ಯಾಧಿಕಾರಿ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಅಳಿಯರಾದ್ದರಿಂದ ಶಾಸಕ ಡಾ. ಉಮೇಶ ಜಾಧವ ವೈದ್ಯಾಧಿಕಾರಿ ಬೇಜವಾಬ್ದಾರಿತನ, ಗೈರು ಹಾಜರಿ ಒಟ್ಟಾರೆಯಾಗಿ ವೈದ್ಯರ ಕಾರ್ಯ ವೈಖರಿ ಬಗ್ಗೆ ತಿಳಿದ್ದರು ಕೂಡಾ ಏನು ತಿಳಿಯದ ಹಾಗೆ ಸೈಲೆಂಟ್ ಆಗಿದ್ದಾರೆ ಎಂದು ಜನರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

25

ಆಸ್ಪತ್ರೆಯ ಸಿಬ್ಬಂದಿ ಬೇಜವಾಬ್ದಾರಿ:  ಆಸ್ಪತ್ರೆಗೆ ಟೆಂಗಳಿ, ತೊನಸಳ್ಳಿ(ಟಿ), ಅರಜಂಬಗಾ, ಇವಣಿ, ಕೆಡಿ ಹಳ್ಳಿ, ಒಟ್ಟು ೮ ಗ್ರಾಮದ ರೋಗಿಗಳು ಟೆಂಗಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ, ಆದರೆ ಬರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಆಸ್ಪತ್ರೆಯಲ್ಲಿ ವೈದ್ಯರೇ ಇರುವದಿಲ್ಲ ಹೀಗಾಗಿ ಸ್ಟಾಫ್ ನರ್ಸ್ ರೋಗಿಗಳ ಪಾಲಿನ ವೈದ್ಯರು, ಸಿಬ್ಬಂದಿ ಬೇಜವಾಬ್ದಾರಿಯಿಂದ ಸಣ್ಣ ರೋಗಗಳು ದೊಡ್ಡದಾಗುತ್ತಿವೆ. ಚಿಕಿತ್ಸೆಗೆ ಒತ್ತಾಯ ಮಾಡಿದರೆ ಡಾಕ್ಟರ್ ಇಲ್ಲ ಅವರು ಬಂದ ಮೇಲೆ ಬನ್ನಿ ಎಂಬ ಉತ್ತರ ಸಿಬ್ಬಂದಿಯಿಂದ ಬರುತ್ತಿದೆ.

ಗ್ರಾಮದಲ್ಲಿ ಡೇಂಗ್ಯು ಬಗ್ಗೆ ಇಷ್ಟೊಂದು ಭಯದ ವಾತಾವರಣ ನಿರ್ಮಾಣವಾದರೂ ಕೂಡಾ ಆರೋಗ್ಯ ಇಲಾಖೆಯಾಗಲಿ, ವೈದ್ಯಾಧಿಕಾರಿಗಳಾಗಲಿ ಯಾವದೆ ಕ್ರಮಕೈಗೊಳ್ಳದೆ ಇರುವದು ವಿಷಾದನೀಯ ಸಂಗತಿಯಾಗಿದೆ.

ಗ್ರಾಮದಲ್ಲಿ ಆಸ್ಪತ್ರೆ ಇದ್ದು ಇಲ್ಲದಂತಾಗಿದೆ, ನನ್ನ ಹೆಂಡತಿ, ಮಗನಿಗೆ ಜ್ವರ ಬಂದಾಗ ಆಸ್ಪತ್ರೆಗೆ ಹೋದರೆ ಯಾವದೆ ಚಿಕಿತ್ಸೆ ನೀಡಿಲ್ಲ, ರಕ್ತ ಪರೀಕ್ಷೆ ಮಾಡದೆ ಹಾಗೆ ಮಾಮೂಲಿ ಜ್ವರಕ್ಕೆ ನೀಡುವ ಮಾತ್ರೆ ನೀಡಿ ಕಳುಹಿಸಿದ್ದಾರೆ. ಆದರಿಂದ ರೋಗಕ್ಕೆ ಸೂಕ್ತ ಚಿಕಿತ್ಸೆ ಸಿಗದ ಕಾರಣ ರೋಗ ಉಲ್ಬಣವಾಗಿ ನನ್ನ ಪತ್ನಿ ಸಾಯುವಂತ ಸ್ಥಿತಿಗೆ ಬಂದಿದ್ದರು, ಕಲಬುರಗಿಯಲ್ಲಿ ಲಕ್ಷಾಂತರ ರು.ಗಳ ವೆಚ್ಚ ಮಾಡಿ ಚಿಕಿತ್ಸೆ ಕೊಡಿಸಿ ಪತ್ನಿಯನ್ನ ಬದುಕಿಸಿಕೊಂಡಿದ್ದೆನೆ. ಜನಪ್ರತಿನಿಧಿಗಳ ಕುಟುಂಬದ ವರನ್ನೆ ಇಷ್ಟೊಂದು ನಿರ್ಲಕ್ಷ ಕಾಣುವ ಆಸ್ಪತ್ರೆಯಲ್ಲಿ, ಜನ ಸಾಮಾನ್ಯರ ಗತಿಯೇನು. ಕೂಡಲೇ ವೈದ್ಯಾಧಿಕಾರಿಯನ್ನು ಬದಲಾಯಿಸಬೇಕು ಎಂದರು.
– ವೀರಭದ್ರಯ್ಯ ಸಾಲಿಮಠ, ಗ್ರಾಮ ಪಂಚಾಯತ ಸದಸ್ಯ.

 ಗ್ರಾಮದ ಎಲ್ಲಾ ಚರಂಡಿಗಳನ್ನು ಹಾಗೂ ಗ್ರಾಮದಲ್ಲಿನ ಘನ ತ್ರ್ಯಾಜ್ಯ ವಸ್ತುಗಳನ್ನು ಸ್ವಚ್ಚಗೊಳಿಸಲಾಗಿದೆ. ಗ್ರಾಮದಲ್ಲಿ ಬ್ಲೀಚಿಂಗ್ ಪೌಡರ್ ಹಾಕಲಾಗಿದೆ. ಗ್ರಾಮ ಪಂಚಾಯತ ವತಿಯಿಂದ ಮಾಡುವ ಕಾರ್ಯಗಳು ಎಲ್ಲಾ ಮಾಡಿದ್ದೆವೆ. ವೈದ್ಯಾಧಿಕಾರಿಯಿಂದ ಹೆಚ್ಚಿನ ಸೌಲಭ್ಯಕ್ಕಾಗಿ ಯಾವದೆ ಮನವಿ ಬಂದಿಲ.
– ಗುರುನಾಥರೆಡ್ಡಿ ಪಿಡಿಓ ಟೆಂಗಳಿ.

ಕಲಬುರಗಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...